ಅನುಭವದ ಕಾಂತಿ
ಹಸಿ ಕಟ್ಟಿಗೆ ಹೊಗೆಯಟ್ಟಲು
ಉಸಿರು ಕಟ್ಟಿ ಶ್ವಾಸ ಚೆಲ್ಲಿ
ದಗದಗಿಸುವ ಒಲೆಯುರಿಯಲಿ
ಹಸಿವು ಕುದಿದು ಹದವಾಗಿ
ಕಾದಿಹ ಹಲವು ಹಸಿವುಗಳ ತಣಿಸಿ
ಭವಿತವ್ಯದ ನಿರೀಕ್ಷೆಯಲಿ
ನಿಟ್ಟುಸಿರು, ಬಿಕ್ಕಳಿಕೆಯಲಿ,
ಹೊಗೆಯಲ್ಲಿ ಕಂದಿದ
ನಿಸ್ತೇಜ ನೇತ್ರದಲಿ
ಹನಿಗೂಡಿ ಹಳ್ಳ ಹರಿದು
ದಡ ದಾಟಿ ತುಳುಕಿ ಕೆನ್ನೆ ಮೇಲೆ
ಹರಿದ ಕಂಬನಿಗಳೇ ಹಲವು
ಸುಕ್ಕುಗಳಾಗಿ ಕವಲೊಡೆದು
ನಿಸ್ತೇಜ ನರವಾದಾಗ ,
ಅವ್ವನೆನಲು ಅಂಜಿಕೆಯೇ ...????!!!!! .
ಬಳಲಿದ ಜೀವದ ಬಯಕೆಗಳೆಲ್ಲಾ...
ಅಲಕ್ಷದ ಕಸಬರಿಕೆ ,
ಅಂಗಳದಲ್ಲಿ ರಂಗೋಲಿ ಇಡಲು
ಗೋಮೆಯ ಹಳೆ ಹೆಕ್ಕಳಿಕೆಯ ಹೆಕ್ಕಿ
ಮತ್ತೆ ಮತ್ತೆ ಓರಣಗೊಳಿಸಿ
ಸೋತ ಕೈ ನರಗಳು
ನೂರಾರು ನೆರಿಗೆಯ ಕವಲುಗಳು.
ನಿತ್ಯ ಗುಡಿಸಿ ಸಾರಿಸಿ
ಕಲ್ಲುಗಳು ಹಲ್ಲು ಬಿಟ್ಟಂತೆ
ಅಸ್ತಿ ಪಂಜರ... ಬಸಿದ ಬದುಕು.
ಬರವಿಲ್ಲದ ಕನಸುಗಳಲ್ಲೇ
ಮಾನವತೆಯ ಧ್ಯಾನಿಸಿ
ಸಹನಾಮುರ್ತಿಯಾಗಿ
ಬದುಕು ಸಹಿಸಿದ
ಸಾವಿರ ಸುಕ್ಕಿಗೂ ... ಸಾಸಿರ ಕಥೆಗಳು .
ಬಯಕೆ ಬತ್ತಿದ ನಿಸ್ತೇಜ ಕಂಗಳ
ಅಸಹಾಯಕ ನೋಟದಲ್ಲೂ
ಮಿಂಚುವ........
ಸಾಧನೆಯ ಶಾಂತಿ,
ಅನುಭವದ ಕಾಂತಿ.
ಅವಳ ಶ್ರಮಕ್ಕೆ ದಕ್ಕಿದ್ದು
ಆಶ್ರಮದಲ್ಲಿ ವಿಶ್ರಾಂತಿ...........!!!!!!!
*********************
ಕಾಂತಿಯುಕ್ತ ಕವನ...
ReplyDeleteಚೆನ್ನಾಗಿದೆ
‘ಸಾವಿರ ಸುಕ್ಕಿಗೂ....ಸಾಸಿರ ಕತೆಗಳು’...ಇದು ಮನ ಮಿಡಿಯುವ ಸಾಲು.
