ಸುಯ್ಯೆನುತ ಸೊಂಪಾಗಿ ಬೀಸುವ ,
ತಂಗಾಳಿಗೆ ಮೈಯ್ಯೊಡ್ಡಿ
ಕೊಂಬೆ ರೆಂಬೇಗಳಲಿ, ಚಾಮರ ಬೀಸುತ ,
ತಲೆದೂಗುತ ಜೋಗುಳ ಹಾಡುತಿವೆ.
ಎಲೆಗಳು ಸರಸರ ಮಾರ್ಧ್ವನಿಸುತಿದೆ.
ಹಕ್ಕಿಯ ಕಲರವವಿಲ್ಲಿಲ್ಲ ,
ಗಾಳಿಯ ಜೊತೆಯಾಡುವ ಗಿಡಮರಗಳ
ಸೋಬಾನೆಯೇ ಪರಿಸರವೆಲ್ಲ.
ವಿಸ್ತಾರ ರಸ್ತೆಯಲಿ ಮೀರದ ನಿಯಮ,
ಸಶಬ್ಧ ಸುವೇಗದಿ ಸರಿದಾಡುವ
ಕಾರುಗಳದೇ ಕಾರುಬಾರು.
ಪ್ರತಿ ಮನೆಯಂಗಳ ನಂದನವನವೇ,
ಕಣ್ಮನ ತಣಿಸುವ ಬಗೆಬಗೆ ಹೂಗಳು,
ಪ್ರಕೃತಿಯ ಸೊಬಗನು ನೂರ್ಮಡಿಗೊಳಿಸಿದೆ.
ಪಚ್ಚೆಯ ನಡುವೆ ಹಚ್ಚನೆ ಮನೆಗಳು,
ಕಾರ್ನಿಂಗ್ ಮನಗಳ ಕೈಚಳಕ
ಸ್ವಚ್ಛತೆಯೇ ಪ್ರಾಮುಖ್ಯತೆ ಇಲ್ಲಿ ,
ನಿಯಮವ ಮೀರದ ಪರಿಸರಪ್ರೀತಿಯ,
ನಿಷ್ಕಲ್ಮಶನಗು ಪಸರಿಸಿದೆ.
ಶಾಂತತೆಯನು ಪ್ರತಿಬಿಂಬಿಸಿದೆ.
ಯಾರ ಗೊಡವೆ ಯಾರಿಗಿಲ್ಲ,
ಅವರ ಶ್ರದ್ಧೆ ಅವರದೇ,
ಕಂಡ ರಕ್ಕರದಿ ನಗುತ,
ಮುಂದೆ ಅವರು ಅವರೇ.
ಕಾರ್ನಿಂಗ್ ಕಾಂತ ಕಾಂತೆಯರು.
ಕರ್ನಾಟಕದ ಕಲಾವತಿಯವರೇ,
ReplyDeleteಕಾರ್ನಿಂಗ್ ಅನ್ನು ಕವನದ ಮೂಲಕ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಕಲ್ಪನೆಯಲ್ಲೇ ಕ೦ಡೆ ನಾ ಕಾರ್ನಿಂಗ್ ಅನ್ನು! ಕವನ ಚೆನ್ನಾಗಿದೆ.
A good poem...You will see beautiful colors in fall season....This may give more creative ideas for writing poems....just wait and watch....happy blogging....
ReplyDeleteRegards
Raghu
prabhamaniyavare nimma sheeghra pratikriye haagu protsaahakke haagu atmeeya abhiprayakke, atmeeya dhanyavadagalu.heegebaruttiri.....
ReplyDeleteಸೊಗಸಾದ ಸಾಲುಗಳು.
ReplyDelete-- ಮನ ಮುಕ್ತರವರೆ,ನಮ್ಮ ಬ್ಲಾಗ್ಗೆ ಅತ್ಮಿಯವಾದ ಸ್ವಾಗತ,ಹಾಗು ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು,ಹೀಗೆ ಬರುತ್ತಿರಿ ........
ReplyDeletenimma kavana saralavaagi sogasaagide
ReplyDeletenanna blog nodi uttama pratikriye nididdiri dhanyavaadagalu....innu hechhu hechhu bareyuttiri..
ಈಶಕುಮಾರ್ ರವರೆ ,ನಿಮ್ಮ ಶೀಘ್ರ,ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.....
ReplyDeleteಕಾರ್ನಿ೦ಗ್ ಕಾ೦ತ-ಕಾ೦ತೆಯರು..ಹೊಸ ಕಾನ್ಸೆಪ್ಟ್...ಕಲಾವತಿಯವರೆ.
