ಕುಂದಣದ ಹೊಳಪು
ನಿನಗೆ ನಿನ್ನಮ್ಮನಂತೆ ,
ಒಲವೆಮ್ಮ ಬದುಕು ,
ಕುಂದಣದ ಹೊಳಪು .
ಕೋಟ್ಯಾಧಿಪತಿಯಾದವಗೂ
ಹೊರಗೆ ನೀ ದಣಿಯದಿರು
ಅಂದ ಚೆಂದದ ಉಡುಗೆ ತೊಟ್ಟು
ಎನ್ನೆದೆ ತುಂಬಿ ಕಣ್ತುಂಬಿ,
ಮನತುಂಬಿ ,ಮನೆತುಂಬ
ನಡೆದಾಡುತಿರು.ಸಾಕೆನಗೆ ..
ನಿನಗೆ ನಿನ್ನಮ್ಮನಂತೆ ,
ನನಗೆ ನೀನಮ್ಮನಾದೆ ,
ನಿನ್ನ ಮಡಿಲಲ್ಲಿ ನಾ
ಕಂದನಾದೆ.ಎಂದವರು
ಕಂದನಾದೆ.ಎಂದವರು
ಒಲವೆಮ್ಮ ಬದುಕು ,
ಕುಂದಣದ ಹೊಳಪು .
ಕೋಟ್ಯಾಧಿಪತಿಯಾದವಗೂ
ಸಿಗುವುದೇ.. ಈ ಬದುಕು ..?
ನಾನಿರದೇ ಹೇಗಿರುವೆ..!!!!.. ?
ನೀನಿರದೆ ಹೇಗಿರಲಿ..!!!.. ?
ನೀನಿರದ ಆ ಬದುಕು
ಕಲ್ಪನೆಗೂ ಕೊಡಲಾರೆ ...
ನಾನಿರದ ನಿನ್ನ ಬದುಕೆಂತು..ನೆನೆಯಲಿ ..
ಕೈತುಂಬಾ ಪೂಜಿಸಿ
ಮನತುಂಬಿ ಹರಸಿ
ಸಂತಸದಿ ಬಿಳ್ಕೊಡುವೆ
ಮನತುಂಬಿ ಹರಸಿ
ಸಂತಸದಿ ಬಿಳ್ಕೊಡುವೆ
ನೀ ಮೊದಲೇ.. ನಡೆದುಬಿಡು.ಎಂದವರು,
ಹೇಳದೆಯೇ ಹೊರಟಿರಿ ಎಂತು..?
ಹೇಳದೆಯೇ ಹೊರಟಿರಿ ಎಂತು..?
--
kalavathi G.S
ಕೊನೆಯ ಸಾಲು ಆಘಾತಕಾರಿಯಾಗಿದೆ.
ReplyDeletesunaath sir nimma shighra pratikriyege dhanyavaadagalu. antaha Aghatkaari kshanavannu gattiyaagi sahisi nilluva dhi shaktiye devaru karunisiruva vara.bavanege bandha katti badukanna bhadragolisuttaane. enisutte.
ReplyDelete