ಬುದ್ಧ -ಬದುಕು
ಒಮ್ಮೊಮ್ಮೆ ಯಾವುದಾದರು ಕಾವ್ಯ ,ಕತೆ, ಕವನ ಲೇಖನ ಇವುಗಳನ್ನು ಓದಿ ಅವುಗಳ ಬಗ್ಗೆ
ಅಚ್ಚರಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಸಿಗುವಆನಂದ ಪಟ್ಟಶ್ರಮಕ್ಕೆಸಿಕ್ಕಪ್ರತಿಫಲ,ಧನ್ ಯತೆ,ಸಾರ್ಥಕತೆ
ಅಪರಿಮಿತ,ಅನನ್ಯ. ಹೀಗಿದ್ದಾಗ ಬದುಕೊಂದು ಮೌಲ್ಯಯುತ ಕಾವ್ಯವಾಗುಳಿಯುವುದು ಎಂತಹ
ಅಪ್ಯಾಯಮಾನವಲ್ಲವೇ...!!!! ಆದರೆ ಯಾವುದೇ ಪ್ರಕಾರವನ್ನು ಮನಮುಟ್ಟುವಂತೆ ನಿರೂಪಿಸುವ
ಶೈಲಿ, ಕಲೆ ಎಲ್ಲರಿಗೂ ಸಿದ್ದಿಸದು.ಅದು ಅಷ್ಟು ಸುಲಭ ಸಾಧ್ಯವೂ ಅಲ್ಲ.ಹಾಗೆಯೇ
ಅದು ಅನುಭವ, ಅನಿಸಿಕೆ, ಕಲ್ಪನೇ ಯಾವುದೇ ಆದರು ಅದನ್ನು ಮುಕ್ತವಾಗಿ ಪ್ರಸ್ತುತಪಡಿಸಿದ
ಯಾವುದೇ ಹಾಸ್ಯ, ವಿಡಂಬನೆಯ, ಸಂದೇಶವುಳ್ಳ ಕೃತಿಗಳು ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸಿ,
ಮತ್ತು ಮೆಚ್ಚುಗೆ ಪಡೆದ ಅರ್ಥಪೂರ್ಣಲೇಖನವೊಂದು ನಮ್ಮಿಂದ ಹೊರಹೊಮ್ಮಿದಾಗ ನಮ್ಮಶ್ರಮಸಾರ್ಥಕವೆನಿಸುವುದು.ಅತೀವ ಸಂತೋಷವಾಗುವುದು ಎಲ್ಲರಿಗೂ ಸಹಜ.
ಅದು ಕೆಲವೇ ಸಹೃದಯರು ಅರ್ಥೈಸಿ ಅನಂದಿಸಿದರೂ ಸಹ. ಅಂತಹ ಸಂದರ್ಭದಲ್ಲಿ ನನಗನಿಸಿದ್ದು "ಬದುಕೊಂದು ಮೌಲ್ಯಯುತ ಕಾವ್ಯವಾಗುಳಿಯುವುದು ಎಂತಹಾ ಅಪ್ಯಾಯಮಾನ" "ಎನಿಸಿ,"ಬದುಕು"ಎಂಬುದು ಅದೆಷ್ಟು ಹರವಾದದ್ದು ಎನಿಸಿತು.ಹಾಗೆ ಅದರ ಬಗ್ಗೆ ಇನ್ನಷ್ಟು
ಅರಿಯಬೇಕೆನ್ನಿಸಿ ಈ ಲೇಖನ ಮುಂದುವರೆಸಿದೆ.
