May 14, 2011

                      ಬುದ್ಧ -ಬದುಕು
        ಒಮ್ಮೊಮ್ಮೆ ಯಾವುದಾದರು ಕಾವ್ಯ ,ಕತೆ, ಕವನ ಲೇಖನ ಇವುಗಳನ್ನು ಓದಿ ಅವುಗಳ ಬಗ್ಗೆ
ಅಚ್ಚರಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಸಿಗುವಆನಂದ ಪಟ್ಟಶ್ರಮಕ್ಕೆಸಿಕ್ಕಪ್ರತಿಫಲ,ಧನ್ಯತೆ,ಸಾರ್ಥಕತೆ
ಅಪರಿಮಿತ,ಅನನ್ಯ. ಹೀಗಿದ್ದಾಗ ಬದುಕೊಂದು ಮೌಲ್ಯಯುತ ಕಾವ್ಯವಾಗುಳಿಯುವುದು ಎಂತಹ
ಅಪ್ಯಾಯಮಾನವಲ್ಲವೇ...!!!! ಆದರೆ ಯಾವುದೇ ಪ್ರಕಾರವನ್ನು ಮನಮುಟ್ಟುವಂತೆ ನಿರೂಪಿಸುವ
ಶೈಲಿ, ಕಲೆ ಎಲ್ಲರಿಗೂ ಸಿದ್ದಿಸದು.ಅದು ಅಷ್ಟು ಸುಲಭ ಸಾಧ್ಯವೂ ಅಲ್ಲ.ಹಾಗೆಯೇ
ಅದು ಅನುಭವ, ಅನಿಸಿಕೆ, ಕಲ್ಪನೇ ಯಾವುದೇ ಆದರು ಅದನ್ನು ಮುಕ್ತವಾಗಿ ಪ್ರಸ್ತುತಪಡಿಸಿದ
ಯಾವುದೇ ಹಾಸ್ಯ, ವಿಡಂಬನೆಯ, ಸಂದೇಶವುಳ್ಳ ಕೃತಿಗಳು ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸಿ,
ಮತ್ತು ಮೆಚ್ಚುಗೆ ಪಡೆದ ಅರ್ಥಪೂರ್ಣಲೇಖನವೊಂದು ನಮ್ಮಿಂದ ಹೊರಹೊಮ್ಮಿದಾಗ ನಮ್ಮಶ್ರಮಸಾರ್ಥಕವೆನಿಸುವುದು.ಅತೀವ ಸಂತೋಷವಾಗುವುದು ಎಲ್ಲರಿಗೂ ಸಹಜ.
ಅದು ಕೆಲವೇ ಸಹೃದಯರು ಅರ್ಥೈಸಿ ಅನಂದಿಸಿದರೂ ಸಹ. ಅಂತಹ ಸಂದರ್ಭದಲ್ಲಿ ನನಗನಿಸಿದ್ದು "ಬದುಕೊಂದು ಮೌಲ್ಯಯುತ ಕಾವ್ಯವಾಗುಳಿಯುವುದು ಎಂತಹಾ ಅಪ್ಯಾಯಮಾನ" "ಎನಿಸಿ,"ಬದುಕು"ಎಂಬುದು ಅದೆಷ್ಟು ಹರವಾದದ್ದು ಎನಿಸಿತು.ಹಾಗೆ ಅದರ ಬಗ್ಗೆ ಇನ್ನಷ್ಟು
ಅರಿಯಬೇಕೆನ್ನಿಸಿ ಈ ಲೇಖನ ಮುಂದುವರೆಸಿದೆ.
               
        ಬದುಕು -ಎಂದರೆ ಜೀವ,ಜೀವಂತಿಕೆ,ಜೀವನವನ್ನು ಅರ್ಥೈಸುವ ಶಬ್ದ .ಆದರೆ ಅದು ಕೇವಲ
ಶಭ್ದ ಮಾತ್ರವಲ್ಲ,ಪ್ರತಿ ಜೀವಿಯ ಜೀವಿತದಲ್ಲೂ ಮೌಲ್ಯ- ಅಪಮೌಲ್ಯಗಳನ್ನೂ ತುಲನೆ ಮಾಡುತ್ತಾ
ಬದುಕು ಜಟಕಾ ಬಂಡಿಯಹಾಗೆ ಸಾಗುತ್ತಿರುತ್ತದೆ.ಕೆಲವು ರೈಲಿನಂತೆ.ಮತ್ತೇ ಕೆಲವು
ಜೋಡೆತ್ತಿನ ಬಂಡಿಯಂತೆ ಎತ್ತೆತ್ತಲೋ ಓಡದಂತೆ ಮೂಗುದಾರ ಹಿಡಿದು ಜಗ್ಗಿ ಸರಿದಾರಿಯಲಿ
ನಡೆಸುವ ಮಾಲಿಕನಂತೆ.ಮತ್ತೇ ಕೆಲವು ಸಂತೆಯಲ್ಲಿ ನುಗ್ಗಿ, ಸಿಕ್ಕಿದ್ದಕ್ಕೆ ಮೂತಿ ಹಾಕಲು,
ಅಟ್ಟಲುಹೋದಾಗ ಗಾಬರಿಗೊಂಡು ಎತ್ತೆತ್ತಲೋನುಗ್ಗಿ ತಾನೂ ಗಾಬರಿಗೊಂಡು,
ಇತರರನ್ನು ಗಾಬರಿಗೊಳಿಸಿ ಗೊಂದಲಕ್ಕೀಡುಮಾಡಿ ಪೇಚಿಗೆ ಸಿಕ್ಕಿಸುವಂತೆ ಮಾಡಿ
ಬದುಕು ಸಾಗುತ್ತಿರುತ್ತದೆ.ಒಬ್ಬೊಬ್ಬರದು ಒಂದೊಂದು ತೆರನಾದ ಹೋರಾಟದ ಬದುಕು.
ಬದುಕು ಎಂಬುದು "ನೀನು ಬದುಕು,ಇತರರನ್ನು ಬದುಕಲು ಬಿಡು" ಎಂಬ ಮೂಲ
ಮಂತ್ರದೊಂದಿಗೆ ಸಮ್ಮಿಲಿತಗೊಂಡಿದೆ. ಹಗಲೆಲ್ಲ ಹುಲ್ಲು ,ಕಸಕಡ್ಡಿ ತಿಂದು ಮಾಲಿಕನಿಗೆ
ಅಮೃತವನ್ನು ನೀಡಿ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ ಕಾಮಧೇನುವಿನಂತೆ
ಹಲವರ ಬದುಕು."ಬದುಕು ಜಟಕಾ ಬಂಡಿ,ವಿಧಿ ಅದರ ಸಾಹೆಬಾ"ಆ ವಿಧಿ ನಡೆಸಿದಂತಾಗಲಿ
ಎಂದು ಕೈ ಚೆಲ್ಲಿಕೂರುವವರು ಹಲವರಾದರೆ,ಗೆಟ್ ಫ್ರೀ ಎನ್ನುವುದು ಕೆಲವರ ಬದುಕು.
    
