ಅಂತರತಮ ನೀ ಗುರೂ.......
ಎಂಥಾ ಮೊಗವಿತ್ತೆ, ಅದಕೇ ಏನು ಗುನುಗಿಟ್ಟೆ ?
ಕಾಣುವ ಕಣ್ಣಿಗೆ ದುಗುಡವ ತುಂಬಿದ ಭಾವಾ ಏಕಿತ್ತೆ ..?ಗುರುವೇ
ನೋಟಕೆ ನಗುವಿನ ಸೋಗನು ಸಾರುವ ನಾಟಕ ಮರೆಸಿಟ್ಟೆ
ಏನೋ ಅಪರಾಧವೆಸಗಿದೆವೆಂದು ಯೋಚಿಸುವಂತಿಟ್ಟೆ
ಭಾವಕೆ ಸ್ಪಷ್ಟನೆ ನೀಡದೆ ಉಳಿದರೆ ಮುನಿಸು ಸರಿಯಷ್ಟೇ..
ಮುನಿಸೂ ಸರಿಯಷ್ಟೇ...ಗುರುವೇ
ಬಾಹ್ಯಕೆ ಒಪ್ಪು ಆಂತರ್ಯಕೆ ಮುಪ್ಪು ಏಕೇ ನೀನಿಟ್ಟೆ ?
ಊರು ದಬ್ಬುವ ಕಾಡು ತಬ್ಬುವ ಕಾಲ ಏಕಿತ್ತೆ ?
ನೋಡಲು ಅಚ್ಚರಿಗೋಳ್ಳುತ ಬಯಸುವ ಬಯಕೆ ಏಕಿಟ್ಟೆ?
ಬಳ್ಳಿಯ ತಬ್ಬಿದ ಮರವನೆ ಉರುಳಿಸಿ ನೀ ಸಂತಸಪಟ್ಟೇ !
ನೀ ಸಂತಸಪಟ್ಟೆ....ಗುರುವೇ
ಬಾಡಿದ ಬಳ್ಳಿಗೆ ಬಂಧವ ಕಟ್ಟಿ ಕಾಯದ ಚಿಗುರಿಟ್ಟೆ
ಇರುಳಿನ ಕಂಬನಿ ಹಗಲಲಿ ಹೊಳೆವಾ ಇಬ್ಬನಿಯಾಗಿಟ್ಟೆ
ಅಂದದ ಹೂವಿಗೆ ಅಂತರತಮ ವೈರಾಗ್ಯವನೆಕಿಟ್ಟೇ?
ಮನಸು ಬರಿದೇ ಮಾಡಿ ಬದುಕ ಬಿಂದಿಗೆ ತುಂಬಿಟ್ಟೆ
ಬಿಂದಿಗೆ ತುಂಬಿಟ್ಟೆ..ಗುರುವೇ
ನೇರನುಡಿಗೆ ನಿಷ್ಟೂರದ ಮುನ್ನುಡಿ ಬರೆದಿಟ್ಟೇ !
ನೆರವೂ ಬೇಕಾದಾಗ ನೆಂಟರ ನೆನಪೂ ಬಂದಿತ್ತೇ!
ಸಂಬಂಧಗಳಲಿ ಹೊಂದಾಣಿಕೆಯ ಏಕೇ ಹೊರಗಿಟ್ಟೇ?
ಮಾತಲೇ ಮುತ್ತನು ಸುರಿಸಿ ಸೆಳೆಯುವ ಕಲೆಯ ಮರೆಸಿಟ್ಟೇ
ಕಲೆಯಾ ಮರೆಸಿಟ್ಟೆ ...ಗುರುವೇ
ಕಲಾವತಿಯವರೆ,
ReplyDeleteನಿಜ.. ಪ್ರಶ್ನೆಗಳಾಗಿ ಕಾಡುವ ವಿಚಾರಗಳನ್ನು ಕವನದಲ್ಲಿ ಚೆ೦ದವಾಗಿ ಮೂಡಿಸಿದ್ದೀರಿ.
"ಅಂದದ ಹೂವಿಗೆ ಅಂತರತಮ ವೈರಾಗ್ಯವನೆಕಿಟ್ಟೇ?" ಇಂಥ ಅದ್ಭುತ ಸಾಲುಗಳ ಬರೆಯುವ ಕಲೆ ಇವರಿಗೆ ಹೇಗೆ ಕೊಟ್ಟೆ ಗುರುವೇ...!
ReplyDeleteತುಂಬಾನೇ ಇಷ್ಟ ಆಯ್ತು ಚನ್ನಾಗಿದೆ ಕವನ
ಬಳ್ಳಿಯ ತಬ್ಬಿದ ಮರವನೆ ಉರುಳಿಸಿ ನೀ ಸಂತಸಪಟ್ಟೇ ....
ReplyDeleteಚೆನ್ನಾಗಿದೆ ಸಾಲು....
ಚೆಂದದ ಕವನ....
