Dec 17, 2014

ಕೋರಿಕೆ,
ಕವಿತೇ ,ನೀನೆಲ್ಲಿ ಅವಿತೇ ..??


ಮೊದಲಿನಂತೆ ಮೂಡಿ
ಬರುತಿಲ್ಲ ಮುದದಿ  ಏಕೋ
ಎಲ್ಲೋ  ಅಡಗಿ ಕುಳಿತೇ   
ಯಾವ ಕಾನನದಿ  ಅವಿತೇ 
ದೂರದಮಲೆನಾಡಲಿ 
ಕುಳಿತು ಕನವರಿಸುತಿಹಳು
ನಿನಗಾಗಿ   ನನ್ನೊಲವಿನಾ  ಗೆಳತಿ  
ಕತ್ತಲಲೆ ಎದ್ದು ಮೂಡಿಸಿದೆ
ಅವಳ ಕನವರಿಕೆ  
ನನ್ನೊಳಗೆ ಬಯಲಿನಲಿ 
ಬಾ ಮುದದಿ  ಮೈಮರೆಸು,
ಮನತಣಿಸು , ಅಳಲ ಆಲಿಸು,
ಬೇಗೆ ತಣಿಸಿ ಬಯಕೆ ತೀರಿಸು 
ನಮ್ಮಿಬ್ಬರ ಗೆಳೆತನಕೆ
ಸ್ನೇಹ ಸೇತುವಾದೆ ನೀನಂದು ,
ಅವಿತು ಅಣಕಿಸುತ ಕುಳಿತಿಹೆ
ಏಕೆ ನೀನಿಂದು? 
ಬಳಲಿಸುತಿಹೆ
ಇಂದೇಕೆ  ಬಾರದೇ,
ಸಾಕೆನಿಸಿದರು  ಮರುಜನ್ಮ ,
ಬೇಕೆನಿಸಿ  ಬಯಸುತಿಹಳು 
ನಿನಗಾಗಿ ನೊಂದು ,
ನರ ಜನುಮ ಮತ್ತೊಂದು . 
ಬಂದು ತೀರಿಸು ಅವಳ ಬಯಕೆ , 
ಮುಂದಿಡುತಿಹೆನು  ಗೆಳತಿಗಾಗಿ 
ಈ ನನ್ನ  ಕೋರಿಕೆ  
ಕವಿತೇ , ಬಾರದೇ
ನೀನೆಲ್ಲಿ ಅಡಗಿ ಕುಳಿತೇ ... ?? 

4 comments:

  1. ಕವಿತೆ ನಿಮ್ಮ ಲೇಖನಿಯಲ್ಲಿ ಅಡಗಿ ಕೂತಿದ್ದು, ಇದೀಗ ಚೆಲುವಾಗಿ, ಚಟುವಟಿಕೆಯಿಂದ ಹೊರಬಂದಿದೆಯಲ್ಲ!

    ReplyDelete
  2. `ಎಲ್ಲಿ' ಎ೦ದು ಕೇಳುವಾಗಲೇ `ಇಗೋಇಲ್ಲೇ' ಎ೦ದು ಅವತರಿಸಿದ್ದಾಳೆ ಕವಿತೆ! ಇನ್ನೇಕೆ ಚಿ೦ತೆ?

    ReplyDelete
  3. sir nimma uttama pratikriye haagu protsaahakkaagi Athmiya dhanyavaadagalu.

    ReplyDelete
  4. aparuupada Agamana prabhaamaniyavare.poornima call maadidaaga nammibbara naduve nadeda kanavarikeyinda moodida kavite.nimma Atmiya prtikriyegaagi dhanyavaadagalu.nimmanna takshana bheti maadbekalla,nimma number missaagide.call maadoke saadhyana?

    ReplyDelete