ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಬಾಯಾರಿ ಬಳಲಿದಾಗ
ನೀರಡಿಕೆಯನಳಿಸುವ ಜೀವಜಲದಂತೆ
ಭೂಮಿಯನು ತಣಿಸುವ ಕೆರೆ ತೊರೆಯಂತೆ
ಉಳಿಯಬೇಕು ಎಲ್ಲರೆದೆಗಳಲಿ
ಸವಿಯಾಗಿ ತಂಪೆರೆವ ತನಿವಣ್ಣಿನಂತೆ
ಫಲವನೀವ ಪಾದಪಗಳಂತೆ
ಬೇಧವೆಣಿಸದೆ ನೆರಳನೀವ ವಟ ವೃಕ್ಷದಂತೆ
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ತಲೆಮಾರನು ಸಲಹುವ ನಾರಿಕೇಳ
ಕಲ್ಪವೃಕ್ಷದಂತೆ, ಬೇಧವಿರದೇ ಹಬ್ಬಿ
ಪಸರಿಸುವ ಹೂಗಳ ಪರಿಮಳದಂತೆ.
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಇಂಪಾದ ಕೋಗಿಲೆಯ ಮಧುರಗಾನದಂತೆ
ಹಕ್ಕಿಗಳ ಚಿಲಿಪಿಲಿಯ ಕಲರವದಂತೆ
ಆಹ್ಲಾದವನಿವ ಪ್ರಕೃತಿಯ
ಸೌಂದರ್ಯದ ಹಚ್ಚ ಹಸುರಿನಂತೆ
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜುಳುಜುಳು ಹರಿವ ಜಲದ ಕಲರವದಂತೆ,
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಪುರಂದರಕನಕ ದಾಸವರೇಣ್ಯರ ಸಾಮಾಜಿಕ
ಕಳಕಳಿಯ ಸುಮಧುರ ಸಂಕೀರ್ತನದಂತೆ
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮಾನವತೆಯ ಮೆರೆದ ಶಂಕರ
ರಾಮಾನುಜ ಮಧ್ವ ಶಿವಶರಣ ಅಂಬೇಡ್ಕರ್ರಂತೆ,
ವೀರ ಯೋಧರ ನಿಸ್ವಾರ್ಥದಂತೆ
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮುದ್ದುಕಂದನ ಮುಗ್ಧ ನಗುವಿನಂತೆ
ಅಚ್ಚಳಿಯದ ಅಂದದ ಹೂನಗುವಿನಂತೆ
ಹಸುಗೂಸಿನ ನಸುನಗುವಂತೆ
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜಗವಿರುವರೆಗೆ ಅರಿವರಳಿಸುವ
ಕಾವ್ಯೋತ್ಸವದ ಮೂರ್ತಿಗಳಾಗಿ ಮೆರೆಯುತ್ತಿರುವ
ಕುವೆಂಪು ಬೇಂದ್ರೆ ಗುಂಡಪ್ಪ ಕಾರಂತರಂತೆ
ಉಳಿಯಬೇಕು ಬದುಕು ಎಲ್ಲರೆಗಳಲಿ
ವಿಕಲಚೇತನರ ಆತ್ಮ ಚೈತನ್ಯದಂತೆ
ನಲಿಯಬೇಕು ನೆನಪು ದೀನದಲಿತರ ,
ವಿಕಲ ಚೇತನರ ಬದುಕಿನಲಿ
ಅಳಿಯಬೇಕು ಎಲ್ಲರೆದೆಗಳಲಿ
ದ್ವೇಷ ಅಸೂಯೆ ಅಹಂ
*************
ಒಳ್ಳೆಯ ಭಾವ ಆಶಾವಾದ ತುಂಬಿದ ಕವಿತೆ....ಚೆನ್ನಾಗಿದೆ..
ReplyDeleteಹೌದು...,ಉಳಿಯಬೇಕು ಬದುಕು ಎಲ್ಲರೆದೆಗಳಲಿ...
ಬದುಕು ಉಳಿಯಬೇಕು. ಹೇಗೆನ್ನುವದನ್ನು ಸುಂದರವಾಗಿ ಚಿತ್ರಿಸಿದ್ದೀರಿ.
ReplyDeleteಬದುಕು ಹೇಗೆ ಸು೦ದರವಾಗಿ ಉಳಿದಿರಬೇಕೆನ್ನುವ ಚೆ೦ದದ ಕವಿತೆ.
ReplyDeleteಉಳಿಯಬೇಕು ಬದುಕು ಎಲ್ಲರೆದೆಗಳಲಿ ಅನ್ನುವ ಶೀರ್ಷಿಕೆಯೇ ಆಪ್ತವಾಗಿದೆ..
ReplyDeleteಸು೦ದರ ಸಾಲುಗಳು.
ಉತ್ತಮ ಶೀರ್ಷಿಕೆಯ ಆತ್ಮೀಯ ಕವನ. ಅಭಿನ೦ದನೆಗಳು ಕಲಾವತಿಯವರೇ.
ReplyDeleteಸು೦ದರ ಸಾಲುಗಳು.
ReplyDeleteಎಂತಹ ಸುಂದರ ಕವನ ಮೇಡಂ!ಅದ್ಭುತ ಸಾಲುಗಳು!
ReplyDeleteಮೌನರಾಗ ಮನೆಯವರೇ, ನಿಮಗೆ ಆತ್ಮೀಯ ಸ್ವಾಗತ.ನಿಮ್ಮ ಭಾವಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಸುನಾಥ್ ಸರ್, ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು..
ReplyDeleteಮನಮುಕ್ತರವರೆ,ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಚುಕ್ಕಿ ಚಿತ್ತಾರ ರವರೆ, ನಿಮ್ಮ ಆಪ್ತವಾದ ಪ್ರತಿಕ್ರಿಯೆಗೆ ಧನ್ಯವಾದಗಳು
ReplyDeleteಪ್ರಭಾಮನಿಯವರೇ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಆತ್ಮೀಯ ಧನ್ಯವಾದಗಳು
ReplyDeleteಮಹಾಭಲಭಟ್ ಸರ್ ರವರಿಗೆ ಆತ್ಮೀಯ ಸ್ವಾಗತ ,ಮತ್ತು ನಿಮ್ಮ ಉತ್ತಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು
ReplyDeleteಡಾ.ಕೃಷ್ಣ ಮೂರ್ತಿ ಸರ್ ನಿಮ್ಮ ಉತ್ತಮ ಪ್ರತಿಕ್ರಿಯೆಗಾಗಿ ದನ್ಯವಾದಗಳು.
ReplyDelete