ReplyDeleteತಾಳ್ಮೆಯೇ ತಪಸ್ಸು ಎನ್ನುವ ಬದುಕು ಸಾಧನೆಯ ಬದುಕಾಗಬಲ್ಲದು. ಮನದ ಭಾವ ಕವನದಲ್ಲಿ ಕಳೆಗಟ್ಟಿದೆ.
ಸಾಧನೆಯ ಶಾ೦ತಿಗಾಗಿ ಇಡೀ ಬದುಕಿನ ಹೋರಾಟ. ಉತ್ತಮ ಚಿತ್ರಣ ಮೇಡ೦. ಅಭಿನ೦ದನೆಗಳು.
ReplyDeleteಅನ೦ತ್
ಮನ ಮುಟ್ಟಿದ ಕವನ..ಚೆನ್ನಾಗಿದೆ ಮೇಡಂ !!!
ReplyDeleteಅವಳ ಶ್ರಮಕ್ಕೆ ಸಿಕ್ಕಿದ್ದು ಆಶ್ರಮದಲ್ಲಿ ವಿಶ್ರಾ೦ತಿ..
ReplyDeleteಮನ ಮಿಡಿಯುತ್ತದೆ...
ಭಾವ ತು೦ಬಿದ ಕವನ..
nice..
ReplyDeletesaviganasu maneyavare, nimma shriighra haagu uttama pratikriyege aatmiya dhanyavaadagalu.
ReplyDeletesunaath sir,nimma arthapoorna pratikriyegaagi aatmiya dhanyavaadagalu.
ReplyDeleteananthraaj sir,nimma vichaaraatmaka pratikriyegaagi aatmiya dhanyavaadagalu.
ReplyDeletegirishsir,namma bhaava nimma manamuttiddakke nanna prayatna ssarthakavenisitu.nimage aatmiya dhanyavaadagalu.
ReplyDeletemanamuktaravare,nimma
ReplyDeletebhaavanaatmaka pratikriyegaagi
bhaavapoorna dhanyavaadagalu.
sitaaraam sir nimma
ReplyDeletemecchugege dhanyavaadagalu.
Nice poem... Touchy...
ReplyDeleteಒಲೆಯ ಹೊಗೆ, ಮನೆ ಒಪ್ಪ ಓರಣದ ಇಚ್ಛೆ, ಮನಸು, ಮತ್ತು ಕಾಳಜಿ ಹೆಣ್ಣಾಗಿ, ಸೊಸೆಯಾಗಿ, ತಾಯಾಗಿ ಅಜ್ಜಿಯಾಗಿ...ಬಹಳ ಸುಂದರ ಮತ್ತು ಅರ್ಥತುಂಬಿದ ಪದ ಬಳಕೆ.. ತುಂಬಾ ಇಷ್ಟ ಆಯ್ತು ಕವನ..ಮೇಡಂ...
ReplyDeleteಎ೦ಥಾ ವಿಪರ್ಯಾಸ! ಮನಸ್ಸನ್ನು ಬಹಳ ಭಾವಪೂರ್ಣಗೊಳಿಸುವ ಸು೦ದರ ಕವನ. ಧನ್ಯವಾದಗಳು ಕಲಾವತಿಯವರೇ.
ReplyDeletethank you tejasvini madam.
ReplyDeletejalanayana ravare,
ReplyDeletenimma bhaavapoorna
pratikriyegaagi
aatmiya dhanyavaadagalu.
prabhaamaniyavare,
ReplyDeleteelubilugalemba hekkalikeya hekki
oranagolisi rangoliyante belagisidavalige siguva baluvali...viparyaasave..sari.nimma bhaavapoorna pratikriyegaagi aatmiya dhanyavaadagalu.
ಉತ್ತಮ ಚಿತ್ರಣ.
ReplyDeletethank you chukkicittaara ravare.
ReplyDeletetumba channagide madam..
ReplyDeletethank u shivaprakaash sir nimma mecchugege.
ReplyDelete