ಬದುಕು -ಎಂದರೆ ಜೀವ,ಜೀವಂತಿಕೆ,ಜೀವನವನ್ನು ಅರ್ಥೈಸುವ ಶಬ್ದ .ಆದರೆ ಅದು ಕೇವಲ
ಶಭ್ದ ಮಾತ್ರವಲ್ಲ,ಪ್ರತಿ ಜೀವಿಯ ಜೀವಿತದಲ್ಲೂ ಮೌಲ್ಯ- ಅಪಮೌಲ್ಯಗಳನ್ನೂ ತುಲನೆ ಮಾಡುತ್ತಾ
ಬದುಕು ಜಟಕಾ ಬಂಡಿಯಹಾಗೆ ಸಾಗುತ್ತಿರುತ್ತದೆ.ಕೆಲವು ರೈಲಿನಂತೆ.ಮತ್ತೇ ಕೆಲವು
ಜೋಡೆತ್ತಿನ ಬಂಡಿಯಂತೆ ಎತ್ತೆತ್ತಲೋ ಓಡದಂತೆ ಮೂಗುದಾರ ಹಿಡಿದು ಜಗ್ಗಿ ಸರಿದಾರಿಯಲಿ
ನಡೆಸುವ ಮಾಲಿಕನಂತೆ.ಮತ್ತೇ ಕೆಲವು ಸಂತೆಯಲ್ಲಿ ನುಗ್ಗಿ, ಸಿಕ್ಕಿದ್ದಕ್ಕೆ ಮೂತಿ ಹಾಕಲು,
ಅಟ್ಟಲುಹೋದಾಗ ಗಾಬರಿಗೊಂಡು ಎತ್ತೆತ್ತಲೋನುಗ್ಗಿ ತಾನೂ ಗಾಬರಿ ಗೊಂಡು,
ಇತರರನ್ನು ಗಾಬರಿಗೊಳಿಸಿ ಗೊಂದಲಕ್ಕೀ ಡುಮಾಡಿ ಪೇಚಿಗೆ ಸಿಕ್ಕಿಸುವಂತೆ ಮಾಡಿ
ಬದುಕು ಸಾಗುತ್ತಿರುತ್ತದೆ.ಒಬ್ಬೊಬ್ಬರದು ಒಂದೊಂದು ತೆರನಾದ ಹೋರಾಟದ ಬದುಕು.
ಬದುಕು ಎಂಬುದು "ನೀನು ಬದುಕು,ಇತರರನ್ನು ಬ ದುಕಲು ಬಿಡು" ಎಂಬ ಮೂಲ
ಮಂತ್ರದೊಂದಿಗೆ ಸಮ್ಮಿಲಿತಗೊಂಡಿದೆ. ಹಗಲೆಲ್ಲ ಹುಲ್ ಲು ,ಕಸಕಡ್ಡಿ ತಿಂದು ಮಾಲಿಕನಿಗೆ
ಅಮೃತವನ್ನು ನೀಡಿ ಬದುಕಿನ ಸಾರ್ ಥಕತೆಯನ್ನು ಕಂಡುಕೊಳ್ಳುವ ಕಾಮಧೇನು ವಿನಂತೆ
ಹಲವರ ಬದುಕು."ಬದುಕು ಜಟಕಾ ಬಂಡಿ,ವಿಧಿ ಅದರ ಸಾಹೆಬಾ"ಆ ವಿ ಧಿ ನಡೆಸಿದಂತಾಗಲಿ
ಎಂದು ಕೈ ಚೆಲ್ಲಿಕೂರುವವರು ಹಲವರಾದರೆ,ಗೆಟ್ ಫ್ರೀ ಎನ್ನುವುದು ಕೆಲವರ ಬದುಕು.
ಡಾ.ಎಸ್. ಚಂದ್ರಕಿರಣ್ ರವರ,"ಪ್ರಾಚೀನ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು"ಬದುಕಿನ
ಕುರಿತು ಬುದ್ಧ ಹೇಳಿರುವ ವಿಚಾರ ಸಾಮಾನ್ಯರಿಗೂ ಸರಳವಾಗಿ ಮನದಾಳಕ್ಕಿಳಿಯುವುದು.
ಭೋಗಲೋಲುಪತೆ,ದೇಹ ದಂಡನೆಗಳ ನಡುವಣ ಸುವರ್ಣ ಮಧ್ಯಮ ಪಥಕ್ಕೆ ಪ್ರಾಶಸ್ತ್ಯ ನೀಡಿದ
ಬುದ್ಧ ನೈತಿಕತೆಯ ಬದುಕಿಗೆ ಪ್ರಾಧಾನ್ಯತೆ ಕೊಡುತ್ತಾನೆ.ಪ್ರತಿ ಮಾನವತ್ವವೂ ವಿಶ್ವಾತ್ಮದ ಒಂದು
ಭಾಗ ಎಂದು ಹೇಳುತ್ತಾನೆ.ವ್ಯಕ್ತಿ ತನ್ನನ್ನು ತಾನು ಗೆಲ್ಲುವುದೇ ದೊಡ್ಡ ವಿಜಯ.ಸಂಯಮವೇ ದೊಡ್ಡ
ಗುಣವೆಂದು ಸಾರಿದ."ನವೈರಂ ವೈರೆಣ ಶಾಮ್ಯತಿ,ಅವೈರೆಣ ಶಾಮ್ಯತಿ" ದ್ವೇಷದಿಂದ
ದ್ವೇಷ ಶಮನವಾಗದು.ಪ್ರೀತಿಯಿಂದ ಶಮನವಾಗುತ್ತದೆ.ಕೋಪವನ್ನು ದಯೆಯಿಂದ,ಕೆಡುಕನ್ನು
ಒಳಿತಿನಿಂದ ಗೆಲ್ಲಬೇಕು.ಹೀಗೆಬದುಕಿನ ಮಾರ್ಗದರ್ಶಕ ನಿಲುವುಗಳನ್ನುಪ್ರತಿಪಾದಿಸುತ್ತಾನೆ.
