ಚಿಗುರದ ಒನಕೆ
ಹಲವು ಹಿರಿತನ ಮರವಾದಂತೆ,
ನೆರಳ ಕಡೆಗಣಿಸಿ
ಕಿರಿತನದ ಅನಾದರಕೆ
ಸೋತು ಸೊರಗಿ
ಅಜ್ಞಾನಕೆ ಮರುಗಿ
ದುರಾಸೆಗೆ ಕೊರಗಿ
ಕೊರಡಾಗಿ
ಚಿಗುರದ ಒನಕೆಗಳಿಗಾಗಿ
ಪರಿತಪಿಸುತ
ಅಜ್ಞಾನದ ತೆರೆ ಸರಿಸಲು
ಹೊಂದಿಕೆಯ ಕೈಯ್ಯಾಡಿಸಲು
ಕೈಯ್ಯನ್ನೇ ಕತ್ತರಿಸಿ
ಹರಿವ ನೆತ್ತರನು, ನೋವನು
ಅರಿಯದಂತೆ ಸರಿದು
ಕೈ ಆಡಿಸಿದಂತೆ
ಕುಣಿವ ಒನಕೆಗಳೇ
ಮರದ ಒಂದೊಂದು ಕೊಂಬೆ
ನೀವೆಂದು ಮರೆವುದೇಕೋ .......???
ಹಲವು ಹಿರಿಮರಕೆ
ಕೊಂಬೆಗಳೆಲ್ಲ ನನ್ನವೇ....
ಎಂಬ ಅರಿವಿದ್ದೂ
ಹಲವನು
ಬರಡಾಗಿಸುವ ಹೆಬ್ಬಯಕೆಗೆ
ಬಲಿಯಾಗಿ
ಬಾಡುವ ಭಯಕೆ
ಹಲವು ಕೊಂಬೆ..
ಬೇರ್ಪಟ್ಟು
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ
ತನ್ನ ಮರವೇ
ಕೊಡಲಿಕಾವಾಗಿ
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಮರಕೇಕೆ ತನ್ನ ಸಸಿತನದ
ಮರೆವೋ....!!! ಅರಿಯದು...
ಹಲವು ಹಿರಿತನ ಮರವಾದಂತೆ,
ನೆರಳ ಕಡೆಗಣಿಸಿ
ಕಿರಿತನದ ಅನಾದರಕೆ
ಸೋತು ಸೊರಗಿ
ಅಜ್ಞಾನಕೆ ಮರುಗಿ
ದುರಾಸೆಗೆ ಕೊರಗಿ
ಕೊರಡಾಗಿ
ಚಿಗುರದ ಒನಕೆಗಳಿಗಾಗಿ
ಪರಿತಪಿಸುತ
ಅಜ್ಞಾನದ ತೆರೆ ಸರಿಸಲು
ಹೊಂದಿಕೆಯ ಕೈಯ್ಯಾಡಿಸಲು
ಕೈಯ್ಯನ್ನೇ ಕತ್ತರಿಸಿ
ಹರಿವ ನೆತ್ತರನು, ನೋವನು
ಅರಿಯದಂತೆ ಸರಿದು
ಕೈ ಆಡಿಸಿದಂತೆ
ಕುಣಿವ ಒನಕೆಗಳೇ
ಮರದ ಒಂದೊಂದು ಕೊಂಬೆ
ನೀವೆಂದು ಮರೆವುದೇಕೋ .......???
ಹಲವು ಹಿರಿಮರಕೆ
ಕೊಂಬೆಗಳೆಲ್ಲ ನನ್ನವೇ....
ಎಂಬ ಅರಿವಿದ್ದೂ
ಹಲವನು
ಬರಡಾಗಿಸುವ ಹೆಬ್ಬಯಕೆಗೆ
ಬಲಿಯಾಗಿ
ಬಾಡುವ ಭಯಕೆ
ಹಲವು ಕೊಂಬೆ..
ಬೇರ್ಪಟ್ಟು
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ
ತನ್ನ ಮರವೇ
ಕೊಡಲಿಕಾವಾಗಿ
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಮರಕೇಕೆ ತನ್ನ ಸಸಿತನದ
ಮರೆವೋ....!!! ಅರಿಯದು...
ಈ ಜಗದ ವಿಪರ್ಯಾಸವನ್ನು ನಿರೂಪಿಸುವ ಈ ನಿಮ್ಮ ಕವನ ಇಷ್ಟವಾಯಿತು.
ReplyDeletesunaath sir,nimma takshanada
ReplyDeletevicharapoorna pratikriyege mattu
nimage ishtavaagiddakke
aatmiya dhanyavaadagalu.
ತನ್ನ ಮರವೇ
ReplyDeleteಕೊಡಲಿಕಾವಾಗಿ
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಇಷ್ಟವಾದ ಸಾಲುಗಳು....
venu vinod ravare nimage
ReplyDeleteaatmiya svaagata.
nimma uttma pratikriyegaagi
dhanyavaadagalu.
[ಹಲವು ಕೊಂಬೆ..
ReplyDeleteಬೇರ್ಪಟ್ಟು
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ
ತನ್ನ ಮರವೇ
ಕೊಡಲಿಕಾವಾಗಿ ]
ಬೇರ್ಪಟ್ಟ ಕೊಂಬೆ ಬೇರೆಡೆ ಬೇರ್ಬಿಟ್ಟು ತನ್ನ ಅಸ್ತಿತ್ವಕಾಗಿ ಹೆಣಗಾಟ| ತನ್ನ ಮರವೇ ಕೊಡಲಿಯ ಕಾವಾಗಬಹುದೆಂಬ ಆತಂಕ!!
ಅದ್ಭುತ!!
sir,nimma uttama pratikriyegaagi aatmiya dhanyavaadagalu.
ReplyDelete