Nov 14, 2015

ಹಾಸನಾಂಬಾ ಮಹೋತ್ಸವದಲ್ಲಿ ಭಕ್ತಿ ಸಂಗೀತ ಸೇವೆಯ ಸುಯೋಗ. 
 "ಕಾಣುತಿಹವು ಕಂಗಳು ಹಾಸನಾಂಬೆಯಾ ರೂಪ
ನಸುನಗುತಾ ಕುಳಿತಿಹಳು  ಕಳೆಯಲು ಭವದಾತಾಪ
ಮಾತೆ ಮನದ ತುಂಬಾ  ಪ್ರೇಮ ಸುಧೆಯ ತುಂಬಿ
ಸೆಳೆಯುತಿಹಳು ವರುಷಕೊಮ್ಮೆ ಭಕ್ತರಾ
ಪರಮ ಪ್ರೇಮದಿಂದ  ಪರಮ ಸ್ನೇಹದಿಂದಾ"
 
"ಬಂತೂ ದೀಪಾವಳಿ ದೇವೀ ರೂಪವ ತಾಳೀ"  
ಈ  ಎರಡು ಸ್ವರಚಿತ  ದೇವಿ  ಗೀತೆಗಳನ್ನೂ ಹಾಡುವ  ಸದಾವಕಾಷಕ್ಕಾಗಿ ಸಂತೋಷವಾಯಿತು. 

Nov 8, 2015

ಸಮಸ್ತ ಜನತೆಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Oct 31, 2015

 
 
ಹೀಗೊಂದು ಸವಿನೆನಪಿ ನೊಂದಿಗೆ ತಮ್ಮೆಲ್ಲರಿಗೂ 
 ಕನ್ನಡ ರಾಜ್ಯೋತ್ಸವದ ಶುಭಾಶಯಗಳು 
 
 
 ರಾಷ್ಟ್ರ ಸೇವಿಕ ಸಂಘದಿಂದ ಆಯೋಜಿಸಲಾಗಿದ್ದ ೧೫ ದಿನಗಳ ಶಿಬಿರದಲ್ಲಿ ಪ್ರಭಂದಕಿಯಾಗಿ ಸೇವೆಯಲ್ಲಿದ್ದ ಸಂದರ್ಭದಲ್ಲಿ, "ಜಯಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೇ,ಜೋಗದಸಿರಿ ಬೆಳಕಿನಲ್ಲಿ",ಗೀತೆಯನ್ನುನುಡಿಸುವ ಸದವಕಾಶ


Oct 10, 2015

ಇರು ನೀ ಗಂಗೆ ಹಾಂಗ 

ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ
ಹಾಂ ಎಂದೊಡೇ
ಹಾವಾಗಿ ಕಚ್ಚುವನು ಎಚ್ಚರ
ಹಮ್ಮಿನ ಅಹಂಮ್ಮಿನ 
ಶೃಂಖಲೆಯ ಶೃಂಗದೇ
ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,  
ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ
ಕೀವು ರಕ್ತ ಸೋರಿ
ರಣವಾಗಿ ನೊಂದು ಬೆಂದು
ಹಾರಾಡಿ ನೆಕ್ಕಲು ಕೂರುವ
ನೊಣಕೆ ನಿರ್ಲಿಪ್ತೆ,  
"ನಾ... ನಿರದ ನೀನು"
ಸೈರಣೆಯ  ವಿತರಣೆ 
ಸರ್ವದರ್ಪಕೂ
ನುಡಿಯ ಮಿಡಿಯೆ 
ಮರಣ ಮೃದಂಗ,
ಮೌನತರಂಗ  ಗಂಗಾ ತರಂಗ  
 
 
 

Aug 29, 2015ಸೂಜಿಮೇಲೆ

ಮಮತೆ ಪ್ರೀತಿ ವಾತ್ಸಲ್ಯದ
ಸಂಭ್ರಮಕೆ ಕಟ್ಟುವರು
ನಟನೆಯ  ಪಟ್ಟ
ನಿಂದೆಗೆ ಅಂಜಿ ಹಿಂಜರಿದಾಗ
ಮುಟ್ಟಿಸುವರು
ಜನಸೇರದವರ ಮಟ್ಟ

