Apr 13, 2014

ಸ್ಪಂದನ ವೇದಿಕೆ ,ಹಾಸನ ,ಹಾಗು ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗಮರ್ಕುಲಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಹದಿಹರೆ ಹರೆಯದ ಸಮಸ್ಯೆಗಳು ಮತ್ತು ಪರಿಹಾರ
ಕುರಿತು ಮಾತನಾಡಿದ ಡಾII ಸಾವಿತ್ರಿ ಮೇಡಮ್ ರವರು ಮಾತನಾಡಿ ಮಕ್ಕಳ ಮಾನಸಿಕ ಹಾಗು
ದೈಹಿಕ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರನ್ನು ದೈರ್ಯದಿಂದ ವಿರೋಧಿಸುವುದ್ಲ್ಲದೆ 
ಯವಾಮಿಷಕ್ಕೂ ಬಲಿಯಾಗದಂತೆ  ಎಚ್ಕಾರಿಕೆಯಿಂದಿರುವುದಲ್ಲದೆ,ಸ್ವಚ್ಚತೆಯ ಕಡೆ ಹೆಚ್ಚು ಗಮನ ಹರಿಸಬೇಕು 
ಕೇವಲ ದೈಹಿಕ ಆಕರ್ಷಣೆಯನ್ನೇ  ಪ್ರೀತಿ ಎಂದು ಭಾವಿಸಿ ಅಪ್ರಾಪ್ತ ವಯಸ್ಸಿನಲ್ಲೇ ದಾರಿತಪ್ಪಿ ಭವಿಷ್ಯ 
ವನ್ನು ಹಾಳು ಮಾಡಿಕೊಳ್ಳದೆ ,ಲಿಂಗಭೇದವಿಲ್ಲದೆ ಎಲ್ಲರೂ ಸೋದರತ್ವ ಭಾವವನ್ನು ಬೇಳೆಸಿಕೊಳ್ಳುವುದಲ್ಲದೆ 
ಎಲ್ಲರನ್ನು ಗೌರವಿಸುದನ್ನು ಕಲಿತಾಗ ಯಾವುದೇ ಅಚಾತುರ್ಯಗಳಿಗೂ ಅವಕಾಶವಿರುವುದಿಲ್ಲ.ಎಂದರು 
ಹಾರ್ಮೋನುಗಳ ವೆತ್ಯಯ ದಿಂದಾಗುವ ದೈಹಿಕ ಮಾನಸಿಕ ಬದಲಾವಣೆಗಳು ,ಅದರ ಪರಿಣಾಮ 
ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ,ಆ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ,ದುಶ್ಚಟಗಳಿಂದ  
ಎದುರಾಗುವ ಮಾರಕ ರೋಗಗಳು,ಅದರ ದುಷ್ಪರಿಣಾಮಗಳ ಕುರಿತು ವಿವರಿಸಿ ,ಆರೋಗ್ಯದ ಯಾವುದೇ 
ಸಮಸ್ಯೆಗಳಿದ್ದರೂ  ನಮ್ಮ ನರ್ಸಿಂಗ್ ಹೋಂ ನಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯ ಬಹುದೆಂದರು. 



ಹಳ್ಳಿಯ  ಹಸಿರಿನ ಅಂದವಾದ ಉದ್ಯಾನ ವನದ ನಡುವೆ ಮುಗ್ಧ ಮಕ್ಕಳೊನ್ದಿಗಿನ ಒಡನಾಟ ಆಹ್ಲಾದಕರವೆನಿಸಿತು  

Apr 8, 2014

        ಸ್ಪಂದನ ವೇದಿಕೆಹಾಸನ ,ಕ. ಸಾ. ವೇ,ಹಾಸನ  ಮತ್ತು ಕಲಿವೀರ್ ಪ್ರೌಢ ಶಾಲೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ
"ಆರೋಗ್ಯದ ಅರಿವು"
ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮದಲ್ಲಿ
ಅಧ್ಯಕ್ಷರಾಗಿ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ  ಡಾ. ಸಾವಿತ್ರಿಯವರು 
ಹಾಗು ಅತಿಥಿಗಳಾಗಿ ಜಿ.ಎಸ್. ಕಲಾವತಿಮಧುಸೂದನ್
ಮತ್ತು ವಿಜಯಕುಮಾರಿ ಉಪಸ್ಥಿತರಿದ್ದರು.




