Oct 28, 2010



ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು

ಗಿರಿಕಾನನಗಳ ನಡುವೆಯೇ ಸಾಗಿಹ
ಸುಂದರ ವೇಣಿಯ ಹೆದ್ದಾರಿ 
ವನರಾಶಿಯ ಸೊಬಗಿಗೆ ರಹದಾರಿ

ನಯನ ಹರಿದರತ್ತತ್ತ ಒತ್ತೊತ್ತ ಹಸಿರಸಿರಿ
ವಾತ್ಸಲ್ಯದಿ ಒಂದಕೊಂದು ಬೆಸೆದ ಬೆಟ್ಟಹಾರ  
ನಟ್ಟನಡುವೆ ಪುಟ್ಟ ಮುದ್ದುಮನೆ

ಅಂಕು ಡೊಂಕು ಹಾದಿಗೇ ಎದುರೆ ಚಾಚಿದಂತೆ ಬೆಟ್ಟ
                                          ರವಿಕಿರಣದ ನರ್ತನದಿ                                            
ಪಂಚರಂಗಿ ಪರ್ಣಶಾಲೆ ಹಡೆದ ಹೊನ್ನದರ್ಶನ 
ಶೋಭಿತೆಯರ ಸಭಾಂಗಣ  
                                                                                              
ಸುಮನೋಹರ ಸುರಸುಂದರ ಬಿನ್ನಾಣಗಿತ್ತಿಯರು  
ಸುತ್ತಲು  ಜಲರಾಶಿಗೆ ಮುತ್ತಿನಿಂತು  ಗಿರಿವನವನೆ  
ಅಪ್ಪಿಕೊಂಡ ಆಗಸಕೆ ಸುವರ್ಣ  ತಳಿರ ತೋರಣ  

ಚುಮುಚುಮು ಚಳಿಯಲಿ ಚೈತ್ರನ ಬರವಿಗೆ
ತನ್ನೆಲೆಗಳನೆ  ಸುವರ್ಣಗೊಳಿಸಿ ಕಾದಿಹ 
ಸುಮನಸೆ ಹಸಿರಲೇ ಹಾಯ್ದ ಹೂವಿನ ಭೂಸಿರಿ

ತರಳೆಯರಿಲ್ಲದ ಊರಲಿ ಮಾಗಿದ ತಳಿರೆ ತಳೆದಿಹ  
ವರ್ಣರಂಜಿತ ಮೈಸೊಬಗು,ಆಹ್ವಾನಕಲಂಕೃತ 
ಹೂಧಾನಿ, ಮಂದಹಾಸದ ಮಿನುಗು  ಸ್ವಾಗತಕೆ  

ಸಸ್ಯ ಶ್ಯಾ - ಮಲೆಯರ ನಡುವೆ
ನಿತ್ಯ ಕೋಮಲೆಯರ ಮಾಯಮಾಲುಗಳು
ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು
ಒಡಲೊಳಗೆ, ಭೇದವಿಲ್ಲದೆ  ಬೆರೆತು ಮರೆಯೋಣ
ಅರೆಘಳಿಗೆ  ಕಲ್ಲು ಮುಳ್ಳುಗಳ ಕಡಲು

 -----------------------------------

ಮೂರು ಮಾಸಗಳ ಮನೋಲ್ಲಾಸಕೆ ಮತ್ತು ಬ್ಲಾಗ್ ಲೋಕವನ್ನು ಪ್ರವೇಶಿಸಲು ಮೂಲ
ಕಾರಣ ಕರ್ತರು,ಪ್ರೇರಕರು, ಕವನಸ್ಪೂರ್ತಿಯಸೆಲೆಗಳೂ ಆದ,

        ನನ್ನ ಪ್ರೀತಿಯ  ಮಾನಸರಘುಪ್ರಸಾದ್ ರವರಿಗೆ  
         ದ್ವಿತೀಯ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭ ಹಾರೈಕೆಯೊಂದಿಗೆ ಪ್ರೀತಿಯ
  ಉಡುಗೊರೆಯಾಗಿ ಈ  ಕವನಕಾಣಿಕೆ.   

ಪ್ರಕೃತಿಯ ಪೂರಣದಂತೆ ನಿಮ್ಮ ವೈವಾಹಿಕ
ಬದುಕು ಎಂದೆದೂ  ಹಸಿರಾಗಿರಲೆಂದು
ಹಾರೈಸುವ ಅಮ್ಮ ಕಲಾವತಿಮಧುಸೂಧನ್



16 comments:

  1. ಸುಂದರ ಪದಗಳ ಅರ್ಥಪೂರ್ಣ ಅಲಂಕಾರ ನಿಮ್ಮ ಕವಿತೆ .ನಿಮ್ಮ ಕವಿತೆ ಚೆನ್ನಾಗಿದೆ.ನಿಮ್ಮ ಪ್ರೀತಿಯ ಗೆಳತಿಗೆ ಒಳ್ಳೆಯ ಕೊಡುಗೆ ನೀಡಿದ್ದೀರಿ. ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

    ReplyDelete
  2. ತು೦ಬಾ ಸು೦ದರವಾಗಿ ಕವಿತೆಯ ಮೂಲಕ ನಿಮ್ಮ ಮಗಳಿಗೆ ಪ್ರೀತಿಯ ಉಡುಗೊರೆ ನೀಡಿದ್ದೀರಿ.
    ಮಾನಸ ರಘುಪ್ರಸಾದ್ ಶುಭಹಾರೈಕೆಗಳು.
    ನಿಮಗೆ ವ೦ದನೆಗಳು.

