May 27, 2014
Apr 29, 2014
ಸ್ಪಂದನ ವೇದಿಕೆ ,ಹಾಸನ ಮತ್ತು ಮಹಿಳಾ ಪ್ರಥಮದರ್ಜೆ ಕಾಲೇಜು ,ಹಾಸನದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನೆಹರೂಜಿ ಯವರಿಂದ ವೃತ್ತಿಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಬಂದು ೬೫-೭೦ರ ಹರೆಯದಲ್ಲೂ ಎರಡು ಗಂಟೆಗಳ ಕಾಲ ಸತತವಾಗಿ ಸ್ವಲ್ಪವೂ ಆಯಾಸಪಡದೇ ನಿಂತು ವಿಧ್ಯಾರ್ಥಿಗಳಿಗೆ ವಿವರವಾದ ಅತುತ್ತಮ ಹಾಗೂ ಉಪಯುಕ್ತ ಮಾಹಿತಿಯ ಬಗ್ಗೆ ಮಾರ್ಗದರ್ಶನ ನೀಡಿ ಪ್ರಶ್ನೆ ಕೇಳಿದಂತಹ ವಿಧ್ಯಾರ್ಥಿಗಳಿಗೆ ತಾವೇ ಕ್ಯಾಡ್ಬರಿಸ್ ಚಾಕೋಲೆಟ್ ಗಳನ್ನ ಬಹುಮಾನವಾಗಿ ಕೊಟ್ಟು ನಮ್ಮಿಂದ ಒಂದು ಉಪಹಾರವನ್ನುಸಹ ಸ್ವೀಕರಿಸದೆ ೧-೩೦ ರ ವೇಳೆಗೆ ಕಾರ್ಯಕ್ರಮ ಮುಗಿಸಿಕೊಂಡು ೪ ಗಂಟೆ ಫ್ಲೈಟ್ಗೆ ಹಾಸನದಿಂದ ಬಾಂಕಾಕ್ ಗೆ ಹೊರಟರು. ಇಂತಹ ವಿಶೇಷ ವ್ಯಕ್ತಿಗಳು ಇದ್ದಾರೆ.ಎಂಬುದೇ ಸಂತಸದ, ಹೆಮ್ಮೆಯ ಸಂಗತಿ. ಹೀಗೆ ಪ್ರತಿಯೊಬ್ಬವಿಧ್ಯಾವಂತರಲ್ಲೂ ಸಾಧಕರಲ್ಲೂ ಇಂತಹ ಸಮಯದ ಸದುಪಯೋಗ,ಸಮಯಪ್ರಜ್ಞೆ, ನಿಸ್ವಾರ್ಥಸೇವಾ ಮನೋಭಾವ ಬೆಳೆದರೆ ನಮ್ಮ ನಾಡು ,ನಮ್ಮ ದೇಶದ ಸಮಸ್ಯೆಗಳು ಸವಾಲಾಗಿ ಸ್ವೀಕರಿಸುವ ಸ್ಥೈರ್ಯ ಪ್ರತಿಯೊಬ್ಬರಲ್ಲೂಮೈಗೂಡುವುದರಲ್ಲಿ ಸಂದೇಹವಿಲ್ಲವೆನ್ನಿಸಿತು.

Apr 13, 2014
ಸ್ಪಂದನ ವೇದಿಕೆ ,ಹಾಸನ ,ಹಾಗು ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗಮರ್ಕುಲಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಹದಿಹರೆ ಹರೆಯದ ಸಮಸ್ಯೆಗಳು ಮತ್ತು ಪರಿಹಾರ
ಕುರಿತು ಮಾತನಾಡಿದ ಡಾII ಸಾವಿತ್ರಿ ಮೇಡಮ್ ರವರು ಮಾತನಾಡಿ ಮಕ್ಕಳ ಮಾನಸಿಕ ಹಾಗು
ದೈಹಿಕ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರನ್ನು ದೈರ್ಯದಿಂದ ವಿರೋಧಿಸುವುದ್ಲ್ಲದೆ
ಯವಾಮಿಷಕ್ಕೂ ಬಲಿಯಾಗದಂತೆ ಎಚ್ಕಾರಿಕೆಯಿಂದಿರುವುದಲ್ಲದೆ,ಸ್ವಚ್ಚತೆಯ ಕಡೆ ಹೆಚ್ಚು ಗಮನ ಹರಿಸಬೇಕು
ಕೇವಲ ದೈಹಿಕ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸಿ ಅಪ್ರಾಪ್ತ ವಯಸ್ಸಿನಲ್ಲೇ ದಾರಿತಪ್ಪಿ ಭವಿಷ್ಯ
