Aug 7, 2013

ಒಂದು ಕೊಂಡರೆ ,ಒಂದು ಉಚಿತ 

ಆಸೆಗಳ ರಾಶಿಯಲ್ಲಿ ಸಿಕ್ಕಿದ್ದೆಷ್ಟೋ 

ಹೆಕ್ಕಿದ್ದು ಎಷ್ಟೋ ದಕ್ಕಿದ್ದು ಎಷ್ಟೋ

ದಕ್ಕದ್ದು ಎಷ್ಟೋ ದಕ್ಕಿದ್ದು ಅನುಭವಿಸಿದ್ದೆಷ್ಟೋ

ಅನುಭವಿಸಲಾಗದ್ದೆಷ್ಟೋ

ದಕ್ಕಿದ್ದರಲ್ಲಿ ನೋವೆಷ್ಟೋ ನಲಿವೆಷ್ಟೋ

ಅಂತರ್ಗಗತವಾದದ್ದೆಷ್ಟೋ

ಅನಾವರಣಗೊಂಡದ್ದೆಷ್ಟೋ

ದೃಶ್ಯವೆಷ್ಟೋ ಅದೃಷ್ಯವೆಷ್ಟೋ

ಸಿಕ್ಕಿದ್ದು  ,ದಕ್ಕಿ,

ಅನುಭವಕ್ಕೆ ಸಿಕ್ಕಿ, ಆನಂದಿಸಿದ್ದಷ್ಟಕ್ಕೆ

ಸಂತೃಪ್ತಿಯಿಂದಿದ್ದರೆ ,

ನೆಮ್ಮದಿ ಖಚಿತ,!!!!!!!!
ಆರೋಗ್ಯ ಉಚಿತ!!!!!!!!!!!!! 

2 comments:

  1. ತುಂಬಾ ಮಾರ್ಮಿಕವಾಗಿದೆ ಮೇಡಂ,
    ಕಾವ್ಯ ನಾಮದ ಜೊತೆ ನಿಮ್ಮ ಹೆಸರು ಇದ್ದರೆ ಚೆನ್ನ
    http://badari-poems.blogspot.in/

    ReplyDelete
  2. badarinaath sir kaavya naamadalle namma hesaride,

    nimma tatkshanada
    uttama pratikriyegaagi,
    protsaahakkagi tumba dhanyavaadagalu.

    ReplyDelete