Oct 31, 2015
Oct 10, 2015
ಇರು ನೀ ಗಂಗೆ ಹಾಂಗ
ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ
ಹಾಂ ಎಂದೊಡೇ
ಹಾವಾಗಿ ಕಚ್ಚುವನು ಎಚ್ಚರ
ಹಮ್ಮಿನ ಅಹಂಮ್ಮಿನ
ಶೃಂಖಲೆಯ ಶೃಂಗದೇ
ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,
ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ
ಕೀವು ರಕ್ತ ಸೋರಿ
ರಣವಾಗಿ ನೊಂದು ಬೆಂದು
ಹಾರಾಡಿ ನೆಕ್ಕಲು ಕೂರುವ
ನೊಣಕೆ ನಿರ್ಲಿಪ್ತೆ,
"ನಾ... ನಿರದ ನೀನು"
ಸೈರಣೆಯ ವಿತರಣೆ
ಸರ್ವದರ್ಪಕೂ
ನುಡಿಯ ಮಿಡಿಯೆ
ಮರಣ ಮೃದಂಗ,
ಮೌನತರಂಗ ಗಂಗಾ ತರಂಗ
ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ
ಹಾಂ ಎಂದೊಡೇ
ಹಾವಾಗಿ ಕಚ್ಚುವನು ಎಚ್ಚರ
ಹಮ್ಮಿನ ಅಹಂಮ್ಮಿನ
ಶೃಂಖಲೆಯ ಶೃಂಗದೇ
ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,
ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ
ಕೀವು ರಕ್ತ ಸೋರಿ
ರಣವಾಗಿ ನೊಂದು ಬೆಂದು
ಹಾರಾಡಿ ನೆಕ್ಕಲು ಕೂರುವ
ನೊಣಕೆ ನಿರ್ಲಿಪ್ತೆ,
"ನಾ... ನಿರದ ನೀನು"
ಸೈರಣೆಯ ವಿತರಣೆ
ಸರ್ವದರ್ಪಕೂ
ನುಡಿಯ ಮಿಡಿಯೆ
ಮರಣ ಮೃದಂಗ,
ಮೌನತರಂಗ ಗಂಗಾ ತರಂಗ
Aug 29, 2015
ಸೂಜಿಮೇಲೆ
ಮಮತೆ ಪ್ರೀತಿ ವಾತ್ಸಲ್ಯದ
ಸಂಭ್ರಮಕೆ ಕಟ್ಟುವರು
ನಟನೆಯ ಪಟ್ಟ
ನಿಂದೆಗೆ ಅಂಜಿ ಹಿಂಜರಿದಾಗ
ಮುಟ್ಟಿಸುವರು
ಜನಸೇರದವರ ಮಟ್ಟ
ಬೆರೆತಾಗ
ಸೊಸೆಯ ಗಂಡ ಆಗಿದ್ದನು
ಅಕ್ಕರೆ, ಅಮ್ಮನಿಗೆ ಅಂದು.
ಸೊಸೆಯ ಸಕ್ಕರೆಯ ಮುಂದೆ
ಅಮ್ಮನ ಅಕ್ಕರೆಯ ಮಗ
ಮಕರ ವಾಗಿದ್ದಾನೆ ಇಂದು
ಅಕ್ಕರೆ ಸಕ್ಕರೆ ಬೆರೆಯೇ ಆಗನೇ
ಮುದ್ದುಮಗ ಮಧುಮಗ ಎಂದೆಂದೂ
ಪ್ರವಾದಿ
ಹೆಂಡತಿಯ ನಟನೇ ಹೆತ್ತವಳ
ರುದ್ರ ನರ್ತನಕೆ ಬುನಾದಿ
ಹೆತ್ತವಳ ನಟನೇ ಹೆಂಡತಿಯ
ರುದ್ರ ನರ್ತನಕೆ ಬುನಾದಿ
ನಟನೆ ನರ್ತನಗಳ ನಡುವೆ
ನರಳುತಾ ಆಗುವನು ಪ್ರವಾದಿ
Aug 14, 2015
ಸಿಂಬಿಯಾದವರು
ಮೆಟ್ಟಿಲೇರುತ್ತಿರುವವರ ಮೇಲೆಲ್ಲಾ
ಒಂದೊಂದು ಗೂಬೆಗಳ ಹೊರಿಸಿ
ಎಲ್ಲರಿಂದಲೂ ನಂಬಿಕೆಯ ದೂರವಿರಿಸಿ
ಗೂಬೆಗಳ ಹೊತ್ತವರ ತಾ ಹೊಕ್ಕು
ಕೆಕ್ಕರಿಸಿ ನೋಡುವಂತಿರಿಸಿ
ನಂಬಿಕೆಯನೇ ಬೆಪ್ಪಾಗಿಸಿ
ದೂರೀಕರಿಸಿದವರ ಒಳಸರಿದು
ಪಾಪದವನ ಪರಕೀಯ ನೆಂದೆನಿಸಿ
ಸಭೆಯಲಿ ಸಭ್ಯತನವನು ಮೆರೆವ
ನಾಜೋಕೇ ... ನೀ .. ಜೋಕೇ ... !
