May 4, 2015


ನೀನೊಂದು ನಗುವ ಹೂವಾದೆಯಲ್ಲಾ  

ಓ ಹೂವೇ ನೀನೊಂದು ಅಂದದ ಹೂ
ಅಂತರಂಗದಲಡಗಿದೆ
ಯಾರರಿಯದ ನೋವು
ಕೊಂಬೆರೆಂಬೆ ಕಣಕಣವು ಮುಳ್ಳು

ಅದಲೆಕ್ಕಿಸದೆ ನೀನಿಂದು ಅರಳಿ 
ಘಮಘಮಿಸುತಿಹೇ ಪರಿಮಳ ಬೀರುತಿಹೆ
ಪ್ರಕೃತಿಯ ಸೊಬಗ ಇಮ್ಮಡಿಸುತಿಹೆ
ನೋವ ಮರೆತು ಅರಳಿ ನಗುತಲಿರುವೆ,

ನಿನ್ನ ಹಿರಿಮೆಗೆ ಹಿಗ್ಗುವರಿಲ್ಲ,
ಇದ್ದುದೊಂದು ಮನ ಇಂದಿಲ್ಲ,
ಮೋಡದಲಿ ಮಿನುಗುವ ತಾರೆಯಗಿದೆಯಲ್ಲ,
ಆ ಹಿಗ್ಗಿನ ನೆನಪೇ ಒಂದುತ್ತೇಜಕವೆಲ್ಲ

ಒಂದೊಂದೇಳ್ಗೆಯ ಹಿಂದೆಯೂ 
ಆ ಹಿಗ್ಗಿನ ನೆನಪೇ ಕಂಬನಿಯ 
ಹೊಳೆಯಾಗಿ ಹರಿಯುತಿದೆಯಲ್ಲ 
ಮೈ ತುಂಬಿ  ನೋವು ಮೊಗತುಂಬಿ ನಗುವು 

ನಿನ್ನಳಲು ನಿನ್ನನ್ನೇ ಬಾಡಿಸಿ 
ಬಸವಳಿಸುತಿದೆಯಲ್ಲ ಅದರಲೇ 
ನಗುನಗುತಾ ಚಿತ್ತಾರ ಹಾಡಿರುವೆ,
ಮುದ ನೀಡುತಿರುವೆ. 

ಬಾಡುತಿಹ ಹೂಗೆ ಮಳೆ ಹನಿದಂತೆ  
ತಾರೆ ಮಿನುಗಿ ಮರೆಯಾಗುತಿದೆ
ಆ ನೋವಲೇ ನಗುನಗುತಾ 
ಅಂತ್ಯವಾಹ್ವಾನಿಸುತಿರುವೆ,

ಶಿವನ ಪಾದದಡಿ ಸೇರಲು ಅನುವಾಗುತಿರುವೆ 
ಭವ್ಯ ಭವಿತವ್ಯಕ್ಕೂ  ಮೊಗಮಾಡಿ ನಿಂತರೂ
ಭೂತದಂದದಿ  ಕಾಡಿ ಇರಿಯುತಿದೆಯಲ್ಲ 

ನೆರಳು ಬಿಸಿಲಾಟದಲಿ  ನಲುಗುತಿಹ ಹೂವೇ 
ನೋಡಲು ನೀನೊಂದು ನಗುವ ಹೂವಾದೆಯಲ್ಲಾ   

4 comments:

  1. ಹೂವಿನ ನೋವು, ನಲಿವನ್ನು ಮೃದುವಾಗಿ ಹರಡಿ ಹೇಳಿರುವಿರಿ. ಈ ಹೂವು ಎಂದೆಂದಿಗೂ ನಗುವ ಹೂವಾಗಿಯೇ ಇರಲಿ ಎಂದು ಆಶಿಸುತ್ತೇನೆ.

    ReplyDelete
  2. ಶ್ರೀಧರ್ ಸರ್,ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  3. ಸುನಾಥ್ ಸರ್,ನಿಮ್ಮ ವಿಚಾರಪೂರ್ಣ ಪ್ರತಿಕ್ರಿಯೆಗೆ ಹಾಗು ನಿಮ್ಮ ಆಶಯಕ್ಕಾಗಿ ಆತ್ಮೀಯ ಧನ್ಯವಾದಗಳು.

    ReplyDelete