Jul 24, 2014

ಆತ್ಮ ಸುನಾದಕೆ ನಿತ್ಯ ನಿವೇದನೆ

ಅಸಹಾಯಕತೆ ಅಗೋಚರ
ಶಕ್ತಿಯ ಬೆಂಬಲವ ನಂಬಿ
ನಡೆವ ದಾರಿ
ಧೈರ್ಯಕೆ ಬುನಾದಿ
ಸಾವಿರ ಸಮಸ್ಯೆಯ ಸವಾಲಿನಲೂ
ದುತ್ತೆಂದು ಮನದೆದುರು ದುಮುಕುವ
ಅಗೋಚರಿಯೇ ಸಹಚಾರಿ
ಎಲ್ಲನಿನ್ನ ಲೀಲೇ ಸಕಾರಕೂ ...!!!
ಎಂದುದ್ಘರಿಸಿ......
ನಕಾರಕೂ .. ನೀನಿತ್ತಂತಾಗಲೆಂದು
ನಿಟ್ಟುಸಿರಿಳಿಸಿ.....
ಅದೃಶ್ಯ ಅಮೂರ್ತವೇ ಅನಂತ
ಆದಿಗೂ ಅನಾದಿಗೂ
ಅಗೋಚರ ಅಂತಃ ಶಕ್ತಿ
ಸಾಧನಾಯುಕ್ತಿ
ಮನವ ಸಂತೈಸುವ ಮೂರ್ತ
ರೂಪ ಮುಂದಿರಿಸಿ
ಜ್ಯೋತಿ ಬೆಳಗಿಸಿ, ಪುಷ್ಪವಿರಿಸಿ
ಗಂಧ ಪೂಸಿ
ಪರಿಮಳದ ಧೂಪ ಹರಿಸಿ,
ನೈವೇದ್ಯವಿರಿಸಿ
ಕರಜೋಡಿಸಿ, ಕಣ್ಮುಚ್ಚಿ
ಸರ್ವೇ ಜನಾಹ ಸುಖಿನೋ ಭವಂತು ,
ಸರ್ವ ಕಾರ್ಯ ಸಿದ್ಧಿರಸ್ತು ,
ಎಂದು ಸ್ಮರಿಸಿ, ಸಂತುಷ್ಟಿಯಲಿ
ಸಾಂತ್ವನಗೊಳುತ ಸಕಲ ಜೀವಿ
ಸಾಗುವವು ಸಕಾರ್ಯಗಳಲಿ
ಸ್ಮರಿಸುವವು ಸಂಕಷ್ಟಗಳಲಿ
ಆತ್ಮ ಸುನಾದಕೆ ನಿತ್ಯ ನಿವೇದಿಸಿ...
ನಡೆವವು ಬದುಕ ದಾರಿಯಲಿ

6 comments:

  1. ಸದ್ವಿಚಾರದಲ್ಲಿ ನಡೆಯುವವರು ಅಸಹಾಯಕರಲ್ಲ. ಭಗವಂತನ ಬೆಂಬಲ ಇದ್ದೇ ಇರುತ್ತೆ. ನಾವು ನಾಲ್ಕು ಹೆಜ್ಜೆ ಇಟ್ಟರೆ ನಾನೂರು ಹೆಜ್ಜೆ ಇಡಿಸುವವನು ಅವನು. ಅವನನ್ನು ನಂಬಿದ ನಮಗೆ ಇನ್ನೇಕೆ ಚಿಂತೆ? ಸಮಾಜದ ಕೆಲಸವನ್ನು ಕಂಟಕಾಕೀರ್ಣ ಮಾರ್ಗ [ಮುಳ್ಳಿನಹಾದಿ] ಅನ್ನುತ್ತಾರೆ. ಭಾರತಮಾತೆಯ ಪರಮ ವೈಭವದ ಸ್ಥಿತಿ ಕಾಣುವುದಕ್ಕಾಗಿ ನಾನು ಟೊಂಕ ಕಟ್ಟಿ ದುಡಿಯುತ್ತೇನೆ. ಎಂದು ನಾವು ನಿತ್ಯವೂ ಸಂಘದಲ್ಲಿ ಪ್ರಾರ್ಥನೆ ಮಾಡುತ್ತಾ ನಾವು ಹೇಳುತ್ತೇವೆ ಅದು ಕಂಟಕಾಕೀರ್ಣಮಾರ್ಗವೆಂದು ಗೊತ್ತಿದ್ದರೂ. ನೀವೂ ಸಮಾಜದ ಹಿತಕ್ಕಾಗಿ ಕ್ರಿಯಾಶೀಲರಾಗಿದ್ದೀರಿ. ಸಮಾಜ ನಿಮ್ಮ ಜೊತೆಗಿದೆ. ಮುಂದೆ ಸಾಗಿ. ಭಗವಂತನು ಒಳ್ಳೆಯದು ಮಾಡಲಿ.

    ReplyDelete
  2. ನಿಮ್ಮ ವಿಶ್ವಾಸಪದವು ಇತರರಲ್ಲೂ ಧೈರ್ಯ ತುಂಬುತ್ತದೆ. ಧನ್ಯವಾದಗಳು.

    ReplyDelete
  3. ಆತ್ಮಾವಲೋಕನವೇ? ಶುಭವಾಗಲಿ.

    ReplyDelete
  4. "asahaayakateyalli agochara shaktiyannu nambi nadeva vividha vidhaanagala"bimbisuva kavanake nimma uttama pratikriyegaagi dhanyavaadagalu.

    ReplyDelete
  5. sunaath sir nimma prothsaahakara
    pratikriyegaagi dhanyavaadagalu.

    ReplyDelete
  6. sir nimma pratikriyegaagi dhanyavaadagalu.

    ReplyDelete