ಬಣ್ಣ ಬಯಲಾಗಿದೀತು ಒಮ್ಮೆ
ಗೋಸುಂಬೆ ಎಂದರಿವ
ಸಮಯವೂ ದೂರವಿಲ್ಲ.
ಇಲ್ಲಾ ...,ಬಣ್ಣ ಬಯಲಾಗಿತ್ತು ಒಮ್ಮೆ ,
ಗೋಸುಂಬೆ ಎಂಬುದೂ
ವೇದ್ಯವಾಗಿತ್ತಾದರೂ
ಸಾಮ್ರಾಜ್ಯ ಸ್ತಾಪಿಸಿಯಾಗಿದೆಯಲ್ಲ ,
ಸಾಮ್ರಾಟನ ಎದುರು
ಸಣ್ಣವರಾಗುವ ಬದಲು
ಗೆದ್ದೆತ್ತಿನ ಬಾಲ ಹಿಡಿದೆತ್ತಿ,
ಬಣ್ಣ ಪರದೆ ಇರದೇ ಮೇರುನಟರಾಗಿ
ಮೆರೆದಾಡುವರು ಕೂಟದಲಿ
ಗೂಬೆಗಳ ಹೊತ್ತವರು ,ಸ್ವಂತಿಕೆ ಸತ್ತವರು
ಗೋಸುಂಬೆಗೇ ಸಿಂಬಿಯಾದವರು
ಮೆಟ್ಟಿಲೇರುತ್ತಿರುವವರ ಮೇಲೆಲ್ಲಾ
ಒಂದೊಂದು ಗೂಬೆಗಳ ಹೊರಿಸಿ
ಎಲ್ಲರಿಂದಲೂ ನಂಬಿಕೆಯ ದೂರವಿರಿಸಿ
ಗೂಬೆಗಳ ಹೊತ್ತವರ ತಾ ಹೊಕ್ಕು
ಕೆಕ್ಕರಿಸಿ ನೋಡುವಂತಿರಿಸಿ
ನಂಬಿಕೆಯನೇ ಬೆಪ್ಪಾಗಿಸಿ
ದೂರೀಕರಿಸಿದವರ ಒಳಸರಿದು
ಪಾಪದವನ ಪರಕೀಯ ನೆಂದೆನಿಸಿ
ಸಭೆಯಲಿ ಸಭ್ಯತನವನು ಮೆರೆವ
ನಾಜೋಕೇ ... ನೀ .. ಜೋಕೇ ... !
ಬಣ್ಣ ಬಯಲಾಗಿದೀತು ಒಮ್ಮೆ
ಗೋಸುಂಬೆ ಎಂದರಿವ
ಸಮಯವೂ ದೂರವಿಲ್ಲ.
ಇಲ್ಲಾ ...,ಬಣ್ಣ ಬಯಲಾಗಿತ್ತು ಒಮ್ಮೆ ,
ಗೋಸುಂಬೆ ಎಂಬುದೂ
ವೇದ್ಯವಾಗಿತ್ತಾದರೂ
ಸಾಮ್ರಾಜ್ಯ ಸ್ತಾಪಿಸಿಯಾಗಿದೆಯಲ್ಲ ,
ಸಾಮ್ರಾಟನ ಎದುರು
ಸಣ್ಣವರಾಗುವ ಬದಲು
ಗೆದ್ದೆತ್ತಿನ ಬಾಲ ಹಿಡಿದೆತ್ತಿ,
ಬಣ್ಣ ಪರದೆ ಇರದೇ ಮೇರುನಟರಾಗಿ
ಮೆರೆದಾಡುವರು ಕೂಟದಲಿ
ಗೂಬೆಗಳ ಹೊತ್ತವರು ,ಸ್ವಂತಿಕೆ ಸತ್ತವರು
ಗೋಸುಂಬೆಗೇ ಸಿಂಬಿಯಾದವರು
May 7, 2015
ನಿನ್ನನೀ.. ಗೆಲ್ಲು..!!!
ಎಲ್ಲವನು ಬಲ್ಲವನು
ಎಂದೆಣಿಸಿ ಬೀಗುತ
ತಾಮಸ ಗುಣಗಳ
ಗೆಲ್ಲುವಲಿ ಸೋಲುತ
ಬಿದ್ದರೂ ಮೀಸೆ
ಮಣ್ಣಾಗದ ಪರಿ
ಪರಿಹಾಸ್ಯಕೆ ದಾರಿ
ಮೊದಲು ಹಿಡಿ
ನಿನ್ನನೀ ಗೆಲ್ಲುವ ಗುರಿ
ನರ..ನರಿಯಾದಾಗ
ಮರಹತ್ತಿಸಿ ಬುಡ ಕತ್ತರಿಸಿ
ಕಾಣದಂತಿದ್ದರೂ
ಬಿದ್ದಲ್ಲೇ ಬೇರ್ಬಿಟ್ಟು
ಚಿಗುರೊಡೆದು ನಗುವಾಗ
ಕಡಿದುಬಿದ್ದ ಕೊಂಬೆ
ಕೊನರಿ ಎದ್ದು ಬೆಳೆವಾಗ
ಪೊಳ್ಳು ಭರವಸೆಯ ಮೂರ್ಖ
ನರಿಯಲ್ಲದೆ ನರನೇ..??
ಎಲ್ಲವನು ಬಲ್ಲವನು
ಎಂದೆಣಿಸಿ ಬೀಗುತ
ತಾಮಸ ಗುಣಗಳ
ಗೆಲ್ಲುವಲಿ ಸೋಲುತ
ಬಿದ್ದರೂ ಮೀಸೆ
ಮಣ್ಣಾಗದ ಪರಿ
ಪರಿಹಾಸ್ಯಕೆ ದಾರಿ
ಮೊದಲು ಹಿಡಿ
ನಿನ್ನನೀ ಗೆಲ್ಲುವ ಗುರಿ
ನರ..ನರಿಯಾದಾಗ
ಮರಹತ್ತಿಸಿ ಬುಡ ಕತ್ತರಿಸಿ
ಕಾಣದಂತಿದ್ದರೂ
ಬಿದ್ದಲ್ಲೇ ಬೇರ್ಬಿಟ್ಟು
ಚಿಗುರೊಡೆದು ನಗುವಾಗ
ಕಡಿದುಬಿದ್ದ ಕೊಂಬೆ
ಕೊನರಿ ಎದ್ದು ಬೆಳೆವಾಗ
ಪೊಳ್ಳು ಭರವಸೆಯ ಮೂರ್ಖ
ನರಿಯಲ್ಲದೆ ನರನೇ..??
May 4, 2015
ನೀನೊಂದು ನಗುವ ಹೂವಾದೆಯಲ್ಲಾ
ಓ ಹೂವೇ ನೀನೊಂದು ಅಂದದ ಹೂ
ಅಂತರಂಗದಲಡಗಿದೆ
ಯಾರರಿಯದ ನೋವು
ಕೊಂಬೆರೆಂಬೆ ಕಣಕಣವು ಮುಳ್ಳು
ಅದಲೆಕ್ಕಿಸದೆ ನೀನಿಂದು ಅರಳಿ
ಘಮಘಮಿಸುತಿಹೇ ಪರಿಮಳ ಬೀರುತಿಹೆ
ಪ್ರಕೃತಿಯ ಸೊಬಗ ಇಮ್ಮಡಿಸುತಿಹೆ
ನೋವ ಮರೆತು ಅರಳಿ ನಗುತಲಿರುವೆ,
ನಿನ್ನ ಹಿರಿಮೆಗೆ ಹಿಗ್ಗುವರಿಲ್ಲ,
ಇದ್ದುದೊಂದು ಮನ ಇಂದಿಲ್ಲ,
ಮೋಡದಲಿ ಮಿನುಗುವ ತಾರೆಯಗಿದೆಯಲ್ಲ,
ಆ ಹಿಗ್ಗಿನ ನೆನಪೇ ಒಂದುತ್ತೇಜಕವೆಲ್ಲ
ಒಂದೊಂದೇಳ್ಗೆಯ ಹಿಂದೆಯೂ
ಆ ಹಿಗ್ಗಿನ ನೆನಪೇ ಕಂಬನಿಯ
ಹೊಳೆಯಾಗಿ ಹರಿಯುತಿದೆಯಲ್ಲ
ಮೈ ತುಂಬಿ ನೋವು ಮೊಗತುಂಬಿ ನಗುವು
ನಿನ್ನಳಲು ನಿನ್ನನ್ನೇ ಬಾಡಿಸಿ
ಬಸವಳಿಸುತಿದೆಯಲ್ಲ ಅದರಲೇ
ನಗುನಗುತಾ ಚಿತ್ತಾರ ಹಾಡಿರುವೆ,
ಮುದ ನೀಡುತಿರುವೆ.
ಬಾಡುತಿಹ ಹೂಗೆ ಮಳೆ ಹನಿದಂತೆ
ತಾರೆ ಮಿನುಗಿ ಮರೆಯಾಗುತಿದೆ
ಆ ನೋವಲೇ ನಗುನಗುತಾ
ಅಂತ್ಯವಾಹ್ವಾನಿಸುತಿರುವೆ,
ಶಿವನ ಪಾದದಡಿ ಸೇರಲು ಅನುವಾಗುತಿರುವೆ
ಭವ್ಯ ಭವಿತವ್ಯಕ್ಕೂ ಮೊಗಮಾಡಿ ನಿಂತರೂ
ಭೂತದಂದದಿ ಕಾಡಿ ಇರಿಯುತಿದೆಯಲ್ಲ
ನೆರಳು ಬಿಸಿಲಾಟದಲಿ ನಲುಗುತಿಹ ಹೂವೇ
ನೋಡಲು ನೀನೊಂದು ನಗುವ ಹೂವಾದೆಯಲ್ಲಾ
Subscribe to:
Posts (Atom)