ಸಮಸ್ತ ಜನತೆಗೂ
*ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು *
ಬೇವು ಬೆಲ್ಲದ ಸಮ್ಮಿಶ್ರಣವನು
ಸಂತಸದಿ ಸವಿವಂತೆ
ಸುಖವೇ ಇರಲಿ
ದುಃಖವೇ ಬರಲಿ
ಸಮನಾಗಿ ಸ್ವೀಕರಿಸುವ
ಶಕ್ತಿಯನು ನೀಡಲಿ
******************
ಸೂರ್ಯನಮಸ್ಕಾರದ ಮಹತ್ವ
ಪ್ರ್ರಸ್ತುತ ಜನಜೀವನ ಯಾಂತ್ರಿಕತೆಯ ಒತ್ತಡದಿಂದ ಜರ್ಜರಿತವಾಗುತ್ತಿದೆ.ಮಾನಸಿಕ ಹಾಗು
ದೈಹಿಕ ಆರೋಗ್ಯ ಸ್ಥಿತಿಯತ್ತ ಗಮನ ಹರಿಸುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ.
ಇಂತಹ ಸಂದರ್ಭದಲ್ಲಿ ಸ್ವಲ್ಪ ಸಮಯವಾದರೂ ಯೋಗ, ವ್ಯಾಮದಂತಹ ಒಳ್ಳೆಯ
ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವುದು ಆರೋಗ್ಯಕರವಾದದ್ದು.
ಅಂತಹ ಆಸನಗಳಲ್ಲಿ ಸೂರ್ಯ ನಮಸ್ಕಾರ ಬಹಳ ಪ್ರಯೋಜನಕಾರಿ.
ಸೂರ್ಯನಮಸ್ಕಾರವು ವಿವಿಧ ಆಸನಗಳನ್ನು ಮತ್ತು ಪ್ರಾಣಯಾಮವನ್ನು ಒಳಗೊಂಡಿರುವ ಒಂದು ಸಮ್ಮಿಶ್ರಣ.ಇದು ಶಿಥಿಲೀಕರಣ ವ್ಯಾಯಾಮ ಮತ್ತು ಆಸನಗಳ
ನಡುವಿನ ಸೇತುವಾಗಿದೆ.ಇದರ ಅಭ್ಯಾಸದಿಂದ ದೇಹದಲ್ಲಿನ ಗಡಸುತನ ಮೃದುತ್ವವನ್ನು ತಳೆಯುತ್ತದೆ. ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ
ಸೂರ್ಯನಿಗೆ ಅಭಿಮುಕವಾಗಿ ನಿಂತು ಸೂರ್ಯನಮಸ್ಕಾರ ಮಾಡುವುದರಿಂದ ಆಸನಗಳಿಗೆ ಬೇಕಾದ ಕೋಮಲ ಶರೀರವು ಪ್ರಾಪ್ತವಾಗುವುದು.ಆ ಸಮಯದಲ್ಲಿ
ಹೇಳಿಕೊಳ್ಳಬೇಕಾದ ಮಂತ್ರವು,ಮಂತ್ರದ ಸಾರವು ಹೀಗಿದೆ.....
"ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾ ಪಿಹಿತಂ ಮುಖಂ
ತತ್ ತ್ವಂ ಪೂಷನ್ ,ಆಪಾವೃಣು ಸತ್ಯಧರ್ಮಾಯ ದ್ರುಷ್ಟಯೇ"
"ಪಾತ್ರೆಯನ್ನು ಮುಚ್ಚಳದಿಂದ ಮುಚ್ಚುವಂತೆ ,ನಿನ್ನ ಚಿನ್ಮಯವಾದ ಆವರಣವು
ಸತ್ಯದ ಬಾಗಿಲನ್ನು ಮುಚ್ಚಿದೆ,ಓ ಸೂರ್ಯ ದೇವಾ,ಜ್ಞಾನ ದರ್ಶನಕ್ಕಾಗಿ ಕೃಪೆ ಮಾಡಿ
ಆ ಬಾಗಿಲನ್ನು ಸರಿಸು"ಎಂಬುದು ಇದರ ಸಾರವಾಗಿದೆ.
