Mar 1, 2016

ಬದ್ಧತೆ 

ಎಲೆ ಉದುರಿತೆಂದು
ಮರ ಮರುಗದು
ಎಲೆಯೂ ಉದುರಿದೆನೆಂದು
ಕೊರಗದೇ ಕರಗಿ
ಮುಂದಿನ ಚಿಗುರಿಗೇ
ಮರದ ಬೇರಿಗೆ ತನುವಾಗಿ
ಸ್ವಾರ್ಥ ಮೆರೆವಗೇ
ಸಹಕಾರ ಸೌಹಾರ್ದತೆಯ
ತತ್ವ ಸಾರುವುದು

Nov 14, 2015

ಹಾಸನಾಂಬಾ ಮಹೋತ್ಸವದಲ್ಲಿ ಭಕ್ತಿ ಸಂಗೀತ ಸೇವೆಯ ಸುಯೋಗ. 
 "ಕಾಣುತಿಹವು ಕಂಗಳು ಹಾಸನಾಂಬೆಯಾ ರೂಪ
ನಸುನಗುತಾ ಕುಳಿತಿಹಳು  ಕಳೆಯಲು ಭವದಾತಾಪ
ಮಾತೆ ಮನದ ತುಂಬಾ  ಪ್ರೇಮ ಸುಧೆಯ ತುಂಬಿ
ಸೆಳೆಯುತಿಹಳು ವರುಷಕೊಮ್ಮೆ ಭಕ್ತರಾ
ಪರಮ ಪ್ರೇಮದಿಂದ  ಪರಮ ಸ್ನೇಹದಿಂದಾ"
 
"ಬಂತೂ ದೀಪಾವಳಿ ದೇವೀ ರೂಪವ ತಾಳೀ"  
ಈ  ಎರಡು ಸ್ವರಚಿತ  ದೇವಿ  ಗೀತೆಗಳನ್ನೂ ಹಾಡುವ  ಸದಾವಕಾಷಕ್ಕಾಗಿ ಸಂತೋಷವಾಯಿತು. 

Nov 8, 2015

ಸಮಸ್ತ ಜನತೆಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Oct 31, 2015

 
 
ಹೀಗೊಂದು ಸವಿನೆನಪಿ ನೊಂದಿಗೆ ತಮ್ಮೆಲ್ಲರಿಗೂ 
 ಕನ್ನಡ ರಾಜ್ಯೋತ್ಸವದ ಶುಭಾಶಯಗಳು 
 
 
 



ರಾಷ್ಟ್ರ ಸೇವಿಕ ಸಂಘದಿಂದ ಆಯೋಜಿಸಲಾಗಿದ್ದ ೧೫ ದಿನಗಳ ಶಿಬಿರದಲ್ಲಿ ಪ್ರಭಂದಕಿಯಾಗಿ ಸೇವೆಯಲ್ಲಿದ್ದ ಸಂದರ್ಭದಲ್ಲಿ, "ಜಯಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೇ,ಜೋಗದಸಿರಿ ಬೆಳಕಿನಲ್ಲಿ",ಗೀತೆಯನ್ನುನುಡಿಸುವ ಸದವಕಾಶ










Oct 10, 2015

ಇರು ನೀ ಗಂಗೆ ಹಾಂಗ 

ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ
ಹಾಂ ಎಂದೊಡೇ
ಹಾವಾಗಿ ಕಚ್ಚುವನು ಎಚ್ಚರ
ಹಮ್ಮಿನ ಅಹಂಮ್ಮಿನ 
ಶೃಂಖಲೆಯ ಶೃಂಗದೇ
ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,  
ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ
ಕೀವು ರಕ್ತ ಸೋರಿ
ರಣವಾಗಿ ನೊಂದು ಬೆಂದು
ಹಾರಾಡಿ ನೆಕ್ಕಲು ಕೂರುವ
ನೊಣಕೆ ನಿರ್ಲಿಪ್ತೆ,  
"ನಾ... ನಿರದ ನೀನು"
ಸೈರಣೆಯ  ವಿತರಣೆ 
ಸರ್ವದರ್ಪಕೂ
ನುಡಿಯ ಮಿಡಿಯೆ 
ಮರಣ ಮೃದಂಗ,
ಮೌನತರಂಗ  ಗಂಗಾ ತರಂಗ  




 
 
 