ಹಲವಾರು ಕ್ಷೇತ್ರದಲ್ಲಿ ಹಲವಾರು ಬಗೆಯಲ್ಲಿ ಸಾಧಿಸಿ ಸಾರ್ಥಕ ಬದುಕನ್ ನಾಗಿಸಿಕೊಳ್ಳುವ
ಹಂಬಲ ಹಲವರಿಗೆ. ಬದುಕಿಗೆ ಬದ್ಧನಾದ ಬುದ್ಧನ,ಬದುಕಿನ ಬಗೆಗಿನ ವಿಚಾರಧಾರೆಯಲ್ಲಿ ವ್ಯಕ್ತಿ ತಾನೇ ತನ್ನ ಪರಿಶ್ರಮದಿಂದ ದುಡಿದು ಬದುಕಬೇಕು "ಧಮ್ಮ,ದೀಪೋ,ವಿಹರಥ.ಧಮ್ಮ ಸರಣ ಅನನ್ನಸರಣ"ಅಂದರೆ "
"ನಿನಗೆ ನೀನೇ ದಿಪವಾಗು.ಬೆಳಕಾಗು ಅನ್ಯರನ್ನು ಆಶ್ರಾಯಿಸಬೇಡ."
ಹಾಗೆ "ನಾನು ಮಾರ್ಗಧಾತನೆ ಹೊರತು ಮುಕ್ತಿಧಾತನಲ್ಲ"ನಿನ್ನ ಸುಖಕ್ಕೆ-ನಿ ನ್ನ ದುಃಖಕ್ಕೆ,
ನಿನ್ನ ಮಂಗಳಕ್ಕೆ ,ನಿನ್ನ ಅಮಂಗಳಕ್ಕೆನೀನೇ ಜವಾಬ್ದಾರ"ನೆಂದ.ಅದಕ್ಕಾಗಿ ಬದುಕಿನ ಸತ್ಯವನ್ನು
ಕುರಿತು ಗಾಢವಾಗಿ ವಿಚಾರಮಾಡಬೇಕು.ಈ ವಿಚಾರಗಳಿಂದಲೇ ಮನುಷ್ಯ ಸಹಜ ಹಾಗೂ
ಸ್ವತಂತ್ರನಾಗುತ್ತಾನೆ.ವಿಚಾರಗಳ ಮೂ ಲಕ ಬದುಕನ್ನು ಸಹ್ಯಗೊಳಿಸಿಕೊಳ್ಳುವುದೇ ಧರ್ಮ.ಎಲ್ಲಿ
ದಾರಿಗಳಿಲ್ಲವೋ ಅಲ್ಲಿ ದಾರಿ ಮಾಡಿಕೊ ಂಡು ನಮಗೆ ನಾವೇ ದಾರಿದೀಪವಾಗುವುದು ಬದುಕು.
ದೇವರು,ಧರ್ಮ,ಶಾಸ್ತ್ರ ಗುರು ಇತ್ಯಾ ದಿಗಳ ನೆರವಿಲ್ಲದೆ ಮನುಷ್ಯ ತನ್ನ ಬಿಡುಗಡೆಯನ್ನು,ತನ್ನ
ದಾರಿಯನ್ನು ತಾನೇ ಕಂಡುಕೊಳ್ಳಬೇಕು. ಎಂದು ಜಗತ್ತಿನ ಚರಿತ್ರೆಯಲ್ಲಿ ಮೊಟ್ಟಮೊ ದಲಿಗೆ
ಹೇಳಿದವನು ಬುದ್ಧನೊಬ್ಬನೇ. ಬದುಕು ಪ್ರೇಮದ ದಾರಿದೀಪವಾಗಿ ಮಾನವಲೋಕದ ಕಷ್ಟ
ಕಾರ್ಪಣ್ಯ ಆತಂಕ ದುಗುಡವನ್ನು ದಾಟಿ ಕ್ಷುದ್ರವಾದುದೆಲ್ಲವನ್ನು ತಿರಸ್ ಕರಿಸಿ,ಗಟ್ಟಿಯಾದ
ಮಾನವೀಯ ವೈಚಾರಿಕತೆಯ ನೆಲೆಗಟ್ಟಿನಮೇ ಲೆ ತನ್ನ ಸಮಾಜೋದ್ದಾರ ಧಾರ್ಮಿಕ
ನಿಲುವುಗಳನ್ನು ರೂಪಿಸಿದ ಬುದ್ದ ಹೇಳಿದ್ದು ,ಉದಾತ್ತ ಸತ್ಯಗಳನ್ನು ಕುರಿತು.
