ಬದುಕು ಮಾಯೆಯ ಮಾಟ,
ಮಾತು ನೊರೆ ತೆರೆಯಾಟ,
ಅಹಂ ಎಂಬ ಮಾಯೆ ಮರೆಸುವುದು,
ಮಾನವತೆಯ ಪಾಠ.
ಪ್ರತಿದಿನವೂ, ಪ್ರತಿಕ್ಷಣವು, ಪ್ರತಿಯೊಬ್ಬರಿಂದಲೂ, ಪ್ರತಿ ಹಂತಗಳಲ್ಲು ಒಂದಿಲ್ಲೊಂದು
ರೀತಿಯಲ್ಲಿ ಯಾವುದಾದರು ಒಂದು ಪಾಠವನ್ನು ಕಲಿಯುತ್ತಲೇ ಇರುತ್ತೇವೆ.ನಾವು ಎಷ್ಟೇ ಎಚ್ಚರಿಕೆ ವಹಿಸಿದರು
ನಮಗೆ ಅರಿವಿಲ್ಲದೆ ನಮ್ಮಲ್ಲೊಮ್ಮೆ ನುಸುಳಲು ಪ್ರಯತ್ನಿಸುವುದು ಅಹಂ ಎಂಬ ಮಾಯೆ. ಸ್ವಲ್ಪ ಅಲಕ್ಷ ಮಾಡಿದರು ಅದು ನಮ್ಮ ವ್ಯಕ್ತಿತ್ವವನ್ನೇ ನಾಶ ಪಡಿಸುವುದು.ಹಾಗಾಗಿ ನಮ್ಮವಿವೇಕವನ್ನು ಸದಾ ಎಚ್ಚರ ವಾಗಿರಿಸಿಕೊಳ್ಳಲು
ಮಹಾನ್ ಸಾಧಕರ ಮಾರ್ಗದರ್ಶನ ನಮ್ಮ ಮನಃ ಪಟಲದಲ್ಲಿ ಸುಳಿಡಾದುತ್ತಿದ್ದರೆ ಅಹಂ ಎಂಬ ಮಾಯೆ ಯಿಂದ ದೂರ ವಿರಲು ಸಾಧ್ಯವಾಗುವುದು.ಅಹಂ ಎಂಬುದು ಪ್ರಾಕೃತಿಕವಾಗಿಯೂ ಹೇಗೆ ಬಿಂಬಿಸುವುದು ಎಂಬುದನ್ನು ಕೆಲವು ಉದಾಹರಣೆಗಳಿಂದ ವಿವರಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ಮಿಂಚುಹುಳುಗಳು ಬಂದಾಗ ನಾವು ಜಗತ್ತಿಗೆ ಬೆಳಕನ್ನು ಕೊಡುತ್ತಿರುವೆವು ಎಂದು
ಜಂಭ ಕೊಚ್ಚಿಕೊಳ್ಳುವವು.ನಂತರ ನಕ್ಷತ್ರಗಳು ಮಿನುಗಲು ಪ್ರಾರಂಭಿಸಿದ ಮೇಲೆ ಅವುಗಳ ಅಹಂಕಾರ ಅಡಗಿ
ಮಂಕಾಗುವವು. ಈ ನಕ್ಷತ್ರಗಳು "ನಾವೇ ಜಗತ್ತನ್ನು ಬೆಳಗುತ್ತಿರುವೆವು," ಎಂದು ಬೀಗುವವು.ಸ್ವಲ್ಪಹೊತ್ತಿಗೆಲ್ಲಾ
ಚಂದ್ರೋದಯದ ಕಾಂತಿಯು ನಕ್ಷತ್ರಕ್ಕೆ ನಾಚಿಕೆ ತರುತ್ತದೆ. ನಕ್ಷತ್ರಗಳು ವ್ಯಸನದಿಂದ ಮಂಕಾಗುತ್ತವೆ. ಪುನಹ ಚಂದ್ರನು ಬೀಗುತ್ತಾ ಅಹಂನಿಂದ" ತನ್ನ ಬೆಳದಿಂಗಲಿನಿಂದಲೇ ಜಗತ್ತು ಪ್ರಕಾಶಮಾನವಾಗಿದೆ.ಸೌಂದರ್ಯದಲ್ಲಿ ಮುಳುಗಿದೆ ."ಎಂದು ತಿಳಿಯುವನು.ಆದರೆ ಕ್ರಮೇಣ ಅರುಣೆಪೂರ್ವ ದಿಗಂತದಲ್ಲಿ ಸೂರ್ಯೋದಯವನ್ನುಸಾರು
ವಳು. ಈಗ ಚಂದ್ರನೂ ಮಂಕಾಗುವನು.ಸೂರ್ಯನ ಪ್ರಖರತೆಗೆ ಚಂದ್ರನುಸಂಪೂರ್ಣಮರೆಯಾಗುವನು.ಇನ್ನು
ಮೋಡ ಮುಸುಗಿ ಸೂರ್ಯನ ಕಿರಣಗಳನ್ನೂ ಮುಚ್ಚಿದರೆ ಸೂರ್ಯನೂ ಅಸಹಾಯಕನಾಗುವನು.ಅಂತೆಯೇ ಅಹಂ
ಇರುವವರೆಗೂ.