ಕಲಾವತಿ ಮೇಡಂ ನಮಸ್ಕಾರ .ನೀವು ನನ್ನ ಬ್ಲಾಗ್ ಗೆ ಬಂದು ಕಾಮೆಂಟ್ ಮಾಡಿದ್ದೀರಾ ನಿಮಗೆ ಸ್ವಾಗತ .ನಿಮ್ಮ ಕವನ ಬಾಡಿದ ಬಳ್ಳಿಗೆ ಬಂಧವ ಕಟ್ಟಿ ಕಾಯದ ಚಿಗುರಿಟ್ಟೆ
ReplyDeleteಇರುಳಿನ ಕಂಬನಿ ಹಗಲಲಿ ಹೊಳೆವಾ ಇಬ್ಬನಿಯಾಗಿಟ್ಟೆ
ಅಂದದ ಹೂವಿಗೆ ಅಂತರತಮ ವೈರಾಗ್ಯವನೆಕಿಟ್ಟೇ?
ಮನಸು ಬರಿದೇ ಮಾಡಿ ಬದುಕ ಬಿಂದಿಗೆ ತುಂಬಿಟ್ಟೆ
ಬಿಂದಿಗೆ ತುಂಬಿಟ್ಟೆ..ಗುರುವೇ............................................ ನನಗೆ ಇಷ್ಟ ವಾದ ಸಾಲುಗಳು . ನಿಮ್ಮ ಕಲ್ಪನೆ ಆಘಾದ .ಲಹರಿ ಹೀಗೆ ಹರಿದು ಬರಲಿ.ನಿಮಗೆ ಧನ್ಯವಾದಗಳು.
--
ಪ್ರೀತಿಯಿಂದ ನಿಮ್ಮವ ಬಾಲು.
ಮನಮುಕ್ತಾ ರವರೆ ನಮ್ಮ ಬ್ಲಾಗ್ಗೆ ಆತ್ಮೀಯ ಸ್ವಾಗತ.ತಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.ಆಗಾಗ ಬರುತ್ತಿರಿ.
ReplyDeleteಮಂಜುರವರೆ,ಅನುಭವದ ಅಂತರಂಗವೇ ಕಲಾರಂಗದ ಗುರುವಲ್ಲವೆ,ನಿಮ್ಮ ಭಾವಪೂರ್ಣ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.ಹೀಗೆ ಬರುತ್ತಿರಿ...
ReplyDeleteಮಹೇಶರವರೆ,ನಮ್ಮ ಬ್ಲಾಗ್ಗೆ ಆತ್ಮೀಯ ಸ್ವಾಗತ.ತಮ್ಮ ಭಾವಪೂರ್ಣ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.
ReplyDeleteಹೀಗೆ ಬರುತ್ತಿರಿ.
ಬಾಲುಸಾರ್ ರವರೆ ನಮಸ್ಕಾರ ,ನಮ್ಮ ಬ್ಲಾಗ್ಗೆ ಆತ್ಮೀಯ ಸ್ವಾಗತ.ತಮ್ಮ ಭಾವನಾತ್ಮಕ ಪ್ರತಿಕ್ರಿಯೆಗೆ ಹಾಗು ಪ್ರೋತ್ಸಾಹಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.ಹೀಗೆ ಬರುತ್ತಿರಿ.
ReplyDeleteಕಲಾವತಿಯವ್ರೆ,
ReplyDeleteತುಂಬಾ ಸುಂದರ ಕವನ, ಕವನದ ಆಶಯ ತುಂಬಾ ಚೆನ್ನಾಗಿದೆ, ಅರ್ಥಪೂರ್ಣ ಕವನ, ಧನ್ಯವಾದಗಳು.
ಅಂತರಂಗದ ಅಳಲಿಗೆ ಕವನವೇ ಸಮಾಧಾನ. ನಿಮ್ಮ ಕವನವು ಭಾವಪೂರ್ಣವಾಗಿದೆ.
ReplyDeleteವಿ.ಶೆಟ್ಟಿಯವರೇ ನಿಮ್ಮ ಭಾವಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೆ ಬರುತ್ತಿರಿ.....
ReplyDeleteಸುನಾಥ್ ರವರೆ ನಮ್ಮ ಬ್ಲಾಗ್ಗೆ ಆತ್ಮೀಯ ಸ್ವಾಗತ,ಭಾವವೆಂಬ ಹೂವರಳಿದಾಗಲಲ್ಲವೇ ಮನವೆಂಬ ಮೊಗ್ಗರಳುವುದು.ತಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.ಆಗಾಗ ಬರುತ್ತಿರಿ...
ReplyDeletenanna blog ge comment maadidakke dhanyavaada madam.innu nivu bidisuva ondonde kavanada odalolagina sambhanda prashneya roopa sogasaagide..