    ಡಾ.ಎಸ್. ಚಂದ್ರಕಿರಣ್ ರವರ,"ಪ್ರಾಚೀನ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು"ಬದುಕಿನ
ಕುರಿತು ಬುದ್ಧ ಹೇಳಿರುವ ವಿಚಾರ ಸಾಮಾನ್ಯರಿಗೂ ಸರಳವಾಗಿ ಮನದಾಳಕ್ಕಿಳಿಯುವುದು.
ಭೋಗಲೋಲುಪತೆ,ದೇಹ ದಂಡನೆಗಳ ನಡುವಣ ಸುವರ್ಣ ಮಧ್ಯಮ ಪಥಕ್ಕೆ ಪ್ರಾಶಸ್ತ್ಯ ನೀಡಿದ
ಬುದ್ಧ ನೈತಿಕತೆಯ ಬದುಕಿಗೆ ಪ್ರಾಧಾನ್ಯತೆ ಕೊಡುತ್ತಾನೆ.ಪ್ರತಿ ಮಾನವತ್ವವೂ ವಿಶ್ವಾತ್ಮದ ಒಂದು
ಭಾಗ ಎಂದು ಹೇಳುತ್ತಾನೆ.ವ್ಯಕ್ತಿ ತನ್ನನ್ನು ತಾನು ಗೆಲ್ಲುವುದೇ ದೊಡ್ಡ ವಿಜಯ.ಸಂಯಮವೇ ದೊಡ್ಡ
ಗುಣವೆಂದು ಸಾರಿದ."ನವೈರಂ ವೈರೆಣ ಶಾಮ್ಯತಿ,ಅವೈರೆಣ ಶಾಮ್ಯತಿ" ದ್ವೇಷದಿಂದ
ದ್ವೇಷ ಶಮನವಾಗದು.ಪ್ರೀತಿಯಿಂದ ಶಮನವಾಗುತ್ತದೆ.ಕೋಪವನ್ನು ದಯೆಯಿಂದ,ಕೆಡುಕನ್ನು
ಒಳಿತಿನಿಂದ ಗೆಲ್ಲಬೇಕು.ಹೀಗೆಬದುಕಿನ ಮಾರ್ಗದರ್ಶಕ ನಿಲುವುಗಳನ್ನುಪ್ರತಿಪಾದಿಸುತ್ತಾನೆ.
ಹಲವಾರು ಕ್ಷೇತ್ರದಲ್ಲಿ ಹಲವಾರು ಬಗೆಯಲ್ಲಿ ಸಾಧಿಸಿ ಸಾರ್ಥಕ ಬದುಕನ್ನಾಗಿಸಿಕೊಳ್ಳುವ
ಹಂಬಲ ಹಲವರಿಗೆ. ಬದುಕಿಗೆ ಬದ್ಧನಾದ ಬುದ್ಧನ,ಬದುಕಿನ ಬಗೆಗಿನ ವಿಚಾರಧಾರೆಯಲ್ಲಿ ವ್ಯಕ್ತಿ ತಾನೇ ತನ್ನ ಪರಿಶ್ರಮದಿಂದ ದುಡಿದು ಬದುಕಬೇಕು "ಧಮ್ಮ,ದೀಪೋ,ವಿಹರಥ.ಧಮ್ಮ ಸರಣ ಅನನ್ನಸರಣ"ಅಂದರೆ "
"ನಿನಗೆ ನೀನೇ ದಿಪವಾಗು.ಬೆಳಕಾಗು ಅನ್ಯರನ್ನು ಆಶ್ರಾಯಿಸಬೇಡ."
ಹಾಗೆ "ನಾನು ಮಾರ್ಗಧಾತನೆ ಹೊರತು ಮುಕ್ತಿಧಾತನಲ್ಲ"ನಿನ್ನ ಸುಖಕ್ಕೆ-ನಿನ್ನ ದುಃಖಕ್ಕೆ,
ನಿನ್ನ ಮಂಗಳಕ್ಕೆ ,ನಿನ್ನ ಅಮಂಗಳಕ್ಕೆನೀನೇ ಜವಾಬ್ದಾರ"ನೆಂದ.ಅದಕ್ಕಾಗಿ ಬದುಕಿನ ಸತ್ಯವನ್ನು
ಕುರಿತು ಗಾಢವಾಗಿ ವಿಚಾರಮಾಡಬೇಕು.ಈ ವಿಚಾರಗಳಿಂದಲೇ ಮನುಷ್ಯ ಸಹಜ ಹಾಗೂ
ಸ್ವತಂತ್ರನಾಗುತ್ತಾನೆ.ವಿಚಾರಗಳ ಮೂಲಕ ಬದುಕನ್ನು ಸಹ್ಯಗೊಳಿಸಿಕೊಳ್ಳುವುದೇ ಧರ್ಮ.ಎಲ್ಲಿ
ದಾರಿಗಳಿಲ್ಲವೋ ಅಲ್ಲಿ ದಾರಿ ಮಾಡಿಕೊಂಡು ನಮಗೆ ನಾವೇ ದಾರಿದೀಪವಾಗುವುದು ಬದುಕು.
ದೇವರು,ಧರ್ಮ,ಶಾಸ್ತ್ರ ಗುರು ಇತ್ಯಾದಿಗಳ ನೆರವಿಲ್ಲದೆ ಮನುಷ್ಯ ತನ್ನ ಬಿಡುಗಡೆಯನ್ನು,ತನ್ನ
ದಾರಿಯನ್ನು ತಾನೇ ಕಂಡುಕೊಳ್ಳಬೇಕು. ಎಂದು ಜಗತ್ತಿನ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ
ಹೇಳಿದವನು ಬುದ್ಧನೊಬ್ಬನೇ. ಬದುಕು ಪ್ರೇಮದ ದಾರಿದೀಪವಾಗಿ ಮಾನವಲೋಕದ ಕಷ್ಟ
ಕಾರ್ಪಣ್ಯ ಆತಂಕ ದುಗುಡವನ್ನು ದಾಟಿ ಕ್ಷುದ್ರವಾದುದೆಲ್ಲವನ್ನು ತಿರಸ್ಕರಿಸಿ,ಗಟ್ಟಿಯಾದ
