Aug 29, 2015



ಸೂಜಿಮೇಲೆ

ಮಮತೆ ಪ್ರೀತಿ ವಾತ್ಸಲ್ಯದ
ಸಂಭ್ರಮಕೆ ಕಟ್ಟುವರು
ನಟನೆಯ  ಪಟ್ಟ
ನಿಂದೆಗೆ ಅಂಜಿ ಹಿಂಜರಿದಾಗ
ಮುಟ್ಟಿಸುವರು
ಜನಸೇರದವರ ಮಟ್ಟ

ಬೆರೆತಾಗ

ಸೊಸೆಯ ಗಂಡ ಆಗಿದ್ದನು
ಅಕ್ಕರೆ, ಅಮ್ಮನಿಗೆ ಅಂದು. 
ಸೊಸೆಯ ಸಕ್ಕರೆಯ ಮುಂದೆ
ಅಮ್ಮನ  ಅಕ್ಕರೆಯ ಮಗ 
ಮಕರ ವಾಗಿದ್ದಾನೆ  ಇಂದು
ಅಕ್ಕರೆ ಸಕ್ಕರೆ ಬೆರೆಯೇ ಆಗನೇ
ಮುದ್ದುಮಗ ಮಧುಮಗ ಎಂದೆಂದೂ

ಪ್ರವಾದಿ

ಹೆಂಡತಿಯ ನಟನೇ ಹೆತ್ತವಳ
ರುದ್ರ ನರ್ತನಕೆ ಬುನಾದಿ
ಹೆತ್ತವಳ ನಟನೇ ಹೆಂಡತಿಯ
ರುದ್ರ ನರ್ತನಕೆ ಬುನಾದಿ
ನಟನೆ ನರ್ತನಗಳ ನಡುವೆ
ನರಳುತಾ ಆಗುವನು ಪ್ರವಾದಿ



7 comments:

  1. ನನಗೆ ಅರ್ಥವಾಗಲಿಲ್ಲ

    ReplyDelete
  2. ಹನಿಗವನಗಳು ಅನುಭವದ ಮೂಸೆಯಿಂದ ಹೊರಹೊಮ್ಮಿದ೦ತೆ ಅರ್ಥಪೂರ್ಣವಾಗಿವೆ ಕಲಾವತಿಯವರೇ, ಅಭಿನ೦ದನೆಗಳು.

    ReplyDelete
  3. ಹನಿಗವನಗಳು ಅನುಭವದ ಮೂಸೆಯಿಂದ ಹೊರಹೊಮ್ಮಿದ೦ತೆ ಅರ್ಥಪೂರ್ಣವಾಗಿವೆ ಕಲಾವತಿಯವರೇ, ಅಭಿನ೦ದನೆಗಳು.

    ReplyDelete
  4. ಬಹು ದಿನಗಳ ನಂತರ ಮರಳಿದ್ದೀರಿ, ಕಲಾವತಿ ಮೇಡಮ್. ಆದರೆ ನಮ್ಮ ಕಾಯುವಿಕೆ ಸಾರ್ಥಕವಾಗಿದೆ. ಪ್ರಪಂಚವ್ಯವಹಾರದ ವಾಸ್ತವಗಳನ್ನು ಕೆಲವೇ ಸಾಲುಗಳಲ್ಲಿ ಸೆರೆ ಹಿಡಿದಿದ್ದೀರಿ.

    ReplyDelete
  5. ಹೌದಾ ಸರ್ , ನಿಮಗೆ ಏಕೆ ಅರ್ಥವಾಗಲಿಲ್ಲವೋ, ನನಗೂ ಅರ್ಥವಾಗಲಿಲ್ಲ, ಧನ್ಯವಾದಗಳು.

    ReplyDelete
  6. ಪ್ರಭಾಮಣಿ ಯವರೇ ನಿಮ್ಮ ಉತ್ತಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ReplyDelete
  7. ಹೌದು ಸುನಾಥ್ ಸರ್ ,ಒಂದು ಕೃತಿ ಬಿಡುಗಡೆಯ ಗಡಿಬಿಡಿಯಲ್ಲಿದ್ದೆ.ತಮ್ಮ ಅಭಿಮಾನಕ್ಕೆ ನಾನು ಋಣಿ. ಮತ್ತು ತಮ್ಮ ಉತ್ತಮ ಪ್ರತಿಕ್ರಿಯೆಗಾಗಿ ಧನ್ಯ್ಯವಾದಗಳು.

    ReplyDelete