 

Nov 25, 2013

ಪಾರ್ಥೇನಿಯಂ  ಸಾಮ್ರಾಜ್ಯ 


ಹೊಸ ಬದುಕ ಹೊಸ್ತಿಲಿಗೆ

ಕಾಲಿಡಲು ಕಾದಿತ್ತು

ಸವಿಗನಸುಗಳ ಹೊತ್ತು

ಸುತ್ತಲೂ ನೆರೆದಿದ್ದು 

ಪಾರ್ಥೇನಿಯಂ ಎಂದರಿಯಲು

ಹಿಡಿಯಲಿಲ್ಲ ಬಹಳ ಹೊತ್ತು ,

ಕಾಲ ಮಿಂಚಿತ್ತು ,

ಮಾಡಲೇ ನಿತ್ತು .... ?

ಮೌನದಲೇ ಮುಂದಡಿ ಇಟ್ಟಿತ್ತು

ಆತಂಕಗಳ ಹೊತ್ತು....  

ಪಾರ್ಥೇನಿಯಂ ಬಿಡುವುದೇ 

ಹೂ ಬಳ್ಳಿ  ಚಿಗುರಲು  

ಮಲ್ಲೇ ಹೂ ಅರಳಲು.....!!!!!??
 

Aug 20, 2013

ಚಿಗುರದ  ಒನಕೆ


ಹಲವು ಹಿರಿತನ ಮರವಾದಂತೆ,
ನೆರಳ ಕಡೆಗಣಿಸಿ
ಕಿರಿತನದ ಅನಾದರಕೆ
ಸೋತು ಸೊರಗಿ
ಅಜ್ಞಾನಕೆ ಮರುಗಿ
ದುರಾಸೆಗೆ ಕೊರಗಿ
ಕೊರಡಾಗಿ
ಚಿಗುರದ ಒನಕೆಗಳಿಗಾಗಿ
ಪರಿತಪಿಸುತ
ಅಜ್ಞಾನದ ತೆರೆ ಸರಿಸಲು
ಹೊಂದಿಕೆಯ ಕೈಯ್ಯಾಡಿಸಲು
ಕೈಯ್ಯನ್ನೇ ಕತ್ತರಿಸಿ
ಹರಿವ ನೆತ್ತರನು, ನೋವನು  
ಅರಿಯದಂತೆ  ಸರಿದು

ಕೈ ಆಡಿಸಿದಂತೆ
ಕುಣಿವ ಒನಕೆಗಳೇ
ಮರದ ಒಂದೊಂದು ಕೊಂಬೆ
ನೀವೆಂದು ಮರೆವುದೇಕೋ .......???

ಹಲವು ಹಿರಿಮರಕೆ 
ಕೊಂಬೆಗಳೆಲ್ಲ ನನ್ನವೇ.... 
ಎಂಬ ಅರಿವಿದ್ದೂ
ಹಲವನು 
ಬರಡಾಗಿಸುವ ಹೆಬ್ಬಯಕೆಗೆ
ಬಲಿಯಾಗಿ
ಬಾಡುವ ಭಯಕೆ
ಹಲವು ಕೊಂಬೆ.. 
 ಬೇರ್ಪಟ್ಟು 
ಬೇರೆಡೆ ಬೇರ್ಬಿಟ್ಟು
ತನ್ನ ಅಸ್ತಿತ್ವವನು
ಉಳಿಸಿಕೊಳ್ಳಲು
ಹೆಣಗುವ ಸೆಣೆಸಾಟಕೆ 
ತನ್ನ ಮರವೇ
ಕೊಡಲಿಕಾವಾಗಿ 
ಬರದಿರಲೆಂಬ
ಬೇಡಿಕೆಯ ಮೊರೆ
ಸೃಷ್ಠಿಕರ್ತನಲಿ....
ಮರಕೇಕೆ ತನ್ನ ಸಸಿತನದ
ಮರೆವೋ....!!!  ಅರಿಯದು...       

Aug 7, 2013

ಒಂದು ಕೊಂಡರೆ ,ಒಂದು ಉಚಿತ 

ಆಸೆಗಳ ರಾಶಿಯಲ್ಲಿ ಸಿಕ್ಕಿದ್ದೆಷ್ಟೋ 

ಹೆಕ್ಕಿದ್ದು ಎಷ್ಟೋ ದಕ್ಕಿದ್ದು ಎಷ್ಟೋ

ದಕ್ಕದ್ದು ಎಷ್ಟೋ ದಕ್ಕಿದ್ದು ಅನುಭವಿಸಿದ್ದೆಷ್ಟೋ

ಅನುಭವಿಸಲಾಗದ್ದೆಷ್ಟೋ

ದಕ್ಕಿದ್ದರಲ್ಲಿ ನೋವೆಷ್ಟೋ ನಲಿವೆಷ್ಟೋ

ಅಂತರ್ಗಗತವಾದದ್ದೆಷ್ಟೋ

ಅನಾವರಣಗೊಂಡದ್ದೆಷ್ಟೋ

ದೃಶ್ಯವೆಷ್ಟೋ ಅದೃಷ್ಯವೆಷ್ಟೋ

ಸಿಕ್ಕಿದ್ದು  ,ದಕ್ಕಿ,

ಅನುಭವಕ್ಕೆ ಸಿಕ್ಕಿ, ಆನಂದಿಸಿದ್ದಷ್ಟಕ್ಕೆ

ಸಂತೃಪ್ತಿಯಿಂದಿದ್ದರೆ ,

ನೆಮ್ಮದಿ ಖಚಿತ,!!!!!!!!
ಆರೋಗ್ಯ ಉಚಿತ!!!!!!!!!!!!! 