ಮಾನವೀಯ ವೈಚಾರಿಕತೆಯ ನೆಲೆಗಟ್ಟಿನಮೇಲೆ ತನ್ನ ಸಮಾಜೋದ್ದಾರ ಧಾರ್ಮಿಕ
ನಿಲುವುಗಳನ್ನು ರೂಪಿಸಿದ ಬುದ್ದ ಹೇಳಿದ್ದು ,ಉದಾತ್ತ ಸತ್ಯಗಳನ್ನು ಕುರಿತು.
ಧರ್ಮವೆಂದರೆ ವಾಸ್ತವಿಕ ಸತ್ಯದಿಂದ ಬದುಕನ್ನು ಸಹ್ಯವಾಗಿ ರೂಪಿಸಿಕೊಳ್ಳುವ ಜೀವನ ಕಲೆ.
ಹೀಗಾಗಿ ಬುದ್ಧನ ಭೋಧನೆಗಳನ್ನು ಧರ್ಮ ,ತತ್ವ ಎಂದು ತಿಳಿಯುವುದಕ್ಕಿಂತ,ಮೈತ್ರಿ ಕರುಣೆ ,
ಮುದಿತಾ ,ಸಮತಾ ಎಂಬ ನಾಲ್ಕು ಗುಣಗಳನ್ನು ವಿಶ್ವ ಮಾನವರಾಗಿ ಜೀವಿಸಬಹುದಾದ ಬೆಳಕಿನ
ದಾರಿ ಬದುಕು.ಬುದ್ದನ ಇಂತಹ ಆದರ್ಶ ಆಶಯಗಳಿಂದ ಆಕರ್ಷಿತನಾದ ಐನ್ ಸ್ಟೀನ್ ಪ್ರಕಾರ
"ವಿಶ್ವ ಧರ್ಮವಾಗುವ ಯೋಗ್ಯತೆ ಇರುವುದು ಬೌದ್ಧ ಧರ್ಮಕ್ಕೆ ಮಾತ್ರವೇ" ಎಂದಿದ್ದಾನೆ.
ಮಹಾಕವಿ ಕುವೆಂಪುರವರು ಶತಮಾನದ ಕಾದಂಬರಿ ಕಾನೂರು ಹೆಗ್ಗಡತಿಯಲ್ಲಿ ಹೂವಯ್ಯನನ್ನು
ಬೌದ್ಧ ನಾಗಿ ಪರಿವರ್ತಿಸುತ್ತಾರೆ.ಸ್ವತಃ ಕುವೆಂಪುರವರೇ ಕೊನೆಗಾಲದಲ್ಲಿ ಬುದ್ಧನ ಅನುಯಾಯಿಯಾಗಿದ್ದರು.ಇಂತಹಾ ಯಾವುದೇ ಧರ್ಮದ ಕಟ್ಟುಪಾಡುಗಳು ಇಲ್ಲದ ಬುದ್ಧನ
ಬೋಧನೆಯಿಂದ ಬಾಬಾಸಾಹೇಬರಂತಹಾ ಸಮನ್ವಯಕಾರರು ಆಕರ್ಶಿತರಾದರೆಂದರೆ
ಅಚ್ಚರಿಯಿಲ್ಲ.
ಬುದ್ಧ ನೆಂದರೆ ಜಾಗೃತನಾದವನು. ನೈಸರ್ಗಿಕ ಸತ್ಯದ ಪ್ರತಿಪಾದಕನಾದ ಬುದ್ಧ ಸನ್ನಡತೆ,
ಸಚ್ಚಾರಿತ್ರ್ಯ,ಸದ್ಗುಣಗಳನ್ನೂ ತನ್ನ ಧರ್ಮದ ತಳಪಾಯವೆಂದು ತಿಳಿದು ಆಚರಿಸಿದವನು.
ಹಸಿವನ್ನು ಮಹಾರೋಗವೆಂದು,ದಾರಿದ್ರ್ಯವನ್ನು ಮಹಾ ದುಃಖವೆಂದು,ಜೀವನಕ್ಕೆ ಅಗತ್ಯವಾದುದನ್ನು ಗಳಿಸಲೇಬೇಕು.ಆದರೆ ಮಿತಿಮೀರಿ ಗಳಿಸಬಾರದು ಎಂಬುದು
ಆತನ ನಿಯಮ."ಎಂದೂ ಪುನರ್ನವೀಕರಣ ಗೊಳ್ಳದ ನೈಸರ್ಗಿಕ ಸಂಪತ್ತು ವೃಥಾ ಪೋಲಾಗದಂತೆ ಎಚ್ಚರವಹಿಸಿ ಮಾಡುವ ಸಾಮಾಜಿಕ ಉತ್ಪಾದನೆ ಮತ್ತು ಸಾಮುದಾಯಿಕ
ಬಳಕೆಯನ್ನು ಪ್ರತಿಪಾದಿಸಿದ.ಜನರ ಅಗತ್ಯಕ್ಕಾಗಿ ಎಲ್ಲಾ ಶಾಸ್ತ್ರ ಗಳು ,ಎಲ್ಲಾ ತಿಳುವಳಿಕೆಗಳು
ಅತ್ಯಗತ್ಯ.ಇದು ಅಭಿವೃದ್ಧಿಯ ಮೊದಲ ಸತ್ಯ.ನಿಜ ಲೋಕದಲ್ಲಿ ಸಂಕಟ ಇರಬಾರದು.ಹಾಗೂ ಅನಗತ್ಯ ಭೋಗವು ಇರಬಾರದು.ಇವೆರಡರ ಸಂತೃಪ್ತಿ ಸ್ಥಿತಿಯನ್ನು ಅಭಿವೃದ್ಧಿ ಎಂದು ಸಮರ್ಥಿಸಿ. ಅಪರಿಮಿತ
ಉತ್ಪಾದನೆ ಸಮಾಜವನ್ನು ಆಕ್ರಮಣ ಶೀಲವನ್ನಾಗಿಸುತ್ತದೆ.ಸಮುದಾಯ ಅಸಮಾನತೆಯಿಂದ ನರಳುತ್ತದೆ.
ಹಾಗಾಗಿ ಸಮಾಜವನ್ನಾಧರಿಸಿದ ಅವಶ್ಯಕತೆ ಸೂಕ್ತವಾದದ್ದು.ಎನ್ನುತ್ತಾನೆ.
 
