ಸಿಂಬಿಯಾದವರು
ಮೆಟ್ಟಿಲೇರುತ್ತಿರುವವರ ಮೇಲೆಲ್ಲಾ
ಒಂದೊಂದು ಗೂಬೆಗಳ ಹೊರಿಸಿ
ಎಲ್ಲರಿಂದಲೂ ನಂಬಿಕೆಯ ದೂರವಿರಿಸಿ
ಗೂಬೆಗಳ ಹೊತ್ತವರ ತಾ ಹೊಕ್ಕು
ಕೆಕ್ಕರಿಸಿ ನೋಡುವಂತಿರಿಸಿ
ನಂಬಿಕೆಯನೇ ಬೆಪ್ಪಾಗಿಸಿ
ದೂರೀಕರಿಸಿದವರ ಒಳಸರಿದು
ಪಾಪದವನ ಪರಕೀಯ ನೆಂದೆನಿಸಿ
ಸಭೆಯಲಿ ಸಭ್ಯತನವನು ಮೆರೆವ
ನಾಜೋಕೇ ... ನೀ .. ಜೋಕೇ ... !
ಬಣ್ಣ ಬಯಲಾಗಿದೀತು ಒಮ್ಮೆ
ಗೋಸುಂಬೆ ಎಂದರಿವ
ಸಮಯವೂ ದೂರವಿಲ್ಲ.
ಇಲ್ಲಾ ...,ಬಣ್ಣ ಬಯಲಾಗಿತ್ತು ಒಮ್ಮೆ ,
ಗೋಸುಂಬೆ ಎಂಬುದೂ
ವೇದ್ಯವಾಗಿತ್ತಾದರೂ
ಸಾಮ್ರಾಜ್ಯ ಸ್ತಾಪಿಸಿಯಾಗಿದೆಯಲ್ಲ ,
ಸಾಮ್ರಾಟನ ಎದುರು
ಸಣ್ಣವರಾಗುವ ಬದಲು
ಗೆದ್ದೆತ್ತಿನ ಬಾಲ ಹಿಡಿದೆತ್ತಿ,
ಬಣ್ಣ ಪರದೆ ಇರದೇ ಮೇರುನಟರಾಗಿ
ಮೆರೆದಾಡುವರು ಕೂಟದಲಿ
ಗೂಬೆಗಳ ಹೊತ್ತವರು ,ಸ್ವಂತಿಕೆ ಸತ್ತವರು
ಗೋಸುಂಬೆಗೇ ಸಿಂಬಿಯಾದವರು
ಮೆಟ್ಟಿಲೇರುತ್ತಿರುವವರ ಮೇಲೆಲ್ಲಾ
ಒಂದೊಂದು ಗೂಬೆಗಳ ಹೊರಿಸಿ
ಎಲ್ಲರಿಂದಲೂ ನಂಬಿಕೆಯ ದೂರವಿರಿಸಿ
ಗೂಬೆಗಳ ಹೊತ್ತವರ ತಾ ಹೊಕ್ಕು
ಕೆಕ್ಕರಿಸಿ ನೋಡುವಂತಿರಿಸಿ
ನಂಬಿಕೆಯನೇ ಬೆಪ್ಪಾಗಿಸಿ
ದೂರೀಕರಿಸಿದವರ ಒಳಸರಿದು
ಪಾಪದವನ ಪರಕೀಯ ನೆಂದೆನಿಸಿ
ಸಭೆಯಲಿ ಸಭ್ಯತನವನು ಮೆರೆವ
ನಾಜೋಕೇ ... ನೀ .. ಜೋಕೇ ... !
ಬಣ್ಣ ಬಯಲಾಗಿದೀತು ಒಮ್ಮೆ
ಗೋಸುಂಬೆ ಎಂದರಿವ
ಸಮಯವೂ ದೂರವಿಲ್ಲ.
ಇಲ್ಲಾ ...,ಬಣ್ಣ ಬಯಲಾಗಿತ್ತು ಒಮ್ಮೆ ,
ಗೋಸುಂಬೆ ಎಂಬುದೂ
ವೇದ್ಯವಾಗಿತ್ತಾದರೂ
ಸಾಮ್ರಾಜ್ಯ ಸ್ತಾಪಿಸಿಯಾಗಿದೆಯಲ್ಲ ,
ಸಾಮ್ರಾಟನ ಎದುರು
ಸಣ್ಣವರಾಗುವ ಬದಲು
ಗೆದ್ದೆತ್ತಿನ ಬಾಲ ಹಿಡಿದೆತ್ತಿ,
ಬಣ್ಣ ಪರದೆ ಇರದೇ ಮೇರುನಟರಾಗಿ
ಮೆರೆದಾಡುವರು ಕೂಟದಲಿ
ಗೂಬೆಗಳ ಹೊತ್ತವರು ,ಸ್ವಂತಿಕೆ ಸತ್ತವರು
ಗೋಸುಂಬೆಗೇ ಸಿಂಬಿಯಾದವರು
ಪ್ರತಿಕ್ರಿಯೆ ನೀಡಲು ಪದವೇ ಹೊಳೆಯುತ್ತಿಲ್ಲ. ಬೆಳೆಯುವವರ ಮೇಲೆ ಇವೆಲ್ಲಾ ಇದ್ದದ್ದೇ. ಕೆಲವನ್ನೆಲ್ಲಾ ಕಡೆಗಣಿಸಬೇಕಷ್ಟೆ. ಒಮ್ಮೊಮ್ಮೆ ನನ್ನ ಅನುಭವವೂ ಹೀಗೆಯೇ. ಪ್ರಾಣವನ್ನು ಪಣವಿಟ್ಟು ಹೆಣಗಿ ಒಂದು ಕಾರ್ಯಕ್ರಮ ಮಾಡಿ ಯಶಸ್ಸಿನ ಹೊಸಿಲಲ್ಲಿರುವಾಗ ಕೆಲವರ ಮಾತು ಪಾತಾಳದಲ್ಲಿ ಕುಸಿಯುವಂತೆ ಮಾಡಿಬಿಡುತ್ತೆ.! ಆದರೆ ಪ್ರಾಮಾಣಿಕ ಶ್ರಮ ವ್ಯರ್ಥವಾಗಲಾರದು. ಅದರ ಬೆಲೆ ಇದ್ದೇ ಇದೆ.
ReplyDeleteಪದಗಳ ಬಳಕೆ ಹಾಗು ರಚನಾಕ್ರಮ ತುಂಬ ಸುಂದರವಾಗಿವೆ, ಕವನದ ತಿರುಳಿಗೆ ಸಮರ್ಪಕವಾಗಿವೆ. ನಿಮಗೆ ಅಭಿನಂದನೆಗಳು ಹಾಗು ಧನ್ಯವಾದಗಳು.
ReplyDeletesir nimma uttama pratikriyege dhanyavadagalu.
ReplyDeletesir nimma uttama pratikriye haagu prothsahakkaagi dhanyavadagalu.
ReplyDelete