ಸೂರ್ಯ ನಮಸ್ಕಾರದ ಹಂತಗಳಲ್ಲಿ ಪಠಿಸ ಬೇಕಾದ ಶ್ಲೋಕಗಳು.........
೧. ಓಂ,ಹ್ರಾಂ,ಮಿತ್ರಾಯ ನಮಃ
ಎಲ್ಲ ,ಜೀವಿಗಳ ಸ್ನೇಹಿತನಿಗೆ ನಮಸ್ಕಾರಗಳು (ಅನಾಹತ)
೨. ಓಂ,ಹ್ರೀಮ್,ರವಯೇ ನಮಃ
ಹೊಳೆಯುತ್ತಿರುವವನಿಗೆ ನಮಸ್ಕಾರಗಳು (ವಿಶುದ್ಧಿ)
೩. ಓಂ,ಹ್ರೂಂ,ಸೂರ್ಯಾಯ ನಮಃ
ಚೇತನ ನೀಡುವವನಿಗೆ ನಮಸ್ಕಾರಗಳು (ಸ್ವಾಧಿಷ್ಟಾನ)
೪. ಓಂ,ಹ್ರಯಿಮ್ ಭಾನವೇ ನಮಃ
ಎಲ್ಲವನ್ನು ಪ್ರಕಾಶಿಸುವವನಿಗೆ ನಮಸ್ಕಾರಗಳು (ಆಜ್ಞಾ)
೫. ಓಂ,ಹ್ರೌಮ್,ಖಗಾಯ ನಮಃ
ಆಕಾಶದಲ್ಲಿ ತ್ವರಿತವಾಗಿ ಸಂಚರಿಸುವವನಿಗೆ ನಮಸ್ಕಾರಗಳು(ವಿಶುದ್ಧಿ)
೬. ಓಂ,ಹ್ರ್ಹ,ಪೂಷ್ಣೇ ನಮಃ
ಶಕ್ತಿಯನ್ನು ಕೊಡುವವನಿಗೆ ನಮಸ್ಕಾರಗಳು (ಮಣಿಪುರ)
೭. ಓಂ,ಹ್ರಾಂ,ಹಿರಣ್ಯ ಗರ್ಭಾಯ ನಮಃ (ಸ್ವಾಧಿಷ್ಟಾನ)
ಬಂಗಾರದ ವಿಶ್ವಾತ್ಮನಿಗೆ ನಮಸ್ಕಾರಗಳು
8. ಓಂ,ಹ್ರೀಮ್,ಮರೀಚಯೇ ನಮಃ
ಬೆಳಗಿನ ದೇವತೆಗೆ ನಮಸ್ಕಾರಗಳು (ವಿಶುದ್ಧಿ)
೯. ಓಂ,ಹ್ರೂಂ,ಆದಿತ್ಯಾ ನಮಃ
ಅದಿತಿಯ ಮಗ "ವಿಶ್ವಮಾತೆಯ ಮಗನಿಗೆ ನಮಸ್ಕಾರಗಳು(ಆಜ್ಞಾ)
೧೦. ಓಂ,ಹ್ರಯಿಮ್,ಸವಿತ್ರೆ ನಮಃ
ಸೃಷ್ಟಿ ಕರ್ತನಿಗೆ ನಮಸ್ಕಾರಗಳು (ಸ್ವಾಧಿಷ್ಟಾನ)
೧೧. ಓಂ,ಹ್ರೌಮ್,ಅರ್ಕಾಯ ನಮಃ
ಸ್ತುತಿಗೆ ಅರ್ಹತೆ ಪಡೆದವನಿಗೆ ನಮಸ್ಕಾರಗಳು (ವಿಶುದ್ಧಿ)
೧೨. ಓಂ,ಹ್ರ್ಹ್,ಭಾಸ್ಕರಾಯ ನಮಃ
ಜ್ಞಾನದ ಕಡೆಗೆ ಕರೆದೊಯ್ಯುವವನಿಗೆ ನಮಸ್ಕಾರಗಳು (ಅನಾಹತ)
ಮತ್ತು ಸೂರ್ಯನಮಸ್ಕಾರದಿದಾಗುವ ಪ್ರಯೋಜನಗಳು
- ೧. ಸೂರ್ಯ ನಮಸ್ಕಾರ ಶರೀರಕ್ಕೆ ಸಂಜೀವಿನಿಯಂತೆ.