Sep 26, 2012

ನೀನಾರಿಗಾದೆಯೋ.....????

ನೀನಾರಿಗಾದೆಯೋ.......??????


ನಾನೇ ,ನನ್ನಿಂದಲೇ ,
ನನಗಾಗಿಯೇ ...ಎಂದು
ಗೂಳಿಡುತಾ  ......
ನೀನಾರಿಗಾದೆಯೋ....?
ಬಾಂಧವ್ಯದಲಿ ಸಿಹಿ ಕಾಣದವ
ನೆತ್ತರಲೇ ಸಕ್ಕರೆ ತುಂಬಿಕೊಂಡು
ನಶ್ವರ ಬದುಕ ,ಅಶಾಂತಿಯಲಿ 
ಹೊಟ್ಟೆಯುರಿ ನೊರೆಯುಕ್ಕಿ ,
ಕೋಪೋದ್ರೇಕ ಕೆಂಪಾಗಿ
ನೆತ್ತರು ನುಗ್ಗಿ
ಎದೆಯೊಡೆಯುವ ಮುನ್ನ
ಯೋಚಿಸು ...!!!!!
ನೀನಾರಿಗಾದೆಯೋ ....?


ಓ..... ವಿಕೃತವೇ......!!!!!


ಪಾಪದ ಬಸುರಿಂದ
ಸಂಭ್ರಮಿಸದೇ....
ಪುಣ್ಯದ ಬಂಜೆತನ
ನೀಗಿಸುತಾ....
ಗರ್ಭಪಾತವಾಗಲೀ ...
ವಿಕೃತ ಭಾವ ...
ಹುಡುಕೀ  ತಡಕೀ ...
ಹುಳುಕು  ಅರಸಿ[ನೊಣವನರಸಿ] 
ಹಾಡಿನಗುವ ನಿನ್ನ ಪರೀ ..!!!!!
ನಿನ್ನೊಡಲ ತಂಪನ್ನೇ...
ತಾಪಗೊಳಿಪುದೆಂಬ
ನಗ್ನ ಸತ್ಯವನ್ನೇ...
ಮರೆಯುತಾ....
ನಿಂದಿಸಿ ಸಂತಸಪಡುವಾ  
ಓ .....  ವಿಕೃತವೇ ....
ಹಂದಿಯಿಂದಲೇ.... 
ಕೇರಿ ಶುದ್ಧವೆಂಬುದನೇ....
ಮರೆವೆಯೇಕೆ....?
ಮೆರೆವೇಯೇಕೆ.....?
ಮೊರೆವೆಯೇಕೆ ....?
ವಿಕೃತವನೇ..ತೊರೆದೊಡೆ
ಸುಕೃತವಾ....
ಪಡೆಯದಿಹೆಯಾ ....??
****************

Feb 19, 2012



ಉಳಿಸಲಿಲ್ಲ ಹೆಸರು

ಅತ್ತ ಇತ್ತ ಹಾರಾಡಿ
ಇಕ್ಕಿದ ಪಿಕ್ಕೆ
ಅಲ್ಲಲ್ಲೇ ಇಕ್ಕಿತು  
ಬೀಜಗಳ  ಉಕ್ಕೆ 
ಪರಿಸರದ ಪಾಕಕ್ಕೆ
ಸಸಿಯಾಗಿ ,
ಗಿಡವಾಗಿ ,ಮರವಾಗಿ
ಏರಲು....
ಹಕ್ಕಿ.. ತಿಮ್ಮಕ್ಕರಾಗಿ
ಉಳಿಸಲಿಲ್ಲ
ತಮ್ಮ ಹೆಸರು..!
ಅನಾಮಧೇಯ  
ಅನಾಥವಾದರೂ
ತಾರತಮ್ಯವಿಲ್ಲದ
ನೆರಳು,
ನೇಗಿಲು ಮರಮುಟ್ಟಿನ 
ಬಲಿಗೆ  ಬೇಕಿಲ್ಲ
ಮರದ ಸಮ್ಮತಿ .... 
ಸ್ವೇಚ್ಛೆಯ ದಬ್ಬಾಳಿಕೆಗೆ
ಇಲ್ಲ ಮಿತಿ .....