ಇಂತಹಾ ಮಹಾತ್ಮರ ಆದರ್ಶದ ಬೆಳಕಿನಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವುದು ನಮ್ಮ ನಮ್ಮ ಕೈಲ್ಲೇ ಇದೆ.ಶ್ರದ್ದೆ, ಶ್ರಮ,ಆಸಕ್ತಿ,ಅವಶ್ಯಕತೆ,ಮಿತಿ ಎಂಬುದು ನಮ್ಮ ಅರಿವಿನ ಅರಿವಿಗೆ ಶರಣಾದಾಗ ಬದುಕು ಅದೆಷ್ಟು ಸುಂದರವಲ್ಲವೇ...!!!!!!!!
--

May 9, 2011

ತಾಯಂದಿರ ದಿನದ ಶುಭಾಷೆಯಗಳು....!!!!!


ಹಾಯ್ ಮೊಮ್,
ತಾಯಂದಿರ ದಿನದ ಶುಭಾಷೆಯಗಳು....!!!!!
Posted by Picasa

May 5, 2011

ಬೆಳ್ಳಿ ಬಟ್ಟಲೊಳು  ಮಧುರಸ


ಅಡುಗೆಗಾಗಿ ಒಡೆದ ಕಾಯಿ,
ಬೆಳ್ಳಿ ಬಟ್ಟಲೊಳಗಿನ
ಕಂಪಾದ ತಿಳಿರಸ 

ಆಸೆಯಲಿ ತುಸು ಸವಿಯಲು 
ಆಹಾ......ಎಂಥಾ ....ಮಧುರ ...!!!!!!!!
ತಕ್ಷಣವೇ....ನೆನಪಾದದ್ದು.....

ಒಲವಿನ ಮಧುವಿಗೆ
ಸವಿಯಾದುದನೆಲ್ಲಾ ಸವಿಸಿ

ಸಂಭ್ರಮಿಸುವ ಹಂಬಲಕೆ
ಬೆಂಬಲಿಸುವ ಮನದ 
ಕರೆಯು, ನಿನಗೆ  ಸವಿಸೆ....,
ಅದನು ಸವಿದು.....
ಅಭಿಮಾನದಿ.......

"ನೀ..... ಶಬರಿ.....!!"

ಎಂದುಲಿದು........, 

ನೀ......ರಾಮನಾದೆ...!! 