- ೨. ಶರೀರದಲ್ಲಿನ ಪ್ಯಾಂಕ್ರಿಯಾಸ್ ಚುರುಕಾಗಿ ಇನ್ಸುಲಿನ್ ಉತ್ಪತ್ತಿ ಸುಗಮವಾಗಿ
- ಮಧುಮೇಹ ರೋಗ ಸುಧಾರಿಸುವುದು.
- ೩. ನಾಡಿ ವ್ಯವಸ್ಥೆ ಸಂಪೂರ್ಣ ಆರೋಗ್ಯಕರವಾಗಿ ನರಗಳ ಬಲಹೀನತೆ,ಪಾರ್ಶ್ವವಾಯುವಿನಂತ ಸಮಸ್ಯೆಗಳು ಸುಧಾರಿಸುತ್ತವೆ.
- ೪. ಹೃದಯದ ಸ್ನಾಯುಗಳು,ಲಿವರ್ ,ಮೂತ್ರಪಿಂಡಗಳ ಆರೋಗ್ಯ ವೃದ್ಧಿಸುತ್ತದೆ.
- ಮತ್ತು ಅದಕ್ಕೆ ಸಂಬಂಧಪಟ್ಟ ಕಾಯಿಲೆಗಳು ಸುಧಾರಿಸುತ್ತವೆ.
- ೫. ಬೆನ್ನುಮೂಳೆಗೆ ರಕ್ತ ಸಂಚಾರ ಹೆಚ್ಚಾಗಿ,ಧ್ರುಧವಾಗುತ್ತವೆ,ನವೋತ್
ಸಾಹ ತುಂಬುತ್ತದೆ. - ೬. ಪ್ರಾತಃ ಕಾಲದ ಸೂರ್ಯ ಕಿರಣಗಳು ಆರೋಗ್ಯಕರವಾದವು.ಆಸೂರ್ಯಕಿರಣಸ್ಪರ್
ಶದಿಂದ - ಚರ್ಮವ್ಯಾದಿಗಳು ನಿವಾರಣೆಯಾಗುತ್ತವೆ.
- ೭. ಶರೀರದಲ್ಲಿನ ಕೊಬ್ಬಿನ ಪ್ರಮಾಣ ಕಡಿಮೆಯಾಗಿ ಸ್ಥೂಲಕಾಯ ತಗ್ಗಿ ಹೊಟ್ಟೆ ಮತ್ತು ಹೃದಯ ಸಂಬಂಧಿ ವ್ಯಾದಿಗಳಿಂದ ರಕ್ಷಣೆ ಒದಗಿಸುತ್ತದೆ
- ೯. ಮೆದುಳಿಗೆ ರಕ್ತ ಸಂಚಾರ ಚುರುಕುಗೊಂಡು,ತಲೆನೋವು,ಅರೆ
ತಲೆನೋವಿನಿಂದ ತಲೆಗೆ ಸಂಬಂದಿಸಿದ ಸಮಸ್ಯೆಗಳು ಬರುವುದಿಲ್ಲ - ೧೦. ಕೀಲುನೋವು ವಾತ ಸಂಬಂದಿ ಕಾಯಿಲೆಗಳುನಿವಾರಣೆಯಾಗು
ವವು. ಶ್ವಾಸಕೋಶದ ಆರೋಗ್ಯ ಸುಧಾರಿಸಿ,ವ್ಯಾ ಧಿಯ ತೀವ್ರತೆ ಕಡಿಮೆಯಾಗುತ್ತದೆ. - ೧೨. ಸ್ವೇದಗ್ರಂಥಿಗಳು ಆರೋಗ್ಯಪೂರ್ಣವಾಗಿ,ಶರೀರ ಲವಲವಿಕೆಯಿಂದ ಕೂಡಿರುತ್ತದೆ.
