ಉಳಿಸಲಿಲ್ಲ ಹೆಸರು
ಅತ್ತ ಇತ್ತ ಹಾರಾಡಿ
ಇಕ್ಕಿದ ಪಿಕ್ಕೆ
ಅಲ್ಲಲ್ಲೇ ಇಕ್ಕಿತು
ಬೀಜಗಳ ಉಕ್ಕೆ
ಬೀಜಗಳ ಉಕ್ಕೆ
ಪರಿಸರದ ಪಾಕಕ್ಕೆ
ಸಸಿಯಾಗಿ ,
ಸಸಿಯಾಗಿ ,
ಗಿಡವಾಗಿ ,ಮರವಾಗಿ
ಏರಲು....
ಹಕ್ಕಿ.. ತಿಮ್ಮಕ್ಕರಾಗಿ
ಉಳಿಸಲಿಲ್ಲ
ಏರಲು....
ಹಕ್ಕಿ.. ತಿಮ್ಮಕ್ಕರಾಗಿ
ಉಳಿಸಲಿಲ್ಲ
ತಮ್ಮ ಹೆಸರು..!
ಅನಾಮಧೇಯ
ಅನಾಥವಾದರೂ
ತಾರತಮ್ಯವಿಲ್ಲದ
ನೆರಳು,
ನೇಗಿಲು ಮರಮುಟ್ಟಿನ
ಬಲಿಗೆ ಬೇಕಿಲ್ಲ
ಮರದ ಸಮ್ಮತಿ ....
ಸ್ವೇಚ್ಛೆಯ ದಬ್ಬಾಳಿಕೆಗೆ
ಇಲ್ಲ ಮಿತಿ .....!
ಸ್ವೇಚ್ಛೆಯ ದಬ್ಬಾಳಿಕೆಗೆ
ಇಲ್ಲ ಮಿತಿ .....!
ಸೊಳ್ಳೆ
ಕಚ್ಚಲು ಕೂರುವ
ಕೀಟಗಳ
ಕೊಲ್ಲುವ ಜಿದ್ದು
ಹೊಟ್ಟೆ ಹೇಗೆ
ಹೊರೆಯಬೇಕು
ಹೊರೆಯಬೇಕು
ಅದರದ್ದು ..?
ಅದರ
ಸಂತಾನದ್ದು...?
ಅದು ಹುಟ್ಟಿದ್ದೇ
ನೆತ್ತರ ಹೀರಲು..
ಹಿರಿದ್ದು ಹನಿ...!ನೀಡಿದ್ದು......!..?
ಹಿರಿದ್ದು ಹನಿ...!ನೀಡಿದ್ದು......!..?
ಬಯಕೆ
ಭವಿಷ್ಯ ...ಪಾಯದಲ್ಲಿ .
ಹುಡುಕುವುದು
ಹೆಸರಿಡಲು ಸೌಧಕ್ಕೆ.
ಉತ್ಸಾಹ ಹಂತಗಳಲ್ಲಿ,
ಸಾಧಿಸುವಲ್ಲಿ
ಪ್ರತ್ಯಕ್ಷವಾಗುವ ಆತಂಕ
ಹಂಗಿಲ್ಲ ಹರಸುವ
ಹಿರಿತನಕೆ,
ಬಂಧಗಳ ಬಾಧೆಗೆ
ಕರುಳಿಗೆ ಕಾಡುವ
ಅಪರಾಧಿ ಭಾವಕೆ
ನೈತಿಕ ನೆರವಿಗೆ
ನಿಲ್ಲುವ ಬಯಕೆ...
ಧನ್ಯತೆಯೇ ಇರದ
ಅಪವಾದದ ಬುತ್ತಿ....
ಹೊರಲಾಗದ ಬುರುಡೆಗೆ
ಸುತ್ತಿಗೆ ಬಡಿತ...
ತಮಟೆಯ ಹೊಡೆತ...!
ಹನಿಗವನಗಳಲ್ಲಿಯೇ ವಾಸ್ತವಪ್ರಜ್ಞೆಯನ್ನು ಮೆರೆದು ತೋರಿಸಿದ್ದೀರಿ. ಸೊಗಸಾದ ಹನಿಗಳಿಗಾಗಿ ಅಭಿನಂದನೆಗಳು.
ReplyDeleteಎಲ್ಲಾ ಹನಿಗಳು ಚೆನ್ನಾಗಿವೆ.....ಧನ್ಯವಾದಗಳು...
ReplyDeleteನನ್ನ ಬ್ಲಾಗ್ ಗೂ ಬನ್ನಿ....
ಚೆಂದದ ಹನಿಗವಿತೆಗಳು.ಬ್ಲಾಗಿಗೆ ಬನ್ನಿ.
ReplyDeleteಬಹಳ ಚೆನ್ನಾಗಿದೆ ಮೇಡಂ..
ReplyDeleteಕವನಗಳು ಚೆನ್ನಾಗಿ ಮೂಡಿವೆ.
ReplyDeleteNice ones...
ReplyDeleteಒಳ್ಳೆಯ ಕವನ .. ಭಾವಗಳ ತಾಕಲಾಟ ,
ReplyDelete>> "ಅದು ಹುಟ್ಟಿದ್ದೇ
ನೆತ್ತರ ಹೀರಲು..
ಹಿರಿದ್ದು ಹನಿ...!ನೀಡಿದ್ದು..." << ಮೊದಲಾದ ಸಾಲುಗಳ ಓದುಗಗನ್ನು ಪ್ರಶ್ನೆಗೆ ಹಚ್ಚುವ ಪರಿ ಇಷ್ಟವಾಯ್ತು ..
sunaath sir nimma uttama abhiprayakkaagi aatmiya dhanyavaadagalu.
ReplyDeleteashok sir,nimma mecchugege dhanyavaadagalu.
ReplyDeleteD krishnamoorti sir nimma
ReplyDeletemecchugeya abhiprayakkaagi
dhanyavaadagalu.
manjula medam nimma
ReplyDeletemecchugege dhanyavaadagalu.
mounaraaga nimage
ReplyDeleteishtavaagiddakke
dhanyavaadagalu.
girish sir nimma
ReplyDeletemecchugege dhanyavaadagalu.
prashastiyavare,nimage
ReplyDeleteaatmiya svaagata.nimma
vichaarapoorna pratikriyegaagi
aatmiya dhanyavaadagalu.