Aug 30, 2011

ಎಲ್ಲರಿಗೂ ಗೌರಿಹಬ್ಬದ  ಗಣೇಶ ಚತುರ್ಥಿಯ ಹಾರ್ದಿಕ  ಶುಭಾಶಯಗಳು
*****************


ಸಾರ್ಥಕತೆ
***********


ಗಂಧವೀವೆ ಗಾಳಿಗೆ

ಚಂದವೀವೆ ಕಣ್ಣಿಗೆ

ಜೇನಿಗೀವೆ ಮಧುವನು

ಚಿಟ್ಟೆಗೀವೆ ಮತ್ತನು


ತಾವು ಕೊಟ್ಟು ಇಬ್ಬನಿಗೆ

ಗಾಳಿಯೊಡನೆ ಲಾಸ್ಯವಾಡಿ

ಅಂದದಲ್ಲೇ ಆಕರ್ಶಿಸಿ

ರವಿಗೆ ನಗೆಯ ಬಿರುವೆ .


ಕೀಟಗಳ ಹಸಿವು  ನೀಗಿ  

ಕೀಟಲೆಗೂ ಮೈಯ್ಯೊಡ್ಡಿ

ಹೆಣ್ಣ ಮುಡಿಯಲಿ ನಲಿಯುತ 

ದೇವನಡಿಯಲಿ ನಗುತಲೇ..


ಬಳಲಿ ಬಾಡಿ  ತ್ಯಾಗಿಯಾಗಿ

ಬಾಗಿ  ಮುಕ್ತಿ ಹೊಂದುವೆ

ಸಾರ್ಥಕತೆಯ ಪಡೆಯುವೆ

ನಗುತಲೆ ನೀ ಬದುಕುವೆ  

****************  

16 comments:

  1. ಹೂವ ಬದುಕು ನಿಜವಾಗಿಯೂ ಸಾರ್ಥಕ. ಚಂದದ ಕವನ.
    ಗೌರಿ ಹಾಗು ಗಣೇಶ ಹಬ್ಬದ ಶುಭಾಶಯಗಳು.

    ReplyDelete
  2. ಒಳ್ಳೆಯ ಕವನ...
    ನಿಮಗೂ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು.

    ReplyDelete
  3. ಸು೦ದರ ಕವನ. ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು ನಿಮಗೂ ಮತ್ತು ಮನೆಯವರೆಲ್ಲರಿಗೂ.

    ಅನ೦ತ್

    ReplyDelete
  4. ಹೂ ಇಲ್ಲದೆ ಕೆಲವಕ್ಕೆ ಅರ್ಥವೇ ಇರೋದಿಲ್ಲ..
    ಅದರ ಸಾರ್ಥಕತೆಯನ್ನು ಚೆನ್ನಾಗಿ ಹೇಳಿದ್ದೀರಿ.
    ಹಬ್ಬದ ಶುಭಾಷಯಗಳು.

    _ನನ್ನ ಬ್ಲಾಗಿಗೂ ಬನ್ನಿ: ವಿಘ್ನೇಶ್ವರನ ವಿಸರ್ಜನೆ

    ReplyDelete
  5. ಹೂವಿನ 'ಸಾರ್ಥಕತೆ' ಯನ್ನು ಸರಳ ಸು೦ದರವಾಗಿ, ಬಹಳ ಚೆನ್ನಾಗಿ ಕವನಿಸಿದ್ದೀರಿ. ಅಭಿನ೦ದನೆಗಳು ಕಲಾವತಿಯವರೇ, ನಿಮಗೂ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು.

    ReplyDelete
  6. sunath sir nimma bhavapoorna pratikriyege,protsaahakke atmiyadhanyavaadagalu.

    ReplyDelete
  7. nimma protsaahakke aatmiya
    dhanyavaadagalu manamuktaravare.

    ReplyDelete
  8. anantharaj sir nimma
    protsaahakara pratikriyegaagi
    aatmiya dhanyavaadahgalu.

    ReplyDelete
  9. vichalita maneyavare nimma arthapoorna pratikriyegaagi haagu nimmaaahvaanakkagi aatmiya dhanyavaadagalu.kshamisi, kelasada ottadadinda yaramanegu baralu vilambavaaguttide.

    ReplyDelete
  10. prabhamaniyavare nimma
    uttama pratikriyegaagi
    aatmiya dhanyavaadagalu.

    ReplyDelete
  11. ಮೇಡಂ;ಸುಂದರ ಕವನ.ತುಂಬಾ ಇಷ್ಟವಾಯಿತು.

    ReplyDelete
  12. ಹೂವಿನ ತ್ಯಾಗಮಯ ಜೀವನದ ಕವನ ತುಂಬಾ ಚನ್ನಾಗಿದೆ.

    ReplyDelete
  13. sir nimage mecchugeyaagiddakke
    tumbaa thanks.nimma protsaaha
    hige irali.dhanyavaadagalu.

    ReplyDelete
  14. praveen sir nimma
    mecchugeya pratikriyegaagi
    aatmiya dhanyavaadagalu.
    agaaga baruttiri..

    ReplyDelete
  15. GIRISh sir nimma mecchugeya
    pratikriyegaagi dhanyavaadagalu.
    aagaaga baruttiri.

    ReplyDelete