Dec 12, 2010

 ಕರ್ಮಣ್ಯೇ ವಾದಿಕಾರಸ್ಯೆ  

 ನೊಗಕೆ ಹೆಗಲು ಕೊಟ್ಟ ಹೋರಿ
 ಹೇರಿದಷ್ಟು ಹೇರ ಹೊತ್ತು
 ಸೂತ್ರದಾರ ತೋರಿದೆಡೆಗೆ ಸಾಗುತ

 ಕೇಳಲಿಲ್ಲ ಎಂದು ಅವನ
 ಹೇರನೆಷ್ಟು ಹೊರಿಸಿದೆ...?
 ಎತ್ತ ಕಡೆ ಹೊರಟಿಹೆ...?
 ಎನಗೆಷ್ಟು ನೀಡುವೆ..?

"ಕರ್ಮಣ್ಯೇ ವಾದಿಕಾರಸ್ಯೆ
ಮಾಫಲೇಶು ಕದಾಂಚನ"

ಮೂಕವಾಗಿ ದುಡಿದು ದಣಿದು,
ಧಣಿ ಇತ್ತ ಮೇವ ತಿಂದು
ಜೊಲ್ಲು ಸುರಿಸಿ ಗೊರಕೆ ಹೊಡೆದು 
ತಿಂದಲ್ಲೇ ಒರಗುತ ,

ನಸುಕಿನಲ್ಲೇ ನಿತ್ಯಕರ್ಮ,ಎಂದಿನಂತೆ
ಕಾಯಕ, ಎಂದು ಕೇಳಲಿಲ್ಲ ತನಗೆ
ತಾವು ಎಷ್ಟು ,ಎಲ್ಲಿ ಎಂದು,
ಕೊಟ್ಟ ಜಾಗ ಇಟ್ಟ ಮೇವು

ಬೆನ್ನ ಮೇಲೆ ಬಿದ್ದ ಪೆಟ್ಟು
ಕಾಲಿಗೊತ್ತೋ  ಕಲ್ಲುಮುಳ್ಳು
ಲೆಕ್ಕವಿಲ್ಲ ಕಾಯಕೆ,ಅರಿವರಾರು ದಣಿವನು 
 
ಮದ್ದು ಕೇಳಲಿಲ್ಲ ಗಾಯಕೆ
ಮೂಕ ಮನದ ರೋದಕೆ
ಮನುಜ ಲೋಕ ಮೂಕವೇ......?


ಸೋತರಂದೆ ಸಂತೆಗೆ, ಸಾಗದಿರೆ ಕಟುಕಗೆ 
ಮುಗಿಯಿತಂದೆ ಧನ್ಯತೆ,  
ಸೋತವಗೆ.... .ಎಲ್ಲಿ ಮಾನ್ಯತೆ....?...!!
 **************************************

5 comments:

  1. ಕರ್ಮ ಹೊತ್ತು ಬ೦ದವಗೆ ಸೋಲು ಗೆಲವು ನಿರ್ಣಯವಾಗಿರುತ್ತವೆ ಅಲ್ಲವೆ? ಉತ್ತಮ ಕವನ ಕಲಾವತಿ ಮೇಡ೦. ಪದ್ಯದ ಧಾಟಿ ತು೦ಬಾ ಇಷ್ಟವಾಗುತ್ತದೆ.

    ಶುಭಾಶಯಗಳು
    ಅನ೦ತ್

    ReplyDelete
  2. ಮೂಕ ಪ್ರಾಣಿಯ ಮೂಕ ರೋಧನ ಮನಕರಗುವ೦ತಿದೆ. ಕವನ ಚೆನ್ನಾಗಿದೆ ಕಲಾವತಿಯವರೇ, ಅಭಿನ೦ದನೆಗಳು .

    ReplyDelete
  3. ಅನಂತರಾಜ್ ಸರ್ ರವರೆ ನಿಮ್ಮ ಶೀಘ್ರ ಹಾಗು ಅತ್ಯುತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹವೇ ನಮಗೆ ಪ್ರೇರಣೆ.ಹೀಗೆ ಬರುತ್ತಿರಿ.

    ReplyDelete
  4. ಪ್ರಭಾಮಣಿ ಯವರೇ ನಿಮ್ಮ ಅತ್ಯುತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೆ ಇರಲಿ ನಿಮ್ಮ ಪ್ರೋತ್ಸಾಹ

    ReplyDelete
  5. ಮನ ಮುಟ್ಟುವ ಸಾಲುಗಳು

    ReplyDelete