- ೧೩. ಅಜೀರ್ಣ,ಮಲಬದ್ಧತೆ,ಉದರ ಸಂಬಂಧಿ ವ್ಯಾಧಿಗಳು ಕಡಿಮೆಯಾಗುತ್ತದೆ.
- ೧೪. ಜ್ಞಾನೇಂದ್ರಿಯಗಳು ಚುರುಕಾಗುತ್ತವೆ.
ಕಲಾವತಿಯವರೇ,
ReplyDeleteನಿಮಗೂ ಉಗಾದಿಯ ಶುಭಾಶಯಗಳು. ಸೂರ್ಯನಮಸ್ಕಾರದಲ್ಲಿ ಹೇಳುವ ಶ್ಲೋಕಗಳ ಅರ್ಥವನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ. ಸ೦ಗ್ರಹ ಯೋಗ್ಯ ಲೇಖನ ನೀಡಿದ್ದಕ್ಕಾಗಿ ಅಭಿನ೦ದನೆಗಳು.
ಕಲಾವತಿ ಮೇಡಂ;ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ ಯುಗಾದಿಯ ಶುಭಾಶಯಗಳು.ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು.ನಮಸ್ಕಾರ.
ReplyDeletethanks for the information..
ReplyDeletehappy ugadi..
ಯುಗಾದಿಯ ಶುಭಾಶಯಗಳು ಕಲಾವತಿ ಅವರಿಗೆ. ಹೊಸ ವರುಷಕ್ಕೆ ಉತ್ತಮ ಮಾಹಿತಿಯನ್ನು ಕೂಡ ನೀಡಿದ್ದೀರಿ. ಧನ್ಯವಾದಗಳು.
ReplyDeleteಅನ೦ತ್
ಕಲಾವತಿಯವರೆ,
ReplyDeleteಯುಗಾದಿಯ ಹಾರ್ದಿಕ ಶುಭಾಶಯಗಳು. ಸೂರ್ಯನಮಸ್ಕಾರದ ಮಾಹಿತಿಗಾಗಿ ಧನ್ಯವಾದಗಳು.
"ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
ReplyDeleteHappy Ugadi.
ReplyDeleteಪುಟ್ಟಿಪ್ರಪಂಚಕ್ಕೆ ಭೇಟಿ ನೀಡಿದಕ್ಕೆ ವಂದನೆಗಳು!
ReplyDeleteಸೂರ್ಯ ನಮಸ್ಕಾರದ ಬಗ್ಗೆ, ಶ್ಲೋಕಗಳ ಅರ್ಥ, ಉಪಯೋಗಗಳು ಎಲ್ಲವನ್ನು ವಿವರವಾಗಿ ತಿಳಿಸಿದ್ದೀರಿ, ವಂದನೆಗಳು:)
ರೂಪ
prabhamaniyavare,nimma prathama pratikriyege dhanyavaadagalu.
ReplyDeletechukki cittaara ravare nimagoo thanks.
ReplyDeleteD krishna murthy sir ravare,namma blogge nimage aatmiya svaagata.nimma uttama pratikriyege dhanyavaadagalu.
ReplyDeleteanataraj sirravare nimma uttama pratikriyege dhanyavaadagalu.
ReplyDeletesunaat sir ravare,nimma uttama pratikriyege dhanyavaadagalu.
ReplyDeletesagaradaacheya inchararavare,nimagu khara naama samvatsarada shubhaashayagalu.haagu dhanyavaadagalu.
ReplyDeletemanamukta ravare,thanks.
ReplyDeleteputtiamma nimagoo namma blogge aatmiya svaagata.nimma uttama pratikriyege dhanyavaadagalu.
ReplyDelete