    ReplyDelete
  3. ಸು೦ದರ ಕವಿತೆಯನ್ನು ಬರೆದು ಉಡುಗೊರೆ ನೀಡಿದ್ದೀರಾ..ಮಾನಸ ರಘುಪ್ರಸಾದ್ ರವರಿಗೂ ಶುಭ ಹಾರೈಕೆಗಳು.

    ReplyDelete
  4. ಬಾಲು ಸರ್ ರವರೆ,ನಿಮ್ಮ ಶೀಘ್ರ,ಉತ್ತಮ, ಪ್ರೋತ್ಸಾಹಕರ ಆತ್ಮೀಯ ಪ್ರತಿಕ್ರಿಯೆಗೆ,ಹೃತ್ಪೂರ್ವಕ ಧನ್ಯವಾದಗಳು.ನಿಮಗೂ "ಕನ್ನಡ ರಾಜ್ಯೋತ್ಸವದ ಶುಭಾಶಯಗಳು".

    ReplyDelete
  5. ಮನಮುಕ್ತರವರೆ ನಿಮ್ಮ ಶೀಘ್ರ,ಆತ್ಮೀಯ, ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.ಮತ್ತು "ಮಾನಸರಘುಪ್ರಸಾದ್"ರವರಿಗೆ ನಿಮ್ಮ

    ಶುಭಹಾರೈಕೆಗಾಗಿ ಧನ್ಯವಾದಗಳು.ನಿಮಗೆ "ಕನ್ನಡ ರಾಜ್ಯೋತ್ಸವದ ಶುಭಾಶಯಗಳು."

    ReplyDelete
  6. ಅನಂತರಾಜ್ ಸರ್ ರವರೆ,ನಿಮ್ಮಶೀಘ್ರ,ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಶುಭಹಾರೈಕೆಗಾಗಿ ಧನ್ಯವಾದಗಳು.
    ಮತ್ತು "ಕನ್ನಡ ರಾಜ್ಯೋತ್ಸವದ ಶುಭಾಶಯಗಳು".

    ReplyDelete
  7. ನಿಮ್ಮ ಕವನದ ಉಡುಗೊರೆ ಸು೦ದರವಾಗಿತ್ತು.ನಿಮ್ಮ ಗೆಳತಿ ಮಾನಸ ರಘುಪ್ರಸಾದ್ ರವರಿಗೂ ಶುಭ ಹಾರೈಕೆಗಳು.

    ReplyDelete
  8. ನಿಮ್ಮ ಮಗಳಿಗೆ ಇದಕ್ಕಿಂತ ಸುಂದರ ಉಡುಗೊರೆ ಬೇಕೇ? ಉತ್ತಮ ಕವನವನ್ನು ಬರೆದು ಗಿಪ್ಟ್ ಮಾಡಿರುವುದು ನಿಜಕ್ಕೂ ಖುಷಿ.

    ReplyDelete
  9. ಗೆಳತಿ ಕಲಾವತಿ,
    ಮೊದಲು ಮಾನಸ ರಘುಪ್ರಸಾದ್ ಅವರಿಗೆ ಎರಡನೆ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಹಾರೈಕೆಗಳು. ನಿಮ್ಮ ಕವನ ಆಕರ್ಷಕ ಪದಪು೦ಜಗಳಿ೦ದ ಕೂಡಿದ್ದು ಅರ್ಥವತ್ತಾಗಿ ಮೂಡಿ ಬ೦ದಿದೆ. ಅಭಿನ೦ದನೆಗಳು. ಕವನಗಳ ಜೊತೆಗೆ ಅಲ್ಲಿಯ ನಿಮ್ಮ ಅನುಭವಗಳ ಪ್ರವಾಸ ಕಥನವೂ ಬರಲಿ ಎ೦ದು ಆಶಿಸುತ್ತೇನೆ.

    ReplyDelete
  10. ಕುಸು ಮುಲಿಯಾಳರವರೆ ನೀವು ಕವನದಬಗ್ಗೆ ನಿಮ್ಮಉತ್ತಮ ಪ್ರತಿಕ್ರಿಯೆ ,ವ್ಯಕ್ತ ಪಡಿಸಿದ್ದೀರಿ.ಮತ್ತು ನಮ್ಮ ಮಕ್ಕಳಿಗೆ ಶುಭ ಹಾರೈಸಿದ್ದೀರಿ.ನಿಮಗೆಹೃತ್ಪೂರ್ವಕ ಧನ್ಯವಾದಗಳು.ಮತ್ತು" ಕನ್ನಡ ರಾಜ್ಯೋತ್ಸವದ ಶುಭಾಶಯಗಳು."

