Feb 3, 2015


ನೋವೇ…ವಿಸ್ಮಯ..!!!!!!-35

ಬದುಕಿನೊಳಗೆ ಇದ್ದುಕೊಂಡೆ 

ಬದುಕಿನಾಚೆಯ
ದಿವ್ಯಚಲುವಿನನುಭವಕೆ ನೋವೆ 

ಬದುಕ ‘ನಾವೆಯಾಗುವ’

ಪರಿಯೇ ವಿಸ್ಮಯ..!

 

ದೂರು ಸಂಕಷ್ಟಗಳೇ

ಶುದ್ಧಭಾವಕ್ಕೆ ದೂಡಿ,

ದೇವನಲಿ ಮೊರೆ ಇಡುತಾ

ಸವಾಲಾಗಿ ಸ್ವೀಕರಿಸಿ

ಸಮಸ್ಯೆಯಲ್ಲೇ ಪರಿಹಾರವನೂ

ಹೆಕ್ಕಿಕೊಳ್ಳುತಾ…..

ದಿವ್ಯ ಕನಸ ನನಸಿಗೆ

ನೋವೆ ಸಾಧನವಾಗುವ

ಪರಿಯೇ ವಿಸ್ಮಯ!

 

ಪರಮಾತ್ಮನ ಸೇರಲು

ತುಡಿಯುವ ಜೀವಾತ್ಮಕೆ

ಜೀವಿಸಲು  ಜ್ಞಾಪಿಸುವ 

ನೋವ ಲೀಲೆ ವಿಸ್ಮಯ!

 

ಅಲೌಕಿಕದ ಅನೂಹ್ಯ

ಆಕರ್ಷಣೆಯ ಅಲಕ್ಷ್ಯಕೆ

ಅರಿವೇ  ಗುರುವಾಗುವ 

ಅನುಭವವೇ ವಿಸ್ಮಯ

 

ಅರಿವು ಕನಸೊಳಗೂ ನುಸುಳಿ

ಪ್ರಜ್ಞಾ ಸ್ತರಕೆಲ್ಲಾ ಪಸರಿ

ಜೀವಧ್ವನಿ ಮಾಮರ ವಾಗುವುದೇ ವಿಸ್ಮಯ !

 

ಬೇಗೆ ಬೆವರೆ  ಮಳೆಯೆಮಾಗಿ

ತಾನೇ ತಾನಾದಂತೆ

ನೋವು ನಲಿವೇ

ನಿರಂತರ ಬಾಳ ಆಳುತ,

ಪಾಡೆ ಹಾಡಾದಾಗ

ಮಟ್ಟ ಮುಟ್ಟಿ ಮಾನ್ಯತೆಗೆ

ನೋವೆ ಮೆಟ್ಟಿಲಾಗೊ

ದಿವ್ಯ ಪರಿಯೆ ವಿಸ್ಮಯ !!!!!                 

2 comments:

  1. ಬದುಕ ಅರ್ಥವನು ತಿಳಿಸುವ ನಿಮ್ಮ ಕವನದ ಪರಿಯೇ ವಿಸ್ಮಯ!

    ReplyDelete
  2. sunaath sir nimma prothsahakara pratikriyegaagi
    aathmiya dhanyavaadagalu.

    ReplyDelete