ವೈದೇಹಿಗೆ ಮುನ್ನ,
ಬಾಯ್ಬಿಟ್ಟ
ಮಾತೆಯ ಬಾಹುವಿನೊಳಗೆ...
ನೀ..ಸೇರಿ..... ಹೋದೇ........!!!!!!!

ಆರಾಧನೆಗೆ ಅಣಿಯಾದ 
ವೆಂಕಟೇಶ್ವರನಾದೇ....!! 
ನೆನಪಿನ ಅಭಿಷೇಕಕೆ....ನೀ ...   
ನಾರಿಕೇಳವಾದೆ.......!!!!!!
++++++++++++++++   

Apr 20, 2011

ಉಳಿಯಬೇಕು ಬದುಕು ಎಲ್ಲರೆದೆಗಳಲಿ


ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಬಾಯಾರಿ ಬಳಲಿದಾಗ
ನೀರಡಿಕೆಯನಳಿಸುವ ಜೀವಜಲದಂತೆ
ಭೂಮಿಯನು ತಣಿಸುವ ಕೆರೆ ತೊರೆಯಂತೆ

ಉಳಿಯಬೇಕು ಎಲ್ಲರೆದೆಗಳಲಿ
ಸವಿಯಾಗಿ ತಂಪೆರೆವ ತನಿವಣ್ಣಿನಂತೆ 
ಫಲವನೀವ ಪಾದಪಗಳಂತೆ  
ಬೇಧವೆಣಿಸದೆ ನೆರಳನೀವ ವಟ ವೃಕ್ಷದಂತೆ

ಉಳಿಯಬೇಕು ಬದುಕು  ಎಲ್ಲರೆದೆಗಳಲಿ
ತಲೆಮಾರನು ಸಲಹುವ ನಾರಿಕೇಳ 
ಕಲ್ಪವೃಕ್ಷದಂತೆ, ಬೇಧವಿರದೇ ಹಬ್ಬಿ 
ಪಸರಿಸುವ  ಹೂಗಳ ಪರಿಮಳದಂತೆ.

ಉಳಿಯಬೇಕು ಬದುಕು ಎಲ್ಲರೆದೆಗಳಲಿ 
ಇಂಪಾದ  ಕೋಗಿಲೆಯ ಮಧುರಗಾನದಂತೆ
ಹಕ್ಕಿಗಳ ಚಿಲಿಪಿಲಿಯ ಕಲರವದಂತೆ
ಆಹ್ಲಾದವನಿವ  ಪ್ರಕೃತಿಯ 
ಸೌಂದರ್ಯದ ಹಚ್ಚ ಹಸುರಿನಂತೆ  

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜುಳುಜುಳು ಹರಿವ  ಜಲದ ಕಲರವದಂತೆ, 
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಪುರಂದರಕನಕ  ದಾಸವರೇಣ್ಯರ ಸಾಮಾಜಿಕ 
ಕಳಕಳಿಯ ಸುಮಧುರ ಸಂಕೀರ್ತನದಂತೆ 

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮಾನವತೆಯ ಮೆರೆದ ಶಂಕರ
ರಾಮಾನುಜ ಮಧ್ವ ಶಿವಶರಣ ಅಂಬೇಡ್ಕರ್ರಂತೆ,  
ವೀರ ಯೋಧರ ನಿಸ್ವಾರ್ಥದಂತೆ

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮುದ್ದುಕಂದನ ಮುಗ್ಧ ನಗುವಿನಂತೆ
ಅಚ್ಚಳಿಯದ ಅಂದದ  ಹೂನಗುವಿನಂತೆ
ಹಸುಗೂಸಿನ ನಸುನಗುವಂತೆ

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜಗವಿರುವರೆಗೆ ಅರಿವರಳಿಸುವ 
ಕಾವ್ಯೋತ್ಸವದ ಮೂರ್ತಿಗಳಾಗಿ ಮೆರೆಯುತ್ತಿರುವ
ಕುವೆಂಪು ಬೇಂದ್ರೆ ಗುಂಡಪ್ಪ ಕಾರಂತರಂತೆ 

ಉಳಿಯಬೇಕು ಬದುಕು ಎಲ್ಲರೆಗಳಲಿ 
ವಿಕಲಚೇತನರ ಆತ್ಮ ಚೈತನ್ಯದಂತೆ 
ನಲಿಯಬೇಕು ನೆನಪು ದೀನದಲಿತರ ,
ವಿಕಲ ಚೇತನರ ಬದುಕಿನಲಿ 

ಅಳಿಯಬೇಕು ಎಲ್ಲರೆದೆಗಳಲಿ 
ದ್ವೇಷ ಅಸೂಯೆ ಅಹಂ 
*************  

Apr 3, 2011

                 ಸಮಸ್ತ ಜನತೆಗೂ
 
*ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು *
 
ಬೇವು ಬೆಲ್ಲದ ಸಮ್ಮಿಶ್ರಣವನು 
ಸಂತಸದಿ ಸವಿವಂತೆ  
ಸುಖವೇ ಇರಲಿ
ದುಃಖವೇ ಬರಲಿ
ಸಮನಾಗಿ ಸ್ವೀಕರಿಸುವ
ಶಕ್ತಿಯನು ನೀಡಲಿ
 
