Mar 13, 2015

ನಿಸ್ವಾರ್ಥ ಅಮಂಗಲವೇ ...?

ಸಕಲ ಜವಾಬ್ದಾರಿಗಳ ಹೊತ್ತು

ಬಯಕೆಗಳ ಬದಿಗೊತ್ತಿ

ತನ್ನವರ ಏಳಿಗೆಗೆ

ನಿಂದೆ, ನಿರ್ಲಕ್ಷ್ಯ ,ಅನಾದರ ,

ಅವಮಾನಗಳನೆಲ್ಲ ಸಹಿಸಿ

ಅವಿರತ  ಸೆಣೆಸಾಡುತ 

ತನ್ನವರ ನಗುವಿನಲೇ

ನಲಿವನ್ನು ಕಾಣುವಳುಮಂಗಳಕೆ

ಅಮಂಗಲೆಯಾದೊಡೇ  

ಶ್ರಮಿತ  ತ್ಯಾಗಕೆ ತೊಡಕಾಗಿ

ಕುಕೃತ್ಯವೆಸಗುವರು

ಸುಮಂಗಲೆಯರೇ…??????

6 comments:

  1. This comment has been removed by the author.

    ReplyDelete
    Replies
    1. ಅಮಂಗಲ ಪದಕ್ಕೆ ಮೊದಲು ನನ್ನ ಧಿಕ್ಕಾರ! ಯಾವುದು ಅಮಂಗಲ? ಯಾವುದು ಸುಮಂಗಲ? ನನ್ನ ಸೋದರತ್ತೆ ತನ್ನ ಹತ್ತನೆಯ ವಯಸ್ಸಿಗೆ ಮದುವೆಯಾಗಿ,ಮದುವೆಯ ಅರ್ಥವನ್ನೂ ತಿಳಿಯದಿರುವಾಗಲೇ ಆರೇ ತಿಂಗಳಲ್ಲಿ ಗಂಡನೆಂಬುವನನ್ನು ಕಳೆದುಕೊಂಡರು. ಅಂದಿನಿಂದ ತಮ್ಮನ ಮನೆಯಲ್ಲೇ ಉಳಿದರು.ತಮ್ಮನ ಮಕ್ಕಳಿಗೆಲ್ಲಾ ತಾಯಿ ಸ್ಥಾನದಲ್ಲಿ ನಿಂತರು. ನಮ್ಮಮ್ಮ ಹಡೆದದ್ದು ಮಾತ್ರ.ಹೊತ್ತು ಬೆಳೆಸಿದವರು ನಮ್ಮತ್ತೆಯೇ. ಹೆತ್ತಮ್ಮನಿಗಿಂತ ಹೆಚ್ಚು ಪ್ರೀತಿಸಿದರು. ಅವರು ಅಮಂಗಲೆಯೋ? ಸುಮಂಗಲೆಯೋ? ನನ್ನ ದೃಷ್ಠಿಯಲ್ಲಿ ಕುಟುಂಬದ ನೆಮ್ಮದಿಗಾಗಿ ಹೆಣಗುವವರು ಸುಮಂಗಲೆಯರು, ನೆಮ್ಮದಿ ಹಾಳುಮಾಡುವವರು ಅಮಂಗಲೆಯರು!!

      Delete
  2. ಹೆಣ್ಣುಮಕ್ಕಳು ನಮ್ಮ ಸುಸಂಸ್ಕೃತಿಯ ವಾಹಕರು. ಅವರು ಅಮಂಗಲೆಯರಾಗಲು ಸಾಧ್ಯವೇ ಇಲ್ಲ! ನಿಮ್ಮ ಕವನದ ಭಾವಕ್ಕೆ ನನ್ನ ಸಹಮತವಿದೆ.

    ReplyDelete
  3. sir nimma vicharapoorna pratikriyegaagi dhanyavaadagalu.

    ReplyDelete
  4. sunaath sir nimma arthapoorna pratikriyegaagi dhanyavaadagalu.

    ReplyDelete
  5. Dashed into this blog by chance, kalavathi. Bahala chennagide. Ella odilla. Adre ellanoo odtini. Tumba chennagide. Dhanyavadagalu for this blog.

    ReplyDelete