Jul 12, 2011

 ದೊಂಬರಾಟ

ದುಬಾರಿ ದುನಿಯಾದೊಳಗೆ

ದೂರ್ವಾಸರ ದೊಂಬರಾಟ

ಧರಣಿಗೆ ಒಡೆಯರೇ

ಶರಣರು,ಸಂತರೆಂಬ

ಹಂತಕರ ಜೋಳಿಗೆ

ಉದ್ಧಾರಕ್ಕೆ,

ಧರ್ಮಾತ್ಮರ ಸೋಗು.

ಕುರ್ಚಿಗಾಗೆ ಕ್ರಾಂತಿ

ಎಬ್ಬಿಸುವ ಕುತಂತ್ರಿಗಳಿಗೆ

ಗಂಟು, ಸೀಟು ಮೀಸಲು.

ತಳ ಗಟ್ಟಿಯಾದಂತೆ

ಮಾಜ ಸೇವೆಗೆಲ್ಲಾ 

ವಿಶ್ರಾಂತಿ...!!!

ಅನುಕಂಪಕ್ಕೆ ಕಣೀರು ! !

ಮಹಾತ್ಮರ ಮುಷ್ಕರಕ್ಕೆ

ಮೂರ್ಖರ ಕೆನೆತ.

ದೊಂಬರ ಹೊಟ್ಟೆಗೆ

ತಣ್ಣೀರು ಬಟ್ಟೆ ಶಾಶ್ವತ
****************

7 comments:

  1. ಈ ಕಾಲದ ಸಾಮಾಜಿಕ ಹಾಗು ರಾಜಕೀಯ ವಿಪರ್ಯಾಸಕ್ಕೆ ನಿಮ್ಮ ಕವನ ಕನ್ನಡಿಯಂತಿದೆ.

    ReplyDelete
  2. ಹೌದು ಸುನಾಥ್ ಸರ್ ರವರೆ ,

    ಸಾಮಾನ್ಯರು ಪ್ರೇಕ್ಷಕರು ಅಷ್ಟೇಯಲ್ಲವೇ...

    ನಿಮ್ಮ ತಕ್ಷಣದ ಹಾಗೂ ಅರ್ಥಪೂರ್ಣ

    ಪ್ರತಿಕ್ರಿಯೆಗಾಗಿ ಆತ್ಮೀಯ ಧನ್ಯವಾದಗಳು

    ReplyDelete
  3. ನನ್ನ ಬ್ಲಾಗಿನಲ್ಲಿ ನಿಮ್ಮ ಕಾಮೆಂಟಿನ ಬೆನ್ಹಿಡಿದು ಇಲ್ಲಿ ಬಂದೆ. ತಮ್ಮ ಬ್ಲಾಗ್ ತಾಣ ಚೆನ್ನಾಗಿದೆ. "ದೊಂಬರಾಟ" ಪ್ರಸಕ್ತ ರಾಜಕೀಯ ಸಾಮಾಜಿಕ ಪರಿಸ್ಥಿತಿಯನ್ನು ಸೊಗಸಾಗಿ ನಿರೂಪಿಸುತ್ತದೆ.

    ReplyDelete
  4. manjunaath ravare nimage
    aatmiya svaagata.nimmamecchugege
    dhanyavaadagalu.

    ReplyDelete
  5. manjunaath sir nimage
    aatmiya svaagata.nimma uttama
    abhiprayakkaagi dhanyavaadagalu.

    ReplyDelete