******************
 
ಸೂರ್ಯನಮಸ್ಕಾರದ  ಮಹತ್ವ   
 
ಪ್ರ್ರಸ್ತುತ ಜನಜೀವನ ಯಾಂತ್ರಿಕತೆಯ ಒತ್ತಡದಿಂದ ಜರ್ಜರಿತವಾಗುತ್ತಿದೆ.ಮಾನಸಿಕ ಹಾಗು
ದೈಹಿಕ ಆರೋಗ್ಯ ಸ್ಥಿತಿಯತ್ತ ಗಮನ ಹರಿಸುವುದು  ಪ್ರತಿಯೊಬ್ಬರಿಗೂ  ಅತ್ಯವಶ್ಯಕವಾಗಿದೆ.
ಇಂತಹ ಸಂದರ್ಭದಲ್ಲಿ  ಸ್ವಲ್ಪ ಸಮಯವಾದರೂ ಯೋಗ, ವ್ಯಾಮದಂತಹ ಒಳ್ಳೆಯ  
ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವುದು ಆರೋಗ್ಯಕರವಾದದ್ದು.
ಅಂತಹ ಆಸನಗಳಲ್ಲಿ ಸೂರ್ಯ ನಮಸ್ಕಾರ ಬಹಳ ಪ್ರಯೋಜನಕಾರಿ.
ಸೂರ್ಯನಮಸ್ಕಾರವು ವಿವಿಧ ಆಸನಗಳನ್ನು ಮತ್ತು ಪ್ರಾಣಯಾಮವನ್ನು ಒಳಗೊಂಡಿರುವ ಒಂದು ಸಮ್ಮಿಶ್ರಣ.ಇದು ಶಿಥಿಲೀಕರಣ ವ್ಯಾಯಾಮ ಮತ್ತು ಆಸನಗಳ  
ನಡುವಿನ ಸೇತುವಾಗಿದೆ.ಇದರ ಅಭ್ಯಾಸದಿಂದ ದೇಹದಲ್ಲಿನ ಗಡಸುತನ ಮೃದುತ್ವವನ್ನು ತಳೆಯುತ್ತದೆ. ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ
ಸೂರ್ಯನಿಗೆ ಅಭಿಮುಕವಾಗಿ ನಿಂತು ಸೂರ್ಯನಮಸ್ಕಾರ ಮಾಡುವುದರಿಂದ                   ಆಸನಗಳಿಗೆ ಬೇಕಾದ ಕೋಮಲ ಶರೀರವು ಪ್ರಾಪ್ತವಾಗುವುದು.ಆ ಸಮಯದಲ್ಲಿ
ಹೇಳಿಕೊಳ್ಳಬೇಕಾದ ಮಂತ್ರವು,ಮಂತ್ರದ ಸಾರವು ಹೀಗಿದೆ.....
 
 
"ಹಿರಣ್ಮಯೇನ ಪಾತ್ರೇಣ  ಸತ್ಯಸ್ಯಾ ಪಿಹಿತಂ  ಮುಖಂ      
 ತತ್  ತ್ವಂ  ಪೂಷನ್   ,ಆಪಾವೃಣು ಸತ್ಯಧರ್ಮಾಯ  ದ್ರುಷ್ಟಯೇ"                                                                                                                                           
"ಪಾತ್ರೆಯನ್ನು ಮುಚ್ಚಳದಿಂದ ಮುಚ್ಚುವಂತೆ ,ನಿನ್ನ ಚಿನ್ಮಯವಾದ ಆವರಣವು
ಸತ್ಯದ ಬಾಗಿಲನ್ನು ಮುಚ್ಚಿದೆ,ಓ ಸೂರ್ಯ ದೇವಾ,ಜ್ಞಾನ ದರ್ಶನಕ್ಕಾಗಿ  ಕೃಪೆ ಮಾಡಿ
ಆ ಬಾಗಿಲನ್ನು ಸರಿಸು"ಎಂಬುದು ಇದರ ಸಾರವಾಗಿದೆ. 
 
 
  ಸೂರ್ಯ ನಮಸ್ಕಾರದ ಹಂತಗಳಲ್ಲಿ ಪಠಿಸ ಬೇಕಾದ ಶ್ಲೋಕಗಳು.........
 
೧.     ಓಂ,ಹ್ರಾಂ,ಮಿತ್ರಾಯ  ನಮಃ  
    
ಎಲ್ಲ ,ಜೀವಿಗಳ ಸ್ನೇಹಿತನಿಗೆ ನಮಸ್ಕಾರಗಳು (ಅನಾಹತ)
 
೨.     ಓಂ,ಹ್ರೀಮ್,ರವಯೇ ನಮಃ
    
ಹೊಳೆಯುತ್ತಿರುವವನಿಗೆ  ನಮಸ್ಕಾರಗಳು (ವಿಶುದ್ಧಿ)
 
೩.     ಓಂ,ಹ್ರೂಂ,ಸೂರ್ಯಾಯ  ನಮಃ
     
ಚೇತನ ನೀಡುವವನಿಗೆ ನಮಸ್ಕಾರಗಳು (ಸ್ವಾಧಿಷ್ಟಾನ)
 
೪.      ಓಂ,ಹ್ರಯಿಮ್ ಭಾನವೇ  ನಮಃ
    
ಎಲ್ಲವನ್ನು ಪ್ರಕಾಶಿಸುವವನಿಗೆ  ನಮಸ್ಕಾರಗಳು (ಆಜ್ಞಾ)
 
೫.     ಓಂ,ಹ್ರೌಮ್,ಖಗಾಯ ನಮಃ
    
ಆಕಾಶದಲ್ಲಿ ತ್ವರಿತವಾಗಿ ಸಂಚರಿಸುವವನಿಗೆ ನಮಸ್ಕಾರಗಳು(ವಿಶುದ್ಧಿ)
 