Aug 29, 2015



ಸೂಜಿಮೇಲೆ

ಮಮತೆ ಪ್ರೀತಿ ವಾತ್ಸಲ್ಯದ
ಸಂಭ್ರಮಕೆ ಕಟ್ಟುವರು
ನಟನೆಯ  ಪಟ್ಟ
ನಿಂದೆಗೆ ಅಂಜಿ ಹಿಂಜರಿದಾಗ
ಮುಟ್ಟಿಸುವರು
ಜನಸೇರದವರ ಮಟ್ಟ

ಬೆರೆತಾಗ

ಸೊಸೆಯ ಗಂಡ ಆಗಿದ್ದನು
ಅಕ್ಕರೆ, ಅಮ್ಮನಿಗೆ ಅಂದು. 
ಸೊಸೆಯ ಸಕ್ಕರೆಯ ಮುಂದೆ
ಅಮ್ಮನ  ಅಕ್ಕರೆಯ ಮಗ 
ಮಕರ ವಾಗಿದ್ದಾನೆ  ಇಂದು
ಅಕ್ಕರೆ ಸಕ್ಕರೆ ಬೆರೆಯೇ ಆಗನೇ
ಮುದ್ದುಮಗ ಮಧುಮಗ ಎಂದೆಂದೂ

ಪ್ರವಾದಿ

ಹೆಂಡತಿಯ ನಟನೇ ಹೆತ್ತವಳ
ರುದ್ರ ನರ್ತನಕೆ ಬುನಾದಿ
ಹೆತ್ತವಳ ನಟನೇ ಹೆಂಡತಿಯ
ರುದ್ರ ನರ್ತನಕೆ ಬುನಾದಿ
ನಟನೆ ನರ್ತನಗಳ ನಡುವೆ
ನರಳುತಾ ಆಗುವನು ಪ್ರವಾದಿ



Aug 14, 2015

ಸಿಂಬಿಯಾದವರು
ಮೆಟ್ಟಿಲೇರುತ್ತಿರುವವರ ಮೇಲೆಲ್ಲಾ
ಒಂದೊಂದು ಗೂಬೆಗಳ ಹೊರಿಸಿ
ಎಲ್ಲರಿಂದಲೂ ನಂಬಿಕೆಯ ದೂರವಿರಿಸಿ
ಗೂಬೆಗಳ ಹೊತ್ತವರ ತಾ ಹೊಕ್ಕು
ಕೆಕ್ಕರಿಸಿ ನೋಡುವಂತಿರಿಸಿ
ನಂಬಿಕೆಯನೇ ಬೆಪ್ಪಾಗಿಸಿ
ದೂರೀಕರಿಸಿದವರ ಒಳಸರಿದು
ಪಾಪದವನ ಪರಕೀಯ ನೆಂದೆನಿಸಿ
ಸಭೆಯಲಿ ಸಭ್ಯತನವನು ಮೆರೆವ  
ನಾಜೋಕೇ ... ನೀ .. ಜೋಕೇ ... !
ಬಣ್ಣ ಬಯಲಾಗಿದೀತು  ಒಮ್ಮೆ  
ಗೋಸುಂಬೆ ಎಂದರಿವ  
ಸಮಯವೂ ದೂರವಿಲ್ಲ. 
ಇಲ್ಲಾ ...,ಬಣ್ಣ ಬಯಲಾಗಿತ್ತು  ಒಮ್ಮೆ ,
ಗೋಸುಂಬೆ ಎಂಬುದೂ
ವೇದ್ಯವಾಗಿತ್ತಾದರೂ 
ಸಾಮ್ರಾಜ್ಯ  ಸ್ತಾಪಿಸಿಯಾಗಿದೆಯಲ್ಲ ,
ಸಾಮ್ರಾಟನ ಎದುರು
ಸಣ್ಣವರಾಗುವ ಬದಲು
ಗೆದ್ದೆತ್ತಿನ ಬಾಲ ಹಿಡಿದೆತ್ತಿ,
ಬಣ್ಣ ಪರದೆ ಇರದೇ ಮೇರುನಟರಾಗಿ
ಮೆರೆದಾಡುವರು ಕೂಟದಲಿ
ಗೂಬೆಗಳ ಹೊತ್ತವರು ,ಸ್ವಂತಿಕೆ ಸತ್ತವರು 
ಗೋಸುಂಬೆಗೇ ಸಿಂಬಿಯಾದವರು