ಧರ್ಮವೆಂದರೆ ವಾಸ್ತವಿಕ ಸತ್ಯದಿಂದ ಬದುಕನ್ನು ಸಹ್ಯವಾಗಿ ರೂಪಿಸಿಕೊಳ್ಳುವ ಜೀವನ ಕಲೆ.
ಹೀಗಾಗಿ ಬುದ್ಧನ ಭೋಧನೆಗಳನ್ನು ಧರ್ಮ ,ತತ್ವ ಎಂದು ತಿಳಿಯುವುದಕ್ಕಿಂತ,ಮೈತ್ರಿ ಕರುಣೆ ,
ಮುದಿತಾ ,ಸಮತಾ ಎಂಬ ನಾಲ್ಕು ಗುಣಗಳನ್ನು ವಿಶ್ವ ಮಾನವರಾಗಿ ಜೀವಿಸಬಹುದಾದ ಬೆಳಕಿನ
ದಾರಿ ಬದುಕು.ಬುದ್ದನ ಇಂತಹ ಆದರ್ಶ ಆಶಯಗಳಿಂದ ಆಕರ್ಷಿತನಾದ ಐನ್ ಸ್ಟೀನ್ ಪ್ರಕಾರ
"ವಿಶ್ವ ಧರ್ಮವಾಗುವ ಯೋಗ್ಯತೆ ಇರುವುದು ಬೌದ್ಧ ಧರ್ಮಕ್ಕೆ ಮಾತ್ರವೇ" ಎಂದಿದ್ದಾನೆ.
ಮಹಾಕವಿ ಕುವೆಂಪುರವರು ಶತಮಾನದ ಕಾದಂಬರಿ ಕಾನೂರು ಹೆಗ್ಗಡತಿಯಲ್ಲಿ ಹೂವಯ್ಯನನ್ನು
ಬೌದ್ಧ ನಾಗಿ ಪರಿವರ್ತಿಸುತ್ತಾರೆ.ಸ್ವತಃ ಕುವೆಂಪುರವರೇ ಕೊನೆಗಾಲದಲ್ಲಿ ಬುದ್ಧನ ಅನುಯಾಯಿಯಾಗಿದ್ದರು.ಇಂತಹಾ ಯಾವುದೇ ಧರ್ಮದ ಕಟ್ಟುಪಾಡುಗಳು ಇಲ್ಲದ ಬುದ್ಧನ
ಬೋಧನೆಯಿಂದ ಬಾಬಾಸಾಹೇಬರಂತಹಾ ಸಮನ್ವಯಕಾರರು ಆಕರ್ಶಿತರಾದರೆಂದರೆ
ಅಚ್ಚರಿಯಿಲ್ಲ.
ಬುದ್ಧ ನೆಂದರೆ ಜಾಗೃತನಾದವನು. ನೈಸರ್ಗಿಕ ಸತ್ಯದ ಪ್ರತಿಪಾದಕನಾದ ಬುದ್ಧ ಸನ್ನಡತೆ,
ಸಚ್ಚಾರಿತ್ರ್ಯ,ಸದ್ಗುಣಗಳನ್ನೂ ತನ್ನ ಧರ್ಮದ ತಳಪಾಯವೆಂದು ತಿಳಿದು ಆಚರಿಸಿದವನು.