೬.      ಓಂ,ಹ್ರ್ಹ,ಪೂಷ್ಣೇ  ನಮಃ
     
ಶಕ್ತಿಯನ್ನು ಕೊಡುವವನಿಗೆ ನಮಸ್ಕಾರಗಳು (ಮಣಿಪುರ)
 
೭.      ಓಂ,ಹ್ರಾಂ,ಹಿರಣ್ಯ ಗರ್ಭಾಯ  ನಮಃ (ಸ್ವಾಧಿಷ್ಟಾನ)
     
ಬಂಗಾರದ ವಿಶ್ವಾತ್ಮನಿಗೆ ನಮಸ್ಕಾರಗಳು
 
8.      ಓಂ,ಹ್ರೀಮ್,ಮರೀಚಯೇ  ನಮಃ
     
ಬೆಳಗಿನ ದೇವತೆಗೆ ನಮಸ್ಕಾರಗಳು (ವಿಶುದ್ಧಿ)
 
೯.     ಓಂ,ಹ್ರೂಂ,ಆದಿತ್ಯಾ  ನಮಃ
     
ಅದಿತಿಯ ಮಗ "ವಿಶ್ವಮಾತೆಯ ಮಗನಿಗೆ ನಮಸ್ಕಾರಗಳು(ಆಜ್ಞಾ) 
 
೧೦.    ಓಂ,ಹ್ರಯಿಮ್,ಸವಿತ್ರೆ  ನಮಃ     
      
ಸೃಷ್ಟಿ ಕರ್ತನಿಗೆ  ನಮಸ್ಕಾರಗಳು (ಸ್ವಾಧಿಷ್ಟಾನ)
 
೧೧.     ಓಂ,ಹ್ರೌಮ್,ಅರ್ಕಾಯ ನಮಃ
      
ಸ್ತುತಿಗೆ ಅರ್ಹತೆ ಪಡೆದವನಿಗೆ ನಮಸ್ಕಾರಗಳು (ವಿಶುದ್ಧಿ)
 
೧೨.     ಓಂ,ಹ್ರ್ಹ್,ಭಾಸ್ಕರಾಯ ನಮಃ          
      
ಜ್ಞಾನದ ಕಡೆಗೆ ಕರೆದೊಯ್ಯುವವನಿಗೆ  ನಮಸ್ಕಾರಗಳು (ಅನಾಹತ)
 
 ಮತ್ತು ಸೂರ್ಯನಮಸ್ಕಾರದಿದಾಗುವ ಪ್ರಯೋಜನಗಳು
  •         ೧.    ಸೂರ್ಯ ನಮಸ್ಕಾರ ಶರೀರಕ್ಕೆ ಸಂಜೀವಿನಿಯಂತೆ.
  • ೨.   ಶರೀರದಲ್ಲಿನ ಪ್ಯಾಂಕ್ರಿಯಾಸ್  ಚುರುಕಾಗಿ ಇನ್ಸುಲಿನ್ ಉತ್ಪತ್ತಿ ಸುಗಮವಾಗಿ
  •        ಮಧುಮೇಹ ರೋಗ ಸುಧಾರಿಸುವುದು.
  • ೩.   ನಾಡಿ ವ್ಯವಸ್ಥೆ ಸಂಪೂರ್ಣ ಆರೋಗ್ಯಕರವಾಗಿ ನರಗಳ ಬಲಹೀನತೆ,ಪಾರ್ಶ್ವವಾಯುವಿನಂತ ಸಮಸ್ಯೆಗಳು ಸುಧಾರಿಸುತ್ತವೆ.
  • ೪.  ಹೃದಯದ ಸ್ನಾಯುಗಳು,ಲಿವರ್ ,ಮೂತ್ರಪಿಂಡಗಳ ಆರೋಗ್ಯ ವೃದ್ಧಿಸುತ್ತದೆ.
  •        ಮತ್ತು ಅದಕ್ಕೆ ಸಂಬಂಧಪಟ್ಟ ಕಾಯಿಲೆಗಳು ಸುಧಾರಿಸುತ್ತವೆ.
  • ೫.  ಬೆನ್ನುಮೂಳೆಗೆ ರಕ್ತ ಸಂಚಾರ ಹೆಚ್ಚಾಗಿ,ಧ್ರುಧವಾಗುತ್ತವೆ,ನವೋತ್ಸಾಹ ತುಂಬುತ್ತದೆ.
  • ೬.  ಪ್ರಾತಃ ಕಾಲದ ಸೂರ್ಯ ಕಿರಣಗಳು ಆರೋಗ್ಯಕರವಾದವು.ಆಸೂರ್ಯಕಿರಣಸ್ಪರ್ಶದಿಂದ
  •     ಚರ್ಮವ್ಯಾದಿಗಳು ನಿವಾರಣೆಯಾಗುತ್ತವೆ.
  • ೭. ಶರೀರದಲ್ಲಿನ ಕೊಬ್ಬಿನ ಪ್ರಮಾಣ ಕಡಿಮೆಯಾಗಿ ಸ್ಥೂಲಕಾಯ ತಗ್ಗಿ ಹೊಟ್ಟೆ ಮತ್ತು ಹೃದಯ ಸಂಬಂಧಿ ವ್ಯಾದಿಗಳಿಂದ ರಕ್ಷಣೆ ಒದಗಿಸುತ್ತದೆ
  • ೯.   ಮೆದುಳಿಗೆ ರಕ್ತ ಸಂಚಾರ ಚುರುಕುಗೊಂಡು,ತಲೆನೋವು,ಅರೆತಲೆನೋವಿನಿಂದ ತಲೆಗೆ ಸಂಬಂದಿಸಿದ  ಸಮಸ್ಯೆಗಳು ಬರುವುದಿಲ್ಲ
  • ೧೦.   ಕೀಲುನೋವು ವಾತ ಸಂಬಂದಿ   ಕಾಯಿಲೆಗಳುನಿವಾರಣೆಯಾಗುವವು.  ಶ್ವಾಸಕೋಶದ ಆರೋಗ್ಯ ಸುಧಾರಿಸಿ,ವ್ಯಾಧಿಯ ತೀವ್ರತೆ ಕಡಿಮೆಯಾಗುತ್ತದೆ. 
  • ೧೨.  ಸ್ವೇದಗ್ರಂಥಿಗಳು ಆರೋಗ್ಯಪೂರ್ಣವಾಗಿ,ಶರೀರ ಲವಲವಿಕೆಯಿಂದ     ಕೂಡಿರುತ್ತದೆ.                                 
  • ೧೩.  ಅಜೀರ್ಣ,ಮಲಬದ್ಧತೆ,ಉದರ ಸಂಬಂಧಿ ವ್ಯಾಧಿಗಳು ಕಡಿಮೆಯಾಗುತ್ತದೆ.
  • ೧೪. ಜ್ಞಾನೇಂದ್ರಿಯಗಳು ಚುರುಕಾಗುತ್ತವೆ.
 ಇಷ್ಟೆಲ್ಲಾ ಶಾರೀರಿಕ ಹಾಗು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಸುಲಭ ಮಾರ್ಗವನ್ನು ಪರಿಣತರ ಮಾರ್ಗದರ್ಶನ ಪಡೆದು ಅನುಸರಿಸುವುದರಿಂದ ಇಂದಿನ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. 