ಹಾಗೆಯೇ ಪ್ರಾಕೃತಿಕವಾಗಿ ದೈವದತ್ತವಾದ ಶಕ್ತಿ ,ಸೂರ್ಯನನ್ನೇ ಕಾಣದಂತೆ ಮಾಡುವ ಮೋಡವೇ
ಅಹಂಕಾರ.ಮೋಡವೂ ಕರಗಿ ನೀರಾದರೆ ನೈಜತೆಯನ್ನು ಕಾಣಬಹುದು.
ಉದಾಹರಣೆಗೆ :
"ರಾಮಕೃಷ್ಣರ ಉಪದೇಶಾಮೃತ ಸಾರದಲ್ಲಿ" ಸಾಕ್ಷಾತ್ ಭಗವಂತನೆಂದು ಪೂಜಿಸಲ್ಪಡುವ
ರಾಮಚಂದ್ರನು ಲಕ್ಷ್ಮಣನೆಂಬ ಜೀವನಿಗಿಂತ ಒಂದೆರಡು ಹೆಜ್ಜೆ ಮುಂದೆ ಇರುವನು.ನಡುವೆ ಸೀತೆ ಎಂಬ
ಮಾಯೆ ನಡುವೆ ಇರುವುದರಿಂದ ಲಕ್ಷ್ಮಣನಿಗೆ ರಾಮನ ದರ್ಶನ ಸಾಧ್ಯವಾಗುವುದಿಲ್ಲ.ಆಗ ಸೀತೆಯನ್ನು ಪಕ್ಕಕ್ಕೆ
ಸರಿಯುವಂತೆ ಕೇಳಿಕೊಂಡನು.ಸೀತೆ ಪಕ್ಕ ಸರಿದ ತಕ್ಷಣವೇ ಭಗವಂತನ ದರ್ಶನ ವಾಯಿತು.ಎಲ್ಲಿಯವರೆಗೆ ಅಹಂ ಎಂಬ
ಮಾಯೆ ಸರಿಯುವುದಿಲ್ಲವೋ, ಅಲ್ಲಿಯವರೆಗೆ ಆತ್ಮ ಜ್ಞಾನವನ್ನು ಹೊಂದಲಾರ.ಮನುಷ್ಯನ ಅಹಂಕಾರವೇ ಮಾಯೆ.
ಎಲ್ಲವೂ ಅವನಿಂದಲೇ ,ನಾನು ಎಂಬುದು ನಿಮಿತ್ತ ಮಾತ್ರ,ಎಂಬುದನ್ನರಿತು."ನಾನು , ನಾನಿಂದಲೇ,ನಾನೇ",
ಎಂಬುದು ನಾಶವಾದಾಗ ಮಾತ್ರ, ಲೋಕಹಿತನಾಗುವನು.
"ರಾಮಕೃಷ್ಣರಉಪದೇಶಾಮೃತದಲ್ಲಿಯೇ" (ನಾನಿರುವೆ ,ನಾನಿರುವೆ,)"ಎಂದು ಅಹಂ ನಿಂದ ಕೂಗುವುದು. ಅದು ದೊಡ್ಡದಾದ ಮೇಲೆ
ಎತ್ತಾದರೆ ನೇಗಿಲಿಗೆ ಕಟ್ಟುತ್ತಾರೆ ,ದವಸ ಧಾನ್
ಸೋತರೆ ಕೊಂದುತಿನ್ನುತ್ತಾರೆ. ಇಷ್ಟೊಂದು ಶಿಕ್ಷೆ ಅನುಭವಿಸಿದರೂ
ಕೊಳ್ಳಲಾರದು.ಏಕೆಂದರೆ ಇದರ ಚರ್ಮದಿಂ
ನಮ್ರತೆ,ಬಿಲ್ಲಿನ ನಾರನ್ನು ಮಾಡಿ ಹೊಡೆದಾಗ ಆಪ್ರಾಣಿಯ ಕರುಳು"ತೂಹೈ"(ನೀ
ಹಾಗೆ ನಾನು ಹೋಗಿ ನೀನು ಎಂಬುದಾದಾಗಲೇ ಜೀವನದಲ್ಲಿ
"ನೀನು"ಎಂಬ ಸುಜ್ಞಾನದೆಡೆ ಸಾಗಿದಾಗ ಜೀವನದಲ್ಲಿ ಜಾಗೃತನಾಗಿ ಸಜ್ಜನನಾಗುವನು."ದೇಹವೆಂ
ಜ್ಞಾನವೆಂಬಜ್ಯೋತಿ" ಬೆಳಗುವುದು.ಆ ಜ್ಯೋತಿ
ಶಂಕರಾಚಾರ್ಯರನ್ನು ಒಬ್ಬ
ಶಂಕರಾಚಾರ್ಯರು,ಯಾರವರು...?ಎಂದಾಗ ,ಶಿ
ಅಷ್ಟೊಂದುಇಷ್ಟವಾದರೆ ,ಅದನ್ನು ಅನಂತತೆ
ಭಕ್ತ ಎಂಬ ಅಹಂ,ಅಷ್ಟೇನೂ ಅಂಜಿಕೆ ಇಲ್ಲ ,ಆ ಭಾವವು ಕಡ್ಡಿಯಿಂದ ನೀರಿನ ಮೇಲೆ ಗೆರೆಎಳೆದಂತೆ ಅದುಬಹಳ ಕಾಲ
ವುಳಿಯದು ಎಂದರಂತೆ.
