Jan 14, 2011

                    ಎಲ್ಲರಿಗೂ " ಹೊಸ ವರ್ಷದ  
            "ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯ"
      
                          ಬೆಳಕಿನಾ    ಬೀಜಗಳು
******************************* 

ಎಳ್ಳು ಕೊಬ್ಬರಿ  ಬೆಲ್ಲ

ಕಡಲೆ  ಪಪ್ಪು ಗಳೆಲ್ಲ

ಬೆರೆತು ಸವಿ ರುಚಿಯಾಗಿ

ಪ್ರೀತಿಯ  ರಸಾಸ್ವಾದದಲಿ


ಬೆಲೆಕಟ್ಟ ಲಾಗದ ಯೋಗಿಯ

ಬೆವರ  ಹನಿಗಳ ತೆನೆಯು   

ಮಾತೆ ಎದೆ  ಕಣದಲ್ಲಿ

ವಿವಿಧ ಧಾನ್ಯಗಳ  ರಾಶಿಯಾಗಿ  


ಶ್ರಮದ ಫಲ ಸಮೃದ್ಧ

ಸುಗ್ಗಿ ಸಂಭ್ರಮವಿಂದು

ಜೀವಧಾತನಿಗೆಂದೂ  

ಧನ್ಯತೆಯ ನಮನ



ಎದೆಯೊಳಗೆ ಮೊಳೆಯುವಾ

ಬೆಳಕಿನಾ ಬೀಜಗಳು

ಸಸಿಯಾಗಿ ಸೃಷ್ಟಿ

ಸಂಭ್ರಮದಲಿ


ಬೆಳಗಲಿದೆ  ನಾಳೆಗಳು   

ಸುಫಲ ಪಾದಪವಾಗಿ,

ಹದಗೊಳಲಿ

ಅದಕಾಗಿ ನಮ್ಮೆದೆಗಳು
                                                              
                                                  ***************             

12 comments:

  1. ಸು೦ದರ ಸಾಲುಗಳು.
    ನಿಮಗೂ, ನಿಮ್ಮ ಪರಿವಾರಕ್ಕೂ ಸ೦ಕ್ರಾ೦ತಿಯ ಶುಭಾಶಯಗಳು.

    ReplyDelete
  2. ಮನಮುಕ್ತ ರವರೆ,ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ಮತ್ತು ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮಗೂ ನಿಮ್ಮ ಪರಿವಾರದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

    ReplyDelete
  3. ಸ೦ಕ್ರಾ೦ತಿಯ 'ಎಳ್ಳು' ಮಿಶ್ರಣದ ಮರ್ಮವನ್ನು ಚೆನ್ನಾಗಿ ಕವನಿಸಿದ್ದೀರಿ! ಅರ್ಥ ಪೂರ್ಣ ಕವನ. ನಿಮಗೂ ಮಕರ ಸ೦ಕ್ರಾ೦ತಿಯ ಶುಭಾಶಯಗಳು.

    ReplyDelete
  4. ನಿಮಗೂ ಮಕರ ಸ೦ಕ್ರಾ೦ತಿಯ ಶುಭಾಶಯಗಳು

    ReplyDelete
  5. ಕಲಾವತಿಯವರೇ,
    ಸಂಕ್ರಾಂತಿಯ ಕವನ ಚೆನ್ನಾಗಿದೆ.
    ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸಂಕ್ರಾಂತಿ ಶುಭಾಶಯಗಳು !

    ReplyDelete
  6. ಪ್ರಭಾಮಣಿ ಯವರೇ ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಮತ್ತು ಶುಭ ಹಾರೈಕೆಗೆ ಧನ್ಯವಾದಗಳು.ನಿಮಗೂ ಶುಭಾಶಯಗಳು..

    ReplyDelete
  7. ಸಾಗರದಾಚೆಯ ಇಂಚರರವರೆ ನಿಮ್ಮಪ್ರತಿಕ್ರಿಯೆಗೆ ಧನ್ಯವಾದಗಳು,ನಿಮಗೂ ಶುಭಾಶಯಗಳು

    ReplyDelete
  8. ಅಪ್ಪ -ಅಮ್ಮ ಮನೆಯವರೇ ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಮತ್ತು ಶುಭಾಹಾರೈಕೆಗೆ ಧನ್ಯವಾದಗಳು. ನಿಮಗೂ ನಿಮ್ಮ ಪರಿವಾರಕ್ಕೂ ಶುಭಾಶಯಗಳು

    ReplyDelete
  9. tumba meaningful aagide kavana. nimagoo habbada shubhaashayagaLu.
    malathi S

    ReplyDelete
  10. maalatiyavare namma blog ge nimage aatmiya svaagata.nimma uttama pratikriyege dhanyavaadagalu.nimagu shubhaashayagalu.

    ReplyDelete
  11. ಕಲರವ..,

    ಚೆನ್ನಾಗಿದೆ...
    ಶುಭಾಶಯಗಳು..

    ReplyDelete
  12. vichalita ravare,namma blog genimage aatmiya svaagata.nimma pratikriyegaagi dhanyavaadagalu.

    ReplyDelete