ಸ್ಪಂದನ ವೇದಿಕೆ ,ಹಾಸನ ಮತ್ತು ಮಹಿಳಾ ಪ್ರಥಮದರ್ಜೆ ಕಾಲೇಜು ,ಹಾಸನದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನೆಹರೂಜಿ ಯವರಿಂದ ವೃತ್ತಿಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಬಂದು ೬೫-೭೦ರ ಹರೆಯದಲ್ಲೂ ಎರಡು ಗಂಟೆಗಳ ಕಾಲ ಸತತವಾಗಿ ಸ್ವಲ್ಪವೂ ಆಯಾಸಪಡದೇ ನಿಂತು ವಿಧ್ಯಾರ್ಥಿಗಳಿಗೆ ವಿವರವಾದ ಅತುತ್ತಮ ಹಾಗೂ ಉಪಯುಕ್ತ ಮಾಹಿತಿಯ ಬಗ್ಗೆ ಮಾರ್ಗದರ್ಶನ ನೀಡಿ ಪ್ರಶ್ನೆ ಕೇಳಿದಂತಹ ವಿಧ್ಯಾರ್ಥಿಗಳಿಗೆ ತಾವೇ ಕ್ಯಾಡ್ಬರಿಸ್ ಚಾಕೋಲೆಟ್ ಗಳನ್ನ ಬಹುಮಾನವಾಗಿ ಕೊಟ್ಟು ನಮ್ಮಿಂದ ಒಂದು ಉಪಹಾರವನ್ನುಸಹ ಸ್ವೀಕರಿಸದೆ ೧-೩೦ ರ ವೇಳೆಗೆ ಕಾರ್ಯಕ್ರಮ ಮುಗಿಸಿಕೊಂಡು ೪ ಗಂಟೆ ಫ್ಲೈಟ್ಗೆ ಹಾಸನದಿಂದ ಬಾಂಕಾಕ್ ಗೆ ಹೊರಟರು. ಇಂತಹ ವಿಶೇಷ ವ್ಯಕ್ತಿಗಳು ಇದ್ದಾರೆ.ಎಂಬುದೇ ಸಂತಸದ, ಹೆಮ್ಮೆಯ ಸಂಗತಿ. ಹೀಗೆ ಪ್ರತಿಯೊಬ್ಬವಿಧ್ಯಾವಂತರಲ್ಲೂ ಸಾಧಕರಲ್ಲೂ ಇಂತಹ ಸಮಯದ ಸದುಪಯೋಗ,ಸಮಯಪ್ರಜ್ಞೆ, ನಿಸ್ವಾರ್ಥಸೇವಾ ಮನೋಭಾವ ಬೆಳೆದರೆ ನಮ್ಮ ನಾಡು ,ನಮ್ಮ ದೇಶದ ಸಮಸ್ಯೆಗಳು ಸವಾಲಾಗಿ ಸ್ವೀಕರಿಸುವ ಸ್ಥೈರ್ಯ ಪ್ರತಿಯೊಬ್ಬರಲ್ಲೂಮೈಗೂಡುವುದರಲ್ಲಿ ಸಂದೇಹವಿಲ್ಲವೆನ್ನಿಸಿತು.
ಹಣದಿ೦ದಲೇ ಎಲ್ಲವನ್ನೂ, ಎಲ್ಲರನ್ನೂ ಅಳೆಯುವ ಈ ಕಾಲದಲ್ಲಿ ಡಾ. ನೆಹರೂಜಿಯವರ೦ಥಾ ಅಪರೂಪದ ವ್ಯಕ್ತಿಗಳು ಆದರ್ಶಪ್ರಾಯರಾಗುತ್ತಾರೆ. ಸ್ಪಂದನ ವೇದಿಕೆಯ ಮೂಲಕ ನಿಮ್ಮ ಉಪಯುಕ್ತ ಚಟುವಟಿಕೆಗಳನ್ನು ನೋಡಿ ಸ೦ತಸವಾಯ್ತು ಕಲಾವತಿಯವರೇ, ಅಭಿನ೦ದನೆಗಳು.
ReplyDeleteಡಾ. ನೆಹರೂಜಿಯವರಂಥ ವ್ಯಕ್ತಿಯ ಬಗೆಗೆ ತಿಳಿದು ಖುಶಿಯಾಯಿತು. ಇಂತಹ ವ್ಯಕ್ತಿಯನ್ನು ಪರಿಚಯಿಸುತ್ತಿರುವ ನಿಮಗೆ ಧನ್ಯವಾದಗಳು.
ReplyDeleteprabhamaniyavare nimma Athmiya
ReplyDeletepratikriyegaagi Athmiya dhanyavaadagalu.
sunaath sir nimma uttama
ReplyDeletepratikriyegaagi Athmiya dhanyavaadagalu.