Mar 16, 2011

*
ನನ್ನ ಪ್ರೀತಿಯ
*
*ರಾಘವೇಂದ್ರಭಾಗ್ಯ*
*
*ಗಜೇಂದ್ರವೀಣಾ *
*
 *ಸಂಧ್ಯಾಮನೋಹರ್
*
ಇವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ
ಶುಭಾಶಯಗಳೊಂದಿಗೆ 
 ಈ ಯುವ ಜೋಡಿಗಳಿಗೆ ಉಡುಗೊರೆಯಾಗಿ  ಈಕವನ
*
ಬಂಗಾರದ ಸರ....! 
*
ಕೊಂಡಿ ಕೊಂಡಿ ಬೆಸೆದ ಹಾರ
ಸವೆದಂತೆಲ್ಲ ಬೆಸುಗೆ ಹಾಕಿ
ಕೊರಳಲ್ಲಿ ಧರಿಸಿ ಆನಂದಿಸಬೇಕು...
*
ಎನ್ನುವಷ್ಟರಲ್ಲಿ, ಮತ್ತೊಂದೆಡೆ
ಕೊಂಡಿ ಬಿಟ್ಟು, ಕಳೆದುಕೊಳ್ಳುವ
ಭಯ. ಕಡೆಗಣಿಸುವಂತಿಲ್ಲ
*
ಅದು ಬಂಗಾರದ ಸರ ,
ಬಲು ದುಬಾರಿ ....!!
*
ಕರಗಿಸಿ ಹೊಸತಾಗಿಸಲು 
ಕೊಳೆ, ಕೂಲಿ, ಬೆಸುಗೆ
ಎಂದೆಲ್ಲ ಕಳೆವರು ಮೌಲ್ಯ ,
*
ಹೊಸದಕ್ಕೂ ತೆರಬೇಕು 
ದುಪ್ಪಟ್ಟು ದಂಡ .....!
*
ಬೋಳು ಕೊರಳಲಿ ಹೊರಟರೆ, 
ಎದುರಿಸಬೇಕು ಪ್ರಶ್ನೆಗಳ ಸುರಿಮಳೆ, 
ಅವಶ್ಯವಿಲ್ಲದ ಅನಿವಾರ್ಯತೆ ...!
*
ಸವೆದು ಬೆಸುಗೆ ಬಿಟ್ಟು
ಕಳೆದುಕೊಳ್ಳುವ ಮುನ್ನವೇ 
ಕೊಂಡಿಕೊಂಡಿ ಬೆಸೆಯಿಸಿ 
ಪಾಲಿಶು ಹಾಕಿಸಿ ಹಳತನೆ
ಹೊಸದಾಗಿಸಿ ಧರಿಸಬೇಕು 
*
ಥಳಥಳ ಹೊಳೆವ  
ಬೆಲೆಬಾಳುವ ಸೂಕ್ಷ್ಮ 
ಸಂಬಂಧದ ಬಂಧಗಳ 
ಸರ,  ಬಂಗಾರದ ಸರ 
*****************

Feb 27, 2011

     "ಮೂರ್ಖಳಾದಳೇಕೇ .......? "
 
 
ಕೆರಳಿ ಉರುಳಾಗದೇ
 
ಅರಳಿ  ನೆರಳಾಗಿ 
 
ಮರಳಿ ಮಾತೆಗೇ
 
ಮಾತೆಯಾಗುವ 
 
ಮಗಳನು, ಹಡೆವವಳೇ
 
ಹತ್ಯೆಗೈವ
 
        ಮೂರ್ಖಳಾಗುವಳೇಕೇ.....?...!
 
ಗಂಡೆಂಬ ಗುಂಡಿಗೆ
 
ಎದೆಯೊಡ್ಡುವ
 
         ಸಂಭ್ರಮಕೇ.......?...!