ReplyDeleteಕಲರವದ ತನನ ಮೂಡಿತೊಂದು ಕವನ....ಬಾಹ್ಯಕೆ ಒಪ್ಪು ಆಂತರ್ಯಕೆ ಮುಪ್ಪು ಏಕೇ ನೀನಿಟ್ಟೆ ?
ReplyDeleteಊರು ದಬ್ಬುವ ಕಾಡು ತಬ್ಬುವ ಕಾಲ ಏಕಿತ್ತೆ ? ಹೌದು ಬಹು ಸುಂದರ ಪ್ರಶ್ನೆ...?
ಅನಂತರಾಜ್ ರವರೆ ಚಿತ್ರಕ್ಕೆ ನಿಮ್ಮ ಅನಿಸಿಕೆ ಸರಿಯಾಗಿಯೇ ಇದೆ.ಅಂತರ್ಜಾಲದ ನಿರ್ವಹಣೆ ನನಗಿನ್ನೂ ಅ, ಆ ಹಂತವೇ, ನನ್ನ ಮಗಳುಚಿತ್ರಕ್ಕೆ ಚಿತ್ರಣವನ್ನು ಸೇರಿಸಿದ್ದಾಳೆ,ನೋಡಿ ತಮ್ಮ ಅಭಿಪ್ರಾಯ ತಿಳಿಸಿರಿ.ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಈಶಕುಮಾರ್ ರವರೆ ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೆ ಬರುತ್ತಿರಿ
ReplyDeleteಜಲಾನಯನ ಕಲರವದೆಡೆ ಹರಿದಿದ್ದಕ್ಕೆ ಆತ್ಮೀಯ ಸ್ವಾಗತ.ನಿಮ್ಮ ಕಾವ್ಯಾತ್ಮಕ ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೆ ಬರುತ್ತಿರಿ.
ReplyDeleteಕಲಾವತಿಯವರೇ,ಉತ್ತರಕ್ಕಾಗಿ ಹುಡುಕುವ ಹಲವು ಪ್ರಶ್ನೆಗಳನ್ನು ಕವನವಾಗಿಸಿದ ಪರಿ ಸು೦ದರ.ನಿಮ್ಮ ಬ್ಲಾಗ್ ನ ಮೊದಲ ಭೇಟಿಯಲ್ಲಿಯೇ ಕವನ ಇಷ್ಟವಾಯಿತು.ಅಭಿನ೦ದನೆಗಳು.
ReplyDeleteಕುಸು ಮಲಿಯಾಳರವೆರೆ ನಮ್ಮಬ್ಲೋಗ್ಗೆ ಆತ್ಮೀಯ ಸ್ವಾಗತ.ನಮ್ಮ ಬ್ಲಾಗನ ಮೊದಲ ಭೇಟಿ ಯಲ್ಲೇ ನಿಮಗೆ ಮೆಚ್ಚುಗೆ ಯಾಗಿರುವುದು ನಮಗೂ ಸಂತಸ.ನಿಮ್ಮ ಆತ್ಮೀಯ ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು."ಬ್ಲಾಗ್ ಬಳಗದ ಪ್ರೋತ್ಸಾಹದ ಪ್ರೀತಿಯ ಪ್ರತಿಕ್ರಿಯೆಯೇ ನಮಗೆ ಉತ್ಸಾಹ"ಹೀಗೆ ಬರುತ್ತಿರಿ...
ReplyDeleteಗೆಳತಿ ಕಲಾವತಿಯವರೇ,
ReplyDeleteನಿಮ್ಮ ಕವನ ನಮಗೆ ಉತ್ತರಿಸಲಾಗದ ಕಾಲವೇ ಉತ್ತರಿಸಬಲ್ಲ ಪ್ರಶ್ನೆಗಳಿ೦ದ
ಕೂಡಿದ್ದು ಅರ್ಥಪೂರ್ಣವಾಗಿ ಮೂಡಿ ಬ೦ದಿದೆ. ಅಭಿನ೦ದನೆಗಳು.
ಗೆಳತಿ ಪ್ರಭಾಮಣಿ ಯವರೇ ನಿಮ್ಮ ಉತ್ತಮ ಅಭಿಪ್ರಾಯಕ್ಕೆ ಧನ್ಯವಾದಗಳು.ಆಗಾಗ ಬರುತ್ತಿರಿ .
ReplyDeleteತುಂಬಾ ಭಾವಪೂರ್ಣವಾಗಿ ಅದು ಸೂಕ್ತ ಪ್ರಾಸ ಶಬ್ದಗಳ ಲಾಲಿತ್ಯದಲ್ಲಿ ಪೋಣಿಸಿ, ಸೊಗಸಾಗಿ ಕವನ ಹೆಣೆದಿದ್ದಿರಾ...
ReplyDeleteಸೀತಾರಾಂ ಸರ್ ರವರಿಗೆ ನಮ್ಮ ಬ್ಲಾಗ್ ಗೆ ಆತ್ಮೀಯವಾದ ಸ್ವಾಗತ.ಮತ್ತು ಭಾವಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDelete