Nov 25, 2013

ಪಾರ್ಥೇನಿಯಂ  ಸಾಮ್ರಾಜ್ಯ 


ಹೊಸ ಬದುಕ ಹೊಸ್ತಿಲಿಗೆ

ಕಾಲಿಡಲು ಕಾದಿತ್ತು

ಸವಿಗನಸುಗಳ ಹೊತ್ತು

ಸುತ್ತಲೂ ನೆರೆದಿದ್ದು 

ಪಾರ್ಥೇನಿಯಂ ಎಂದರಿಯಲು

ಹಿಡಿಯಲಿಲ್ಲ ಬಹಳ ಹೊತ್ತು ,

ಕಾಲ ಮಿಂಚಿತ್ತು ,

ಮಾಡಲೇ ನಿತ್ತು .... ?

ಮೌನದಲೇ ಮುಂದಡಿ ಇಟ್ಟಿತ್ತು

ಆತಂಕಗಳ ಹೊತ್ತು....  

ಪಾರ್ಥೇನಿಯಂ ಬಿಡುವುದೇ 

ಹೂ ಬಳ್ಳಿ  ಚಿಗುರಲು  

ಮಲ್ಲೇ ಹೂ ಅರಳಲು.....!!!!!??
 

Aug 20, 2013

ಚಿಗುರದ  ಒನಕೆ


ಹಲವು ಹಿರಿತನ ಮರವಾದಂತೆ,
ನೆರಳ ಕಡೆಗಣಿಸಿ
ಕಿರಿತನದ ಅನಾದರಕೆ
ಸೋತು ಸೊರಗಿ
ಅಜ್ಞಾನಕೆ ಮರುಗಿ
ದುರಾಸೆಗೆ ಕೊರಗಿ
ಕೊರಡಾಗಿ
ಚಿಗುರದ ಒನಕೆಗಳಿಗಾಗಿ
ಪರಿತಪಿಸುತ
ಅಜ್ಞಾನದ ತೆರೆ ಸರಿಸಲು
ಹೊಂದಿಕೆಯ ಕೈಯ್ಯಾಡಿಸಲು
ಕೈಯ್ಯನ್ನೇ ಕತ್ತರಿಸಿ
ಹರಿವ ನೆತ್ತರನು, ನೋವನು  
ಅರಿಯದಂತೆ  ಸರಿದು

ಕೈ ಆಡಿಸಿದಂತೆ
ಕುಣಿವ ಒನಕೆಗಳೇ
ಮರದ ಒಂದೊಂದು ಕೊಂಬೆ
ನೀವೆಂದು ಮರೆವುದೇಕೋ .......???

ಹಲವು ಹಿರಿಮರಕೆ 
ಕೊಂಬೆಗಳೆಲ್ಲ ನನ್ನವೇ.... 
ಎಂಬ ಅರಿವಿದ್ದೂ
ಹಲವನು 
ಬರಡಾಗಿಸುವ ಹೆಬ್ಬಯಕೆಗೆ
ಬಲಿಯಾಗಿ
ಬಾಡುವ ಭಯಕೆ
ಹಲವು ಕೊಂಬೆ.. 
 ಬೇರ್ಪಟ್ಟು 
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ 
ತನ್ನ ಮರವೇ
ಕೊಡಲಿಕಾವಾಗಿ 
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಮರಕೇಕೆ ತನ್ನ ಸಸಿತನದ
ಮರೆವೋ....!!!  ಅರಿಯದು...       

Aug 7, 2013

ಒಂದು ಕೊಂಡರೆ ,ಒಂದು ಉಚಿತ 

ಆಸೆಗಳ ರಾಶಿಯಲ್ಲಿ ಸಿಕ್ಕಿದ್ದೆಷ್ಟೋ 

ಹೆಕ್ಕಿದ್ದು ಎಷ್ಟೋ ದಕ್ಕಿದ್ದು ಎಷ್ಟೋ

ದಕ್ಕದ್ದು ಎಷ್ಟೋ ದಕ್ಕಿದ್ದು ಅನುಭವಿಸಿದ್ದೆಷ್ಟೋ

ಅನುಭವಿಸಲಾಗದ್ದೆಷ್ಟೋ

ದಕ್ಕಿದ್ದರಲ್ಲಿ ನೋವೆಷ್ಟೋ ನಲಿವೆಷ್ಟೋ

ಅಂತರ್ಗಗತವಾದದ್ದೆಷ್ಟೋ

ಅನಾವರಣಗೊಂಡದ್ದೆಷ್ಟೋ

ದೃಶ್ಯವೆಷ್ಟೋ ಅದೃಷ್ಯವೆಷ್ಟೋ

ಸಿಕ್ಕಿದ್ದು  ,ದಕ್ಕಿ,

ಅನುಭವಕ್ಕೆ ಸಿಕ್ಕಿ, ಆನಂದಿಸಿದ್ದಷ್ಟಕ್ಕೆ

ಸಂತೃಪ್ತಿಯಿಂದಿದ್ದರೆ ,

ನೆಮ್ಮದಿ ಖಚಿತ,!!!!!!!!
ಆರೋಗ್ಯ ಉಚಿತ!!!!!!!!!!!!!