    ReplyDelete
  11. ಶಿವು ಸರ್ ರವರೆ,
    ನಮ್ಮ ಬ್ಲಾಗ್ ಗೆ ನಿಮಗೆ ಆತ್ಮೀಯ ಸ್ವಾಗತ .ಸುಂದರವಾದಪ್ರಕೃತಿ ಕುರಿತಾದ ಕವನ ಸುಂದರವಾಗಿದೆ ಎಂದರೆ ಅದು ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಉಡುಗೊರೆ ಎಂದುಕೊಳ್ಳುತ್ತೇನೆ.
    ನೀವು ಕವನದಬಗ್ಗೆ ನಿಮ್ಮಉತ್ತಮ ಪ್ರತಿಕ್ರಿಯೆ ,ವ್ಯಕ್ತ ಪಡಿಸಿದ್ದೀರಿ.ಮತ್ತು ನಮ್ಮ ಮಕ್ಕಳಿಗೆ ಶುಭ ಹಾರೈಸಿದ್ದೀರಿ.ನಿಮಗೆಹೃತ್ಪೂರ್ವಕ ಧನ್ಯವಾದಗಳು.
    ನಿಮಗೆ "ಕನ್ನಡ ರಾಜ್ಯೋತ್ಸವದ ಶುಭಾಶಯಗಳು".

    ReplyDelete
  12. ಪ್ರಭಾಮಣಿ ಯವರೇ,"ಹೂವಿನಿಂದ ನಾರು ಸ್ವರ್ಗ ಸೇರಿತು"ಅನ್ನೋ ಹಾಗೆ ಪ್ರಕೃತಿಗೆ ,ಅದರ ಅನುಭವಕ್ಕೆ ಕಾರಣರಾದವರಿಗೆ,ಸಲ್ಲಬೇಕಾದ ಸಮ್ಮಾ ನದೊಂದಿಗೆ,ನನಗೂ ಸಮ್ಮಾನ ಸಿಕ್ಕಹಾಗೆ.ಇನ್ನು ಪ್ರವಾಸ ಕಥನಬರೆಯಲು ನನ್ನಮಗಳೂ ಮತ್ತು ನನ್ನ ಸ್ನೇಹಿತೆ ಇಬ್ಬರೂ ಉತ್ತೆಜಿಸುತ್ತಿದ್ದೀರ,ನಿಮ್ಮ ಪ್ರತಿಭಾಶೈಲಿಯ ಪ್ರಭಾವ ನನ್ನ ಕಡೆಗೂ ಸ್ವಲ್ಪ ಹರಿದಿದ್ದರೆ ಖಂಡಿತ ಪ್ರಯತ್ನಿಸುತ್ತೇನೆ.ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಮತ್ತು ತಮ್ಮ ಶುಭ ಹಾರೈಕೆಗೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.ಮತ್ತು
    "ಕನ್ನಡ ರಾಜ್ಯೋತ್ಸವದ ಶುಭಾಶಯಗಳು".

    ReplyDelete
  13. ಪ್ರಭ ,
    ಕವನ ಸೊಗಸಾಗಿತ್ತು..ಮಾನಸಳಿಗೆ ಎರಡನೆ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಹಾರೈಕೆಗಳನ್ನು ತಿಳಿಸಿ

    ReplyDelete
  14. ಶಶಿ ಜೋಷಿ ಯವರೇ,ನೀವು ನನ್ನ ಹೆಸರನ್ನ ಮಿಸ್ ಮಾಡಿಕೊಂಡಿದ್ದೀರ ಅನ್ನಿಸತ್ತೆ,ಪರವಾಗಿಲ್ಲ,ನಮ್ಮ ಬ್ಲಾಗ್ಗೆ ನಿಮಗೆ ಆತ್ಮೀಯ ಸ್ವಾಗತ.ಮತ್ತು ನಮ್ಮ ಮಗಳ ಶುಭಹಾರೈಕೆಗಾಗಿ ಹಾಗು ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  15. ಚೆಂದದ ಕವನ. ತಮ್ಮ ಮಗಳು ಅಳಿಯರಿಗೆ ಮಾಡುವೆ ವಾರ್ಷ್ಕೊತ್ಸವದ ಶುಭಾಶಯಗಳು.

    ReplyDelete
  16. ಸೀತಾರಾಂ ಸರ್ ರವರೆ ನಿಮ್ಮ ಉತ್ತಮ ಅಭಿಪ್ರಾಯಕ್ಕಾಗಿ,ಮತ್ತು ನಮ್ಮ ಮಕ್ಕಳಿಗೆ ತಮ್ಮ ಶುಭ ಹಾರೈಕೆ ಗಾಗಿ ಧನ್ಯವಾದಗಳು.

    ReplyDelete