ನಾನು ಯಾರು ....?...!
ಆಟವಾಡಲು ಅರಿತಾಗಿನಿಂದಲೂ
ತವಕಿಸುತಿತ್ತು , ಅರಿಯಲು
ನಾ ಯಾರೆಂದು.
ಆಟದಲಿ ಮರೆತಂತಿದ್ದರು,
ದುತ್ತನೆ ಎದ್ದು ಕಾಡುತ್ತಿತ್ತು,
ನನ್ನೊಳಗಿನ ಪ್ರಶ್ನೆ...
ನಾನು ಯಾರು ...? ...!....ಎಂದು
ಕೈಕಾಲು ಮೊಗವಿದೆ ,
ಮಾಂಸದ ಮುದ್ದೆಗೊಂದು
ಆಕಾರವಿದೆ.
ಚಲಿಸುವೆ ,ಆಲಿಸುವೆ,
ಆಡುವೆ, ಮಾತನಾಡುವೆ.
ಆದರು, ನಾನು ಯಾರು..?
ಇಹರು ಇಹದಲಿ
ನನ್ನಂತೆ ಎಲ್ಲರೂ...!
ಮಾಂಸದ ಮುದ್ದೆಗಳ
ಯಂತ್ರಗಳಂತೆ.
ಒಂದರಂತೆ ಇನ್ನೊಂದಿಲ್ಲ.
ಇನ್ನೊಂದರಂತೆ
ಮತ್ತೊಂದಿಲ್ಲ.ಎಲ್ಲವೂ
ವಿಭಿನ್ನ ...!ನನ್ನಂತೆ ಎಲ್ಲವೂ
ವಿಭಿನ್ನ ...!ನನ್ನಂತೆ ಎಲ್ಲವೂ
ಪ್ರತಿಕ್ರಿಯಿಸುವವು..!
ಯಾರು ಇವರೆಲ್ಲ......?
ಹೇಗಾದರೂ....?.....!
ಹೇಗಾದರೂ....?.....!
ಪ್ರಶ್ನಿಸಲು ಹೊರಟರೆ
ಎನೆನ್ನುವರೋ...
ಎಳವೆಯಲ್ಲಿ ಬಾಲಿಶವಾಗಿ
ಕಾಡಿದ ಪ್ರಶ್ನೆಗೆ,
ಉತ್ತರ ಕೇಳುವ ಮನವಿಲ್ಲ.
ಕಾಡಿದ ಪ್ರಶ್ನೆಗೆ,
ಉತ್ತರ ಕೇಳುವ ಮನವಿಲ್ಲ.
ಅವರಿವರು ಮಾತನಾಡಿ
ಕೊಳ್ಳುವುದಿತ್ತು.
ಅದೇನೋ ಪಂಚೆಂದ್ರಿಯಗಳಂತೆ,
ಅವನಾರೋ ಬ್ರಹ್ಮನಂತೆ.
ಅವನೇ ಸೃಷ್ಟಿಕರ್ತನಂತೆ...!
ಅವನೇ ಸೃಷ್ಟಿಕರ್ತನಂತೆ...!
ಹೆಣ್ಣ ಗರ್ಭದಲಿ ಹೆಪ್ಪುಗಟ್ಟಿದ
ನೆತ್ತರಿಗೆ ಅಂಗಗಳು ಮೂಡಿ,
ನವಮಾಸ ಹೊತ್ತು,
ಹೆರುವಳಂತೆ ,
ಸೃಷ್ಟಿಕರ್ತ ಬ್ರಹ್ಮನನೂ
ಸೃಷ್ಟಿಕರ್ತ ಬ್ರಹ್ಮನನೂ
ಅವಳೇ ಹಡೆದಳಂತೆ....!
ಚಿತ್ರ ವಿಚಿತ್ರ ಭಾವಗಳು
ಮಾಂಸದ ಮುದ್ದೆಯೊಳಗೆ
ಚಿತ್ರ ವಿಚಿತ್ರ ಭಾವಗಳು
ಮಾಂಸದ ಮುದ್ದೆಯೊಳಗೆ
ಬಿದ್ದು ಗೊಂದಲಮಯವಾಗಿತ್ತು.
ಪ್ರಶ್ನೆಯಾಗೇ ಉಳಿದಿತ್ತು
ಅಂದು......!.
ಅಂದು......!.
ಸೃಷ್ಟಿಯ ನಿಯಮದಿ ,
ಪ್ರಕೃತಿ ಪುರುಷರ
ಒಲವಿನ ಮಿಲನದಿ
ಒಲಿಯುವ ಚೆಲುವಿನ
ಚಿಗುರದು ಹೊಳೆವುದು.
ಬದುಕಿನ ಬಗಲಿನ
ಹರಯದ ತಿರುವಲಿ
ಬಾಲಿಶ ಭಾವದ
ಪುಟಗಳು ಮರಳಿ
ಒಲಿಯುವ ಚೆಲುವಿನ
ಚಿಗುರದು ಹೊಳೆವುದು.
ಬದುಕಿನ ಬಗಲಿನ
ಹರಯದ ತಿರುವಲಿ
ಬಾಲಿಶ ಭಾವದ
ಪುಟಗಳು ಮರಳಿ
ಕಾವ್ಯಕೆ ಇಬ್ಬನಿಯಾಗಿತ್ತು.