ReplyDeleteನನ್ನ ತಾಣಕ್ಕೂ ಭೇಟಿ ನೀಡಿ ಪ್ರತಿಕ್ರಿಯಿಸಿದ್ದೀರಿ. ವ೦ದನೆಗಳು
ಅನ೦ತ್
ಅನಂತರಾಜ್ ರವರೆ,ನನ್ನ ತಾಣಕ್ಕೆ ಭೇಟಿ ನೀಡಿದ್ದಕ್ಕಾಗಿ ಮತ್ತು ತಮ್ಮ ಉತ್ತಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಮತ್ತು ಆತ್ಮೀಯ ಸ್ವಾಗತ.ನನ್ನ ಮತ್ತೊಂದು ತಾಣ ಅಂತರತಮ ನೀ ಗುರು.....ಅದಕ್ಕೂ ತಮಗೆ ಸ್ವಾಗತ. ಹೀಗೆ ಬರುತ್ತಿರಿ.ವಂದನೆಗಳು
ReplyDeleteನನ್ನ ಸ್ಪರ್ಧಾರ್ಥಿ ( http://spardharthi.blogspot.com/ )ತಾಣವನ್ನ ಸಂದರ್ಶಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ತಾಣಕ್ಕಿಂತ ನಿಮ್ಮ ಉತ್ಸಾಹ ಪ್ರಶಂಸನೀಯ & ನಿಮ್ಮ ಉತ್ಸಾಹವನ್ನ ತನ್ನ ಬೊಗಸೆಯಲ್ಲಿ ಹಿಡಿದಿಡುವ ಕೆಲಸ ಮಾಡಿರುವ ಈ ಬ್ಲಾಗ್ ಗೂ ಒಂದು ಗುಲಗಂಜಿ ಜಾಸ್ತಿಯೇ ಪ್ರಶಂಸೆ ಮಾಡುತ್ತೇನೆ.
ReplyDeleteನಿಮ್ಮಿಂದ ಹೀಗೇಯೇ ಲಹರಿಗಳು ಹರಿದು ಬರುತ್ತಿರಲಿ...
- ಇಂತಿ,
ರೇವಪ್ಪ
ರೇವಂತ್ ರವರೆ ನಮ್ಮ ತಾಣಕ್ಕೆ ಭೇಟಿ ನೀಡಿದ್ದಕ್ಕಾಗಿ ಮತ್ತು ನಿಮ್ಮ ಪ್ರೋತ್ಸಾಹಕ್ಕಾಗಿ,ಹಾಗು ಸ್ಪರ್ಧಾರ್ಥಿ ಪತ್ರಿಕೆಯನ್ನ ಕಳಿಸಿದ್ದಕ್ಕಾಗಿ ಧನ್ಯವಾದಗಳು
ReplyDeleteಹಾಗೆ ನನ್ನ ಮತ್ತೊಂದು ಬ್ಲಾಗ್ ಅಂತರತಮ ನೀ ಗುರು ....ಅದಕ್ಕೂ ತಮಗೆ ಆತ್ಮೀಯ ಸ್ವಾಗತ.
ಅನಂತ ನಾಯಕ್ ರವರೆ ತಾವು ನಮ್ಮಫಾಲೋವರ್ಸ್ ಆಗಿದ್ದಕ್ಕೆ ಧನ್ಯವಾದಗಳು.ಆದರೆ ನಿಮ್ಮ ಲಾಗ್ ಲಿಂಕ್ ಯಾವುದು ತಿಳಿಸಿ.
ReplyDeleteವಸಂತ್ ರವರೆ ನನ್ನ ಬ್ಲಾಗ್ ಗೆ ಭೇಟಿ ಕೊಟ್ಟು ಉತ್ತಮ ಅಭಿಪ್ರಾಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು.ನನ್ನ ಇನ್ನೊಂದು ಬ್ಲಾಗ್ "ಅಂತರತಮ ನೀ ಗುರು ....ಆತ್ಮತಮೊಹಾರಿ"ಅದಕ್ಕೂ ಬರುತ್ತಿರಿ.
ReplyDeleteನೀವು ಕಂಡ ಕಾರ್ನಿಂಗ್ ನೀವು ಕಂಡ ರೀತಿಯಲ್ಲೇ ಬರ್ದಿದ್ದಿರ ಸೊಗಸಾಗಿದೆ ಹೀಗೆ ಬರೆಯುತ್ತ ಇರಿ
ReplyDeleteದೊಡ್ಡಮನಿಮಂಜುರವರೆ ನಮ್ಮತಾಣಕ್ಕೆ ಭೇಟಿ ಕೊಟ್ಟು ತಮ್ಮ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕಾಗಿ
ReplyDeleteಧನ್ಯವಾದಗಳು. ಆಗಾಗ ಬರುತ್ತಿರಿ
ಸರ್ ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ReplyDeleteಸುಂದರ ಕವನಗಳು ,ಸುಮಧುರ ಸಾಲುಗಳು , ಅದ್ಭುತ ಕಲ್ಪನೆ ..... ಸುಂದರವಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .... ನಿಮಗೆ ನನ್ನವಳಲೋಕಕ್ಕೆ ಆತ್ಮಿಯ ಸ್ವಾಗತ
SATISH N GOWDA
http://nannavalaloka.blogspot.com/
Kalavatiyavre,
ReplyDeleteNimma kavana tumba sundaravaagide, nimma ella postgalnnu iga odutiddene. Nanna blog ge bandu sundra pratikriye neediddakke Dnanyavadagalu...ee bhandavya heege munduvariyali...
ವಿ.ಶೆಟ್ಟಿ ಯವರೇ ನಮ್ಮ ಬ್ಲಾಗ್ಗೆ ಆತ್ಮೀಯ ಸ್ವಾಗತ.ಹಾಗು ತಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೆ ಬರುತ್ತಿರಿ...
ReplyDeleteಸತಿಶಗೌಡ ರವರೆ ನಿಮಗೆ ಆತ್ಮೀಯ ಸ್ವಾಗತ,ನೀವು ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ,ಧನ್ಯವಾದಗಳು,ಹೀಗೆ ಬರುತ್ತಿರಿ
ReplyDeleteಚೆಂದದ ಕವನ.
ReplyDeletesitaram sir nimma mecchugege dhanyavaadagalu.
ReplyDelete