ಹಸಿವನ್ನು ಮಹಾರೋಗವೆಂದು,ದಾರಿದ್ರ್ಯವನ್ನು ಮಹಾ ದುಃಖವೆಂದು,ಜೀವನಕ್ಕೆ ಅಗತ್ಯವಾದುದನ್ನು ಗಳಿಸಲೇಬೇಕು.ಆದರೆ ಮಿತಿಮೀರಿ ಗಳಿಸಬಾರದು ಎಂಬುದು
ಆತನ ನಿಯಮ."ಎಂದೂ ಪುನರ್ನವೀಕರಣ ಗೊಳ್ಳದ ನೈಸರ್ಗಿಕ ಸಂಪತ್ತು ವೃಥಾ ಪೋಲಾಗದಂತೆ ಎಚ್ಚರವಹಿಸಿ ಮಾಡುವ ಸಾಮಾಜಿಕ ಉತ್ಪಾದನೆ ಮತ್ತು ಸಾಮುದಾಯಿಕ
ಬಳಕೆಯನ್ನು ಪ್ರತಿಪಾದಿಸಿದ.ಜನರ ಅಗತ್ಯಕ್ಕಾಗಿ ಎಲ್ಲಾ ಶಾಸ್ತ್ರ ಗಳು ,ಎಲ್ಲಾ ತಿಳುವಳಿಕೆಗಳು
ಅತ್ಯಗತ್ಯ.ಇದು ಅಭಿವೃದ್ಧಿಯ ಮೊದಲ ಸತ್ಯ.ನಿಜ ಲೋಕದಲ್ಲಿ ಸಂಕಟ ಇರಬಾರದು.ಹಾಗೂ ಅನಗತ್ಯ ಭೋಗವು ಇರಬಾರದು.ಇವೆರಡರ ಸಂತೃಪ್ತಿ ಸ್ಥಿತಿಯನ್ನು ಅಭಿವೃದ್ಧಿ ಎಂದು ಸಮರ್ಥಿಸಿ. ಅಪರಿಮಿತ
ಉತ್ಪಾದನೆ ಸಮಾಜವನ್ನು ಆಕ್ರಮಣ ಶೀಲವನ್ನಾಗಿಸುತ್ತದೆ.ಸಮುದಾಯ ಅಸಮಾನತೆಯಿಂದ ನರಳುತ್ತದೆ.
ಹಾಗಾಗಿ ಸಮಾಜವನ್ನಾಧರಿಸಿದ ಅವಶ್ಯಕತೆ ಸೂಕ್ತವಾದದ್ದು.ಎನ್ನುತ್ತಾನೆ.
ಇಂತಹಾ ಮಹಾತ್ಮರ ಆದರ್ಶದ ಬೆಳಕಿನಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವುದು ನಮ್ಮ ನಮ್ಮ ಕೈಲ್ಲೇ ಇದೆ.ಶ್ರದ್ದೆ, ಶ್ರಮ,ಆಸಕ್ತಿ,ಅವಶ್ಯಕತೆ,ಮಿತಿ ಎಂಬುದು ನಮ್ಮ ಅರಿವಿನ ಅರಿವಿಗೆ ಶರಣಾದಾಗ ಬದುಕು ಅದೆಷ್ಟು ಸುಂದರವಲ್ಲವೇ...!!!!!!!!
--
--
"ನಿನಗೆ ನೀನೇ ದಿಪವಾಗು.ಬೆಳಕಾಗು ಅನ್ಯರನ್ನು ಆಶ್ರಯಿಸಬೇಡ." ಎ೦ಥಾ ಅರ್ಥಪೂರ್ಣ ಸ೦ದೇಶ. ಲೇಖನ ವಿಚಾರಯೋಗ್ಯವಾಗಿದೆ. ಅಭಿನ೦ದನೆಗಳು.
ReplyDeleteನಿಜ.. ವಿಚಾರ ಪೂರ್ವಕ ಲೇಖನ..ನಮ್ಮ ಬದುಕನ್ನು ಸು೦ದರವಾಗಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎ೦ಬ ವಾಕ್ಯ ತು೦ಬಾ ಹಿಡಿಸಿತು.
ReplyDeleteಒಳ್ಳೆ ಲೇಖನ...
ReplyDeleteಉತ್ತಮ ಲೇಖನ ಕಲಾವತಿ ಮೇಡ೦. ಅಭಿನ೦ದನೆಗಳು.
ReplyDeleteಅನ೦ತ್
ಉತ್ತಮ ವಿಚಾರಗಳನ್ನು ತಿಳಿಸುವ ಈ ಲೇಖನಕ್ಕಾಗಿ ಧನ್ಯವಾದಗಳು.
ReplyDeleteprabhaamaniyavare,nimma modala haagu ,uttama pratikriyegaagi aatmiya dhanyavaadagalu.hige baruttiri.
ReplyDeletemanamuktaravare,nimma vichaarapoorna pratikriyegaagi, aatmiya dhanyavaadagalu.nimma protsaaha hige..irali.
ReplyDeletesaviganasu maneyavare,nimma uttma pratikriyegaagi dhanyavaadagalu.agaaga baruttiri.
ReplyDeleteanant sir ravare, nimagellrigu uttama lekhana enisiddare nanna prayatna saarthkavaayitu.nimma protsaaha hige munduvareyali.dhanyavaadagalu.
ReplyDeletesunaath sir ravare, nimma vichaarapoorna pratikriyegaagi dhanyavaadagalu.nimma protsaaha hige irali.
ReplyDelete