ಹೀಗೆ ಮತ್ತೊಬ್ಬ ಸಾಧಕರಾದ ಬಸವಣ್ಣ
ಬಸವಣ್ಣ ನವರ ಮಾತಿಗೆ ಗೌರವ ಕೊಟ್ಟು
ಅಹಂ ಹೋಗಲಾಡಿಸುವ ಸಲುವಾಗಿ ಅಲ್ಲಮರು
ದಾಸೋಹಕ್ಕೆ ನೆರೆದಿದ್ದ ಜಂಗಮ ವೃಂದ
ಹಸಿವೆಂದು ಹುಯಿಲಿಡುತ್ತಿದ್ದಾರೆ. ಬಸವಣ್ಣನವರು ಪ್ರಭುವಿಗೆ ಎಲೆಹಾಕಿಸಿ
ಪ್ರಾರಂಭಿಸುತ್ತಾರೆ.ಲಕ್ಷ ,ಸಾವಿರ ಜಂಗಮರಿಗೆಮಾಡಿದ ಭಕ್ಷವೆಲ್ಲ
ಆದರೂ ಅವರ ಹಸಿವೆ ಇಂಗುವುದಿಲ್ಲ.
ಆಗ ಪ್ರಭು "ಜಂಗಮ ದಾಸೋಹ ಮಾಡಿಸುತ್ತೇನೆ ಎಂಬ ಹಮ್ಮು ಭಿಮ್ಮು
ನೀಡಲು ನೀನಾರು ?ಬೇಡಲು ನಾನಾರು ?
ನಾನು ನೀಡಿದೆ ,ನಾನು ಮಾಡಿದೆ, ಎಂಬ ಅಹಂ ತಳೆಯುವುದು ವಿವೇಕವಲ್ಲ"ಎಂದು ಹೇಳು
ಬಸವಣ್ಣನವರು ಹೊರಗೆ ಬಂದು ನೋಡಿದಾಗ
ಕಂಡೂ ಆಶ್ಚರ್ಯ ಚಕಿತರಾಗಿ "ಬಸುರಿ
ಬಸುರೊಳು ಅಡಗಿಸಿ ಕೊಂಡು ನೀದಣಿಯಲು ಜಂಗಮಕೆ ಹಸಿವದೆಲ್ಲಿಯದು?ತಮ್ಮ ಮಹಾ ಗುರುವಿನ "ಹಿರಣ್ಯ ಗರ್ಭ "ಸ್ವರೂಪದರಿವು ಬಸವಣ್ಣನವರಿಗಾಗುತ್ತದೆ.ಹೀಗೆ ಮಹಾನ್
ಶರಣ ಸಂತ ಸಾಧಕ ರನ್ನು ಬಿಡದ ಅಹಂ ಹುಲುಮಾನವರಾದ ನಮ್ಮನ್ನು ಬಿಡುವುದೇ ?
ಅಹಂ ಎಂಬ ಮಾಯೆ ಆಗಾಗ ನಮಗೆ ಅರಿಯದಂತೆ ನಮ್ಮೊಳಗೇ ನುಸುಳುವ ಪ್ರಯತ್ನ ಮಾಡುತ್ತಿರುತ್ತದೆ.ಅದು
ನಮ್ಮೊಳಗೇ ಸುಳಿಯದಂತೆ ವಿವೇಕವೆಂಬ ಕೋಟೆಯಿಂದ ರಕ್ಷಿಸಿ ಕೊಳ್ಳುವುದು ಅಗತ್ಯವಾಗಿದೆ.ಹಾಗೆಯೇ ಅಹಂ ಎಂಬ ಕೋಟೆಯಿಂದಲೂ ಹೊರಬರಲುಆಧ್ಯಾತ್ಮದ ಪಾತ್ರ ಮಹತ್ವವಾದದ್ದು.