ವನ್ನು ಹಾಳು ಮಾಡಿಕೊಳ್ಳದೆ ,ಲಿಂಗಭೇದವಿಲ್ಲದೆ ಎಲ್ಲರೂ ಸೋದರತ್ವ ಭಾವವನ್ನು ಬೇಳೆಸಿಕೊಳ್ಳುವುದಲ್ಲದೆ
ಎಲ್ಲರನ್ನು ಗೌರವಿಸುದನ್ನು ಕಲಿತಾಗ ಯಾವುದೇ ಅಚಾತುರ್ಯಗಳಿಗೂ ಅವಕಾಶವಿರುವುದಿಲ್ಲ.ಎಂದರು
ಹಾರ್ಮೋನುಗಳ ವೆತ್ಯಯ ದಿಂದಾಗುವ ದೈಹಿಕ ಮಾನಸಿಕ ಬದಲಾವಣೆಗಳು ,ಅದರ ಪರಿಣಾಮ
ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ,ಆ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ,ದುಶ್ಚಟಗಳಿಂದ
ಎದುರಾಗುವ ಮಾರಕ ರೋಗಗಳು,ಅದರ ದುಷ್ಪರಿಣಾಮಗಳ ಕುರಿತು ವಿವರಿಸಿ ,ಆರೋಗ್ಯದ ಯಾವುದೇ
ಸಮಸ್ಯೆಗಳಿದ್ದರೂ ನಮ್ಮ ನರ್ಸಿಂಗ್ ಹೋಂ ನಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯ ಬಹುದೆಂದರು.
Nov 25, 2013
Aug 20, 2013
ಚಿಗುರದ ಒನಕೆ
ಹಲವು ಹಿರಿತನ ಮರವಾದಂತೆ,
ನೆರಳ ಕಡೆಗಣಿಸಿ
ಕಿರಿತನದ ಅನಾದರಕೆ
ಸೋತು ಸೊರಗಿ
ಅಜ್ಞಾನಕೆ ಮರುಗಿ
ದುರಾಸೆಗೆ ಕೊರಗಿ
ಕೊರಡಾಗಿ
ಚಿಗುರದ ಒನಕೆಗಳಿಗಾಗಿ
ಪರಿತಪಿಸುತ
ಅಜ್ಞಾನದ ತೆರೆ ಸರಿಸಲು
ಹೊಂದಿಕೆಯ ಕೈಯ್ಯಾಡಿಸಲು
ಕೈಯ್ಯನ್ನೇ ಕತ್ತರಿಸಿ
ಹರಿವ ನೆತ್ತರನು, ನೋವನು
ಅರಿಯದಂತೆ ಸರಿದು
ಕೈ ಆಡಿಸಿದಂತೆ
ಕುಣಿವ ಒನಕೆಗಳೇ
ಮರದ ಒಂದೊಂದು ಕೊಂಬೆ
ನೀವೆಂದು ಮರೆವುದೇಕೋ .......???
ಹಲವು ಹಿರಿಮರಕೆ
ಕೊಂಬೆಗಳೆಲ್ಲ ನನ್ನವೇ....
ಎಂಬ ಅರಿವಿದ್ದೂ
ಹಲವನು
ಬರಡಾಗಿಸುವ ಹೆಬ್ಬಯಕೆಗೆ
ಬಲಿಯಾಗಿ
ಬಾಡುವ ಭಯಕೆ
ಹಲವು ಕೊಂಬೆ..
ಬೇರ್ಪಟ್ಟು
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ
ತನ್ನ ಮರವೇ
ಕೊಡಲಿಕಾವಾಗಿ
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಮರಕೇಕೆ ತನ್ನ ಸಸಿತನದ
ಮರೆವೋ....!!! ಅರಿಯದು...
ಹಲವು ಹಿರಿತನ ಮರವಾದಂತೆ,
ನೆರಳ ಕಡೆಗಣಿಸಿ
ಕಿರಿತನದ ಅನಾದರಕೆ
ಸೋತು ಸೊರಗಿ
ಅಜ್ಞಾನಕೆ ಮರುಗಿ
ದುರಾಸೆಗೆ ಕೊರಗಿ
ಕೊರಡಾಗಿ
ಚಿಗುರದ ಒನಕೆಗಳಿಗಾಗಿ
ಪರಿತಪಿಸುತ
ಅಜ್ಞಾನದ ತೆರೆ ಸರಿಸಲು
ಹೊಂದಿಕೆಯ ಕೈಯ್ಯಾಡಿಸಲು
ಕೈಯ್ಯನ್ನೇ ಕತ್ತರಿಸಿ
ಹರಿವ ನೆತ್ತರನು, ನೋವನು
ಅರಿಯದಂತೆ ಸರಿದು
ಕೈ ಆಡಿಸಿದಂತೆ
ಕುಣಿವ ಒನಕೆಗಳೇ
ಮರದ ಒಂದೊಂದು ಕೊಂಬೆ
ನೀವೆಂದು ಮರೆವುದೇಕೋ .......???
ಹಲವು ಹಿರಿಮರಕೆ
ಕೊಂಬೆಗಳೆಲ್ಲ ನನ್ನವೇ....
ಎಂಬ ಅರಿವಿದ್ದೂ
ಹಲವನು
ಬರಡಾಗಿಸುವ ಹೆಬ್ಬಯಕೆಗೆ
ಬಲಿಯಾಗಿ
ಬಾಡುವ ಭಯಕೆ
ಹಲವು ಕೊಂಬೆ..
ಬೇರ್ಪಟ್ಟು
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ
ತನ್ನ ಮರವೇ
ಕೊಡಲಿಕಾವಾಗಿ
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಮರಕೇಕೆ ತನ್ನ ಸಸಿತನದ
ಮರೆವೋ....!!! ಅರಿಯದು...
Aug 7, 2013
ಒಂದು ಕೊಂಡರೆ ,ಒಂದು ಉಚಿತ
ಆಸೆಗಳ ರಾಶಿಯಲ್ಲಿ ಸಿಕ್ಕಿದ್ದೆಷ್ಟೋ
ಹೆಕ್ಕಿದ್ದು ಎಷ್ಟೋ ದಕ್ಕಿದ್ದು ಎಷ್ಟೋ
ದಕ್ಕದ್ದು ಎಷ್ಟೋ ದಕ್ಕಿದ್ದು ಅನುಭವಿಸಿದ್ದೆಷ್ಟೋ
ಅನುಭವಿಸಲಾಗದ್ದೆಷ್ಟೋ
ದಕ್ಕಿದ್ದರಲ್ಲಿ ನೋವೆಷ್ಟೋ ನಲಿವೆಷ್ಟೋ
ಅಂತರ್ಗಗತವಾದದ್ದೆಷ್ಟೋ
ಅನಾವರಣಗೊಂಡದ್ದೆಷ್ಟೋ
ದೃಶ್ಯವೆಷ್ಟೋ ಅದೃಷ್ಯವೆಷ್ಟೋ
ಸಿಕ್ಕಿದ್ದು ,ದಕ್ಕಿ,
ಅನುಭವಕ್ಕೆ ಸಿಕ್ಕಿ, ಆನಂದಿಸಿದ್ದಷ್ಟಕ್ಕೆ
ಸಂತೃಪ್ತಿಯಿಂದಿದ್ದರೆ ,
ನೆಮ್ಮದಿ ಖಚಿತ,!!!!!!!!
ಆರೋಗ್ಯ ಉಚಿತ!!!!!!!!!!!!!
ಆಸೆಗಳ ರಾಶಿಯಲ್ಲಿ ಸಿಕ್ಕಿದ್ದೆಷ್ಟೋ
ಹೆಕ್ಕಿದ್ದು ಎಷ್ಟೋ ದಕ್ಕಿದ್ದು ಎಷ್ಟೋ
ದಕ್ಕದ್ದು ಎಷ್ಟೋ ದಕ್ಕಿದ್ದು ಅನುಭವಿಸಿದ್ದೆಷ್ಟೋ
ಅನುಭವಿಸಲಾಗದ್ದೆಷ್ಟೋ
ದಕ್ಕಿದ್ದರಲ್ಲಿ ನೋವೆಷ್ಟೋ ನಲಿವೆಷ್ಟೋ
ಅಂತರ್ಗಗತವಾದದ್ದೆಷ್ಟೋ
ಅನಾವರಣಗೊಂಡದ್ದೆಷ್ಟೋ
ದೃಶ್ಯವೆಷ್ಟೋ ಅದೃಷ್ಯವೆಷ್ಟೋ
ಸಿಕ್ಕಿದ್ದು ,ದಕ್ಕಿ,
ಅನುಭವಕ್ಕೆ ಸಿಕ್ಕಿ, ಆನಂದಿಸಿದ್ದಷ್ಟಕ್ಕೆ
ಸಂತೃಪ್ತಿಯಿಂದಿದ್ದರೆ ,
ನೆಮ್ಮದಿ ಖಚಿತ,!!!!!!!!
ಆರೋಗ್ಯ ಉಚಿತ!!!!!!!!!!!!!
Subscribe to:
Posts (Atom)