Sep 25, 2016

ದೀಪಲಕ್ಷ್ಮಿಪೂಜೆ.

ಬಾಲಮಂದಿರದಲ್ಲಿ ಬಾಲಕಿಯರಿಗೆ ಬಾಗಿನ ಸಮರ್ಪಣೆ.

Jun 13, 2016

ಸಮಭಾವದ ಪ್ರಭಾವ

ಒಳಗೊಂದು ಭಾವ
ಹೊರಗೊಂದು ಭಾವ
ಲಗ್ಗೆ ಇಡುವುದು
ಆರೋಗ್ಯದ ಅಭಾವ
ಸಕಲಕೂ ತಳೆಯೇ
ಸಮಭಾವ
ಪಡೆಯುವೇ
ಯೋಗಾಯೋಗದ
ಪ್ರಭಾವ..ಹೊಂದುವೆ
ಅಂದದ ಆನಂದದ
ಮುಖಭಾವ..!!

Mar 1, 2016

ಬದ್ಧತೆ 

ಎಲೆ ಉದುರಿತೆಂದು
ಮರ ಮರುಗದು
ಎಲೆಯೂ ಉದುರಿದೆನೆಂದು
ಕೊರಗದೇ ಕರಗಿ
ಮುಂದಿನ ಚಿಗುರಿಗೇ
ಮರದ ಬೇರಿಗೆ ತನುವಾಗಿ
ಸ್ವಾರ್ಥ ಮೆರೆವಗೇ
ಸಹಕಾರ ಸೌಹಾರ್ದತೆಯ
ತತ್ವ ಸಾರುವುದು

Nov 14, 2015

ಹಾಸನಾಂಬಾ ಮಹೋತ್ಸವದಲ್ಲಿ ಭಕ್ತಿ ಸಂಗೀತ ಸೇವೆಯ ಸುಯೋಗ. 
 "ಕಾಣುತಿಹವು ಕಂಗಳು ಹಾಸನಾಂಬೆಯಾ ರೂಪ
ನಸುನಗುತಾ ಕುಳಿತಿಹಳು  ಕಳೆಯಲು ಭವದಾತಾಪ
ಮಾತೆ ಮನದ ತುಂಬಾ  ಪ್ರೇಮ ಸುಧೆಯ ತುಂಬಿ
ಸೆಳೆಯುತಿಹಳು ವರುಷಕೊಮ್ಮೆ ಭಕ್ತರಾ
ಪರಮ ಪ್ರೇಮದಿಂದ  ಪರಮ ಸ್ನೇಹದಿಂದಾ"
 
"ಬಂತೂ ದೀಪಾವಳಿ ದೇವೀ ರೂಪವ ತಾಳೀ"  
ಈ  ಎರಡು ಸ್ವರಚಿತ  ದೇವಿ  ಗೀತೆಗಳನ್ನೂ ಹಾಡುವ  ಸದಾವಕಾಷಕ್ಕಾಗಿ ಸಂತೋಷವಾಯಿತು. 

Nov 8, 2015

ಸಮಸ್ತ ಜನತೆಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Oct 31, 2015

 
 
ಹೀಗೊಂದು ಸವಿನೆನಪಿ ನೊಂದಿಗೆ ತಮ್ಮೆಲ್ಲರಿಗೂ 
 ಕನ್ನಡ ರಾಜ್ಯೋತ್ಸವದ ಶುಭಾಶಯಗಳು 
 
 
 



ರಾಷ್ಟ್ರ ಸೇವಿಕ ಸಂಘದಿಂದ ಆಯೋಜಿಸಲಾಗಿದ್ದ ೧೫ ದಿನಗಳ ಶಿಬಿರದಲ್ಲಿ ಪ್ರಭಂದಕಿಯಾಗಿ ಸೇವೆಯಲ್ಲಿದ್ದ ಸಂದರ್ಭದಲ್ಲಿ, "ಜಯಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೇ,ಜೋಗದಸಿರಿ ಬೆಳಕಿನಲ್ಲಿ",ಗೀತೆಯನ್ನುನುಡಿಸುವ ಸದವಕಾಶ