ಬೆರೆತಾಗ

ಸೊಸೆಯ ಗಂಡ ಆಗಿದ್ದನು
ಅಕ್ಕರೆ, ಅಮ್ಮನಿಗೆ ಅಂದು. 
ಸೊಸೆಯ ಸಕ್ಕರೆಯ ಮುಂದೆ
ಅಮ್ಮನ  ಅಕ್ಕರೆಯ ಮಗ 
ಮಕರ ವಾಗಿದ್ದಾನೆ  ಇಂದು
ಅಕ್ಕರೆ ಸಕ್ಕರೆ ಬೆರೆಯೇ ಆಗನೇ
ಮುದ್ದುಮಗ ಮಧುಮಗ ಎಂದೆಂದೂ

ಪ್ರವಾದಿ

ಹೆಂಡತಿಯ ನಟನೇ ಹೆತ್ತವಳ
ರುದ್ರ ನರ್ತನಕೆ ಬುನಾದಿ
ಹೆತ್ತವಳ ನಟನೇ ಹೆಂಡತಿಯ
ರುದ್ರ ನರ್ತನಕೆ ಬುನಾದಿ
ನಟನೆ ನರ್ತನಗಳ ನಡುವೆ
ನರಳುತಾ ಆಗುವನು ಪ್ರವಾದಿAug 14, 2015

ಸಿಂಬಿಯಾದವರು
ಮೆಟ್ಟಿಲೇರುತ್ತಿರುವವರ ಮೇಲೆಲ್ಲಾ
ಒಂದೊಂದು ಗೂಬೆಗಳ ಹೊರಿಸಿ
ಎಲ್ಲರಿಂದಲೂ ನಂಬಿಕೆಯ ದೂರವಿರಿಸಿ
ಗೂಬೆಗಳ ಹೊತ್ತವರ ತಾ ಹೊಕ್ಕು
ಕೆಕ್ಕರಿಸಿ ನೋಡುವಂತಿರಿಸಿ
ನಂಬಿಕೆಯನೇ ಬೆಪ್ಪಾಗಿಸಿ
ದೂರೀಕರಿಸಿದವರ ಒಳಸರಿದು
ಪಾಪದವನ ಪರಕೀಯ ನೆಂದೆನಿಸಿ
ಸಭೆಯಲಿ ಸಭ್ಯತನವನು ಮೆರೆವ  
ನಾಜೋಕೇ ... ನೀ .. ಜೋಕೇ ... !
ಬಣ್ಣ ಬಯಲಾಗಿದೀತು  ಒಮ್ಮೆ  
ಗೋಸುಂಬೆ ಎಂದರಿವ  
ಸಮಯವೂ ದೂರವಿಲ್ಲ. 
ಇಲ್ಲಾ ...,ಬಣ್ಣ ಬಯಲಾಗಿತ್ತು  ಒಮ್ಮೆ ,
ಗೋಸುಂಬೆ ಎಂಬುದೂ
ವೇದ್ಯವಾಗಿತ್ತಾದರೂ 
ಸಾಮ್ರಾಜ್ಯ  ಸ್ತಾಪಿಸಿಯಾಗಿದೆಯಲ್ಲ ,
ಸಾಮ್ರಾಟನ ಎದುರು
ಸಣ್ಣವರಾಗುವ ಬದಲು
ಗೆದ್ದೆತ್ತಿನ ಬಾಲ ಹಿಡಿದೆತ್ತಿ,
ಬಣ್ಣ ಪರದೆ ಇರದೇ ಮೇರುನಟರಾಗಿ
ಮೆರೆದಾಡುವರು ಕೂಟದಲಿ
ಗೂಬೆಗಳ ಹೊತ್ತವರು ,ಸ್ವಂತಿಕೆ ಸತ್ತವರು 
ಗೋಸುಂಬೆಗೇ ಸಿಂಬಿಯಾದವರು 

May 7, 2015

ನಿನ್ನನೀ.. ಗೆಲ್ಲು..!!!


ಎಲ್ಲವನು ಬಲ್ಲವನು
ಎಂದೆಣಿಸಿ ಬೀಗುತ
ತಾಮಸ ಗುಣಗಳ
ಗೆಲ್ಲುವಲಿ ಸೋಲುತ
ಬಿದ್ದರೂ ಮೀಸೆ
ಮಣ್ಣಾಗದ ಪರಿ
ಪರಿಹಾಸ್ಯಕೆ ದಾರಿ 
ಮೊದಲು ಹಿಡಿ
ನಿನ್ನನೀ ಗೆಲ್ಲುವ ಗುರಿ
 
ನರ..ನರಿಯಾದಾಗ 


ಮರಹತ್ತಿಸಿ ಬುಡ ಕತ್ತರಿಸಿ
ಕಾಣದಂತಿದ್ದರೂ
ಬಿದ್ದಲ್ಲೇ ಬೇರ್ಬಿಟ್ಟು
ಚಿಗುರೊಡೆದು ನಗುವಾಗ
ಕಡಿದುಬಿದ್ದ ಕೊಂಬೆ 
ಕೊನರಿ ಎದ್ದು  ಬೆಳೆವಾಗ

ಪೊಳ್ಳು ಭರವಸೆಯ ಮೂರ್ಖ 
ನರಿಯಲ್ಲದೆ ನರನೇ..??

May 4, 2015


ನೀನೊಂದು ನಗುವ ಹೂವಾದೆಯಲ್ಲಾ  

ಓ ಹೂವೇ ನೀನೊಂದು ಅಂದದ ಹೂ
ಅಂತರಂಗದಲಡಗಿದೆ
ಯಾರರಿಯದ ನೋವು
ಕೊಂಬೆರೆಂಬೆ ಕಣಕಣವು ಮುಳ್ಳು

ಅದಲೆಕ್ಕಿಸದೆ ನೀನಿಂದು ಅರಳಿ 
ಘಮಘಮಿಸುತಿಹೇ ಪರಿಮಳ ಬೀರುತಿಹೆ
ಪ್ರಕೃತಿಯ ಸೊಬಗ ಇಮ್ಮಡಿಸುತಿಹೆ
ನೋವ ಮರೆತು ಅರಳಿ ನಗುತಲಿರುವೆ,

ನಿನ್ನ ಹಿರಿಮೆಗೆ ಹಿಗ್ಗುವರಿಲ್ಲ,
ಇದ್ದುದೊಂದು ಮನ ಇಂದಿಲ್ಲ,
ಮೋಡದಲಿ ಮಿನುಗುವ ತಾರೆಯಗಿದೆಯಲ್ಲ,
ಆ ಹಿಗ್ಗಿನ ನೆನಪೇ ಒಂದುತ್ತೇಜಕವೆಲ್ಲ

ಒಂದೊಂದೇಳ್ಗೆಯ ಹಿಂದೆಯೂ 
ಆ ಹಿಗ್ಗಿನ ನೆನಪೇ ಕಂಬನಿಯ 
ಹೊಳೆಯಾಗಿ ಹರಿಯುತಿದೆಯಲ್ಲ 
ಮೈ ತುಂಬಿ  ನೋವು ಮೊಗತುಂಬಿ ನಗುವು 

ನಿನ್ನಳಲು ನಿನ್ನನ್ನೇ ಬಾಡಿಸಿ 
ಬಸವಳಿಸುತಿದೆಯಲ್ಲ ಅದರಲೇ 
ನಗುನಗುತಾ ಚಿತ್ತಾರ ಹಾಡಿರುವೆ,
ಮುದ ನೀಡುತಿರುವೆ. 

ಬಾಡುತಿಹ ಹೂಗೆ ಮಳೆ ಹನಿದಂತೆ  
ತಾರೆ ಮಿನುಗಿ ಮರೆಯಾಗುತಿದೆ
ಆ ನೋವಲೇ ನಗುನಗುತಾ 
ಅಂತ್ಯವಾಹ್ವಾನಿಸುತಿರುವೆ,

ಶಿವನ ಪಾದದಡಿ ಸೇರಲು ಅನುವಾಗುತಿರುವೆ 
ಭವ್ಯ ಭವಿತವ್ಯಕ್ಕೂ  ಮೊಗಮಾಡಿ ನಿಂತರೂ
ಭೂತದಂದದಿ  ಕಾಡಿ ಇರಿಯುತಿದೆಯಲ್ಲ 

ನೆರಳು ಬಿಸಿಲಾಟದಲಿ  ನಲುಗುತಿಹ ಹೂವೇ 
ನೋಡಲು ನೀನೊಂದು ನಗುವ ಹೂವಾದೆಯಲ್ಲಾ   

Mar 13, 2015

ನಿಸ್ವಾರ್ಥ ಅಮಂಗಲವೇ ...?

ಸಕಲ ಜವಾಬ್ದಾರಿಗಳ ಹೊತ್ತು

ಬಯಕೆಗಳ ಬದಿಗೊತ್ತಿ

ತನ್ನವರ ಏಳಿಗೆಗೆ

ನಿಂದೆ, ನಿರ್ಲಕ್ಷ್ಯ ,ಅನಾದರ ,

ಅವಮಾನಗಳನೆಲ್ಲ ಸಹಿಸಿ

ಅವಿರತ  ಸೆಣೆಸಾಡುತ 

ತನ್ನವರ ನಗುವಿನಲೇ

ನಲಿವನ್ನು ಕಾಣುವಳುಮಂಗಳಕೆ

ಅಮಂಗಲೆಯಾದೊಡೇ  

ಶ್ರಮಿತ  ತ್ಯಾಗಕೆ ತೊಡಕಾಗಿ

ಕುಕೃತ್ಯವೆಸಗುವರು

ಸುಮಂಗಲೆಯರೇ…??????

Mar 4, 2015

ಕುಂದಣದ ಹೊಳಪು
ಹೊರಗೆ ನೀ  ದಣಿಯದಿರು
ಅಂದ ಚೆಂದದ ಉಡುಗೆ ತೊಟ್ಟು
ಎನ್ನೆದೆ ತುಂಬಿ ಕಣ್ತುಂಬಿ,
ಮನತುಂಬಿ ,ಮನೆತುಂಬ
ನಡೆದಾಡುತಿರು.ಸಾಕೆನಗೆ .. 

ನಿನಗೆ ನಿನ್ನಮ್ಮನಂತೆ ,
ನನಗೆ ನೀನಮ್ಮನಾದೆ ,
ನಿನ್ನ ಮಡಿಲಲ್ಲಿ ನಾ
ಕಂದನಾದೆ.ಎಂದವರು

ಒಲವೆಮ್ಮ ಬದುಕು ,
ಕುಂದಣದ ಹೊಳಪು .
ಕೋಟ್ಯಾಧಿಪತಿಯಾದವಗೂ 
ಸಿಗುವುದೇ..  ಈ ಬದುಕು ..?
 
 
ನಾನಿರದೇ ಹೇಗಿರುವೆ..!!!!.. ?
ನೀನಿರದೆ ಹೇಗಿರಲಿ..!!!.. ?
ನೀನಿರದ ಆ ಬದುಕು
ಕಲ್ಪನೆಗೂ ಕೊಡಲಾರೆ ...
ನಾನಿರದ ನಿನ್ನ ಬದುಕೆಂತು..ನೆನೆಯಲಿ ..
 
 
ಕೈತುಂಬಾ ಪೂಜಿಸಿ
ಮನತುಂಬಿ ಹರಸಿ 
ಸಂತಸದಿ ಬಿಳ್ಕೊಡುವೆ 
ನೀ ಮೊದಲೇ.. ನಡೆದುಬಿಡು.ಎಂದವರು,
ಹೇಳದೆಯೇ ಹೊರಟಿರಿ  ಎಂತು..?
--
kalavathi G.S

Feb 3, 2015


ನೋವೇ…ವಿಸ್ಮಯ..!!!!!!-35

ಬದುಕಿನೊಳಗೆ ಇದ್ದುಕೊಂಡೆ 

ಬದುಕಿನಾಚೆಯ
ದಿವ್ಯಚಲುವಿನನುಭವಕೆ ನೋವೆ 

ಬದುಕ ‘ನಾವೆಯಾಗುವ’

ಪರಿಯೇ ವಿಸ್ಮಯ..!

 

ದೂರು ಸಂಕಷ್ಟಗಳೇ

ಶುದ್ಧಭಾವಕ್ಕೆ ದೂಡಿ,

ದೇವನಲಿ ಮೊರೆ ಇಡುತಾ

ಸವಾಲಾಗಿ ಸ್ವೀಕರಿಸಿ

ಸಮಸ್ಯೆಯಲ್ಲೇ ಪರಿಹಾರವನೂ

ಹೆಕ್ಕಿಕೊಳ್ಳುತಾ…..

ದಿವ್ಯ ಕನಸ ನನಸಿಗೆ

ನೋವೆ ಸಾಧನವಾಗುವ

ಪರಿಯೇ ವಿಸ್ಮಯ!

 

ಪರಮಾತ್ಮನ ಸೇರಲು

ತುಡಿಯುವ ಜೀವಾತ್ಮಕೆ

ಜೀವಿಸಲು  ಜ್ಞಾಪಿಸುವ 

ನೋವ ಲೀಲೆ ವಿಸ್ಮಯ!

 

ಅಲೌಕಿಕದ ಅನೂಹ್ಯ

ಆಕರ್ಷಣೆಯ ಅಲಕ್ಷ್ಯಕೆ

ಅರಿವೇ  ಗುರುವಾಗುವ 

ಅನುಭವವೇ ವಿಸ್ಮಯ

 

ಅರಿವು ಕನಸೊಳಗೂ ನುಸುಳಿ

ಪ್ರಜ್ಞಾ ಸ್ತರಕೆಲ್ಲಾ ಪಸರಿ

ಜೀವಧ್ವನಿ ಮಾಮರ ವಾಗುವುದೇ ವಿಸ್ಮಯ !

 

ಬೇಗೆ ಬೆವರೆ  ಮಳೆಯೆಮಾಗಿ

ತಾನೇ ತಾನಾದಂತೆ

ನೋವು ನಲಿವೇ

ನಿರಂತರ ಬಾಳ ಆಳುತ,

ಪಾಡೆ ಹಾಡಾದಾಗ

ಮಟ್ಟ ಮುಟ್ಟಿ ಮಾನ್ಯತೆಗೆ

ನೋವೆ ಮೆಟ್ಟಿಲಾಗೊ

ದಿವ್ಯ ಪರಿಯೆ ವಿಸ್ಮಯ !!!!!                 

Jan 4, 2015

ಹೊಂಬಾಳೆ 


ನಗೆಹೊಗೆಯಾಗಿ ದಗೆಯಾಡುವಾಗ
ಒಳಗೆ ಸೆಳೆದಾವೋ ಸುಳಿಗಾಳಿ
ಹೊರಗೆ ಜಡಿಮಳೆ ಒಳಗೆ ದಗೆ ,
ಮೋಡ ಬಿಸಿಯಾಗಿ ಮಳೆ ಸುರಿಯೆ  ,
ಜಗತೊಯ್ದು  ಕೊಚ್ಚಿ ಹೋದಿಯೇ  ,

ತಾಳಲಾರದ ಬೇಗೆ
ಬೇಗೆ ತಾಗೆ ಸೋನೆ ಕೂಗೆ  
ಗುಡುಗು ಸಿಡಿಲ ಆರ್ಭಟಕ್ಕೆ
ಬೆದರಿ ಬೇಗೆಗಡಗುವೆ.

ಸಕಲವಲ್ಲವನ್ಎಂದು ಮೆರೆದು 
ಸಸಿಯಲೂ  ಕಲಿವುದಿದೆ 
ಎಂದರಿಯದೇ   
ಕುಬ್ಜವಾಗದಿರು ಮನವೇ

ಭಂದಗಳಲಿ ಸೌಗಂಧವಿರಲಿ  
ದುರ್ಗಂಧಗಳ ಸಹಿಸದೆ
ಕ್ಷಣದಲೇ ಕಾರುವ ಅಸಹನೆ ,
ಹೊತ್ತು ನಿಷ್ಟುರಗಳ ಹೊರೆ ,
ಹುಡಿಕಿ ಹೊರಟಿದೆ ವಿವೇಚನೆಯ ಸಿರಿ ,

ಹೊಣೆಗಾರಿಕೆಯ ಹೊಂಬಾಳೆ
ಮದುವೆಯ ಮುಂಬಾಳೆ,

ಭಾವ ಕೋಶವಿರದವಗೆ 
ಬಂಧಕೋಶವೇ...?

ಮಾಗಿದ ಮನಗಳ ಹೆಣಗಾಟ 
ಬಂಧಗಳ   ಬೆಸೆತಕೆ  ,
ಮಾಗದ ಮನಗಳ ಸೆಣೆಸಾಟ 
ಬಂಧಗಳ   ಕಸಿತಕೆ  

ಸಂಬಂಧಗಳ   ನೆನಪು  ಸಂಕಟಕೆ  ,
ಮರೆತು ಮೆರೆವುದು ಸಂತಸಕೆ.