ಸಂಭ್ರಮದ ನಡುವೆಯೇ ...ದಿಘ್ಬ್ರಮ...!!!!!!!!!!!1
ಎಲ್ಲೆಲ್ಲು ಸಮ್ಮೇಳನಗಳ ಸಂಭ್ರಮ,
ಒಡನೆ ಸಡಗರದ ಅಬ್ಬರದ
ಎಲ್ಲೆಲ್ಲು ಸಮ್ಮೇಳನಗಳ ಸಂಭ್ರಮ,
ಒಡನೆ ಸಡಗರದ ಅಬ್ಬರದ
ನಡುವೆಯೇ ..! ಸುನಾಮಿಯ.. ದಿಘ್ಭ್ರಮ.!!!!!!!!!
ಸುನಾಮಿಯಲಿ
ಅದೆಷ್ಟೋ..ಸಾವಿರ .. ಬೇನಾಮಿ..!
ನಮಗಿಲ್ಲಿ ಸಡಗರದ ಹೊಸವರ್ಷ
ಸಾಗರ ಸಂದಣಿಯಲ್ಲಿ ನಡೆದಿದೆ
ಘೋರ ಸಂಘರ್ಷ
ಸಾಗರ ಸಂದಣಿಯಲ್ಲಿ ನಡೆದಿದೆ
ಘೋರ ಸಂಘರ್ಷ
ನಮಗಿಲ್ಲಿ ಹೋಳಿಯ ಸಡಗರ
ಕಡಲಲಿ ಗೋಳಿನ ಆಗರ ,
ನೀಡಿದರಾಯಿತೇ...ನೆರವಿಲ್ಲದ.....
ಸಾಂತ್ವಾನ ....?
ಇಲ್ಲಿ ಬದುಕಿಗೇ... ಸಂಘರ್ಷ
ಅಲ್ಲಿ ಬದುಕಲೇ ಸಾಹಸ ......!!!!!!!!!!!!
ಇಲ್ಲಿ ಸಾಗುತಿದೆ ಬದುಕಲೇ ವಿಕೃತ ಮೋಸ,
ಅಲ್ಲಿ ಅವಶೇಷಗಳ ನಡುವೆ ದಿಕ್ಕೆಟ್ಟ
ಆಕ್ರಂದನದ ...ಶೋಕದ ..ಸ್ಮಶಾನ ವಾಸ ........!
ಎಷ್ಟಾದರೂ ಸಾಲದಾಗಿದೆ
ಜನ ಸ್ಪಂದನ ...ಸಾಂತ್ವಾನ ...!!ಮರುಕವೊಂದೆ ....ಅವಶೇಷ...!!!!!!
ಹೌದು, ಕಲಾವತಿಯವರೆ, ನಮ್ಮ ಪ್ರಪಂಚದ ಒಂದೆಡೆ ಹಬ್ಬದ ಸಂಭ್ರಮ ನಡೆದಿರುತ್ತಿದ್ದರೆ, ಇನ್ನೊಂದೆಡೆ ಸ್ಮಶಾನರೋದನವಿರುತ್ತದೆ. ಸಂತ್ರಸ್ತರಲ್ಲಿ ಅನುಕಂಪ ತಾಳುವ ಸೂಕ್ಷ್ಮಹೃದಯ ನಮ್ಮಲ್ಲಿ ಬೇಕು.
ReplyDeleteಜೀವನವೇ ಒ೦ದು ಮಾಯೆ ಎನ್ನುತ್ತಾರೆ.ಜಗತ್ತಿನಲ್ಲಿನ ಆಗು ಹೋಗುಗಳನ್ನು ಸೂಕ್ಶ್ಮವಾಗಿ ಗಮನಿಸಿದರೆ ಅದು ನಿಜವೆನ್ನಿಸುತ್ತದೆ.ಸಡಗರ,ಸ೦ಘರ್ಷ, ನೋವು ನಲಿವುಗಳ ಮದ್ಯೆ ಮಾನವನ ಜೀವನ.
ReplyDeleteಸಮಚಿತ್ತ ಸಾಧಿಸುವಲ್ಲಿ ಇವೆಲ್ಲ ಘಟನೆಗಳು ನಮಗೆ ಪೂರಕವಾಗಬೇಕು. ಸ್ಥಿತಪ್ರಜ್ಞತೆಯತ್ತ ನಮ್ಮ ಗುರಿ ಇರಬೇಕು ಅಲ್ಲವೆ? ಅಭಿನ೦ದನೆಗಳು.
ReplyDeleteಅನ೦ತ್
kalavathi madam,
ReplyDeletenija manushya ondu kade araamaagi iddare,innondu kade eshtu kashta paduttiddane..aadare araamaagiruva manushya bereyavara bagge thalene kedisikollvudilla..
nimma kavana chennagide.
ಜೀವನವೆ೦ದರೆ ಹೀಗೆ ಅಲ್ಲವೇ? ಆದರೂ ಈ ಅ೦ತರವನ್ನು ಸಹಿಸುವುದು ಎಷ್ಟು ಕಷ್ಟ! ಪರಸ್ಪರ ಮಿಡಿಯುವ ಮನಗಳಿದ್ದರೆ, ಮಾನವೀಯತೆಯಿದ್ದರೆ, ಬದುಕು ಸಹನೀಯವೆನಿಸಬಹುದು ಅಲ್ಲವೇ?
ReplyDeleteಸುನಾಥ್ ಸರ್ ನಿಮ್ಮ ತಕ್ಷಣದ ಪ್ರತಿಕ್ರಿಯೆಗೆ ಆತ್ಮೀಯ ಧನ್ಯವಾದಗಳು. ಕಾರಣಾಂತರಗಳಿಂದ ಬಹಳ ತಡವಾಗಿ ಧನ್ಯವಾದಗಳನ್ನು ತಿಳಿಸುತ್ತಿರುವುದಕ್ಕೆ ಕ್ಷಮಿಸಿ.
ReplyDeleteಸುನಾಥ್ ಸರ್ ರವರೆ ,
ReplyDeleteಮನಮುಕ್ತ ರವರೆ,
ಗಿರೀಶ್ ಸರ್ ರವರೆ ,
ಅನಂತರಾಜ್ ಸರ್ ರವರೆ,
ಪ್ರಭಾಮಣಿ ಯವರೇ ...
ನಿಮ್ಮೆಲ್ಲರ ಅತುತ್ತಮ ಸಲಹೆ ಹಾಗೂ ಪ್ರತಿಕ್ರಿಯೆಗಾಗಿ ಆತ್ಮೀಯ ಧನ್ಯವಾದಗಳು.
ಎಷ್ಟೇ ಸ್ಥಿತ ಪ್ರಜ್ಞರಾಗಿದ್ದರು ,ನಮ್ಮ ಸಂಭ್ರಮದ ನಡುವೆ ಅಂತಹ ದಾರುಣ,ಹೃದಯ ವಿದ್ರಾವಕ
ಘಟನೆಯನ್ನು ಕಂಡಾಗ ವಿಚಲಿತರಾಗದೆ ಇರಲು ಸಾಮಾನ್ಯರಾದ ನಮ್ಮಿಂದ ಸಾಧ್ಯವೇ..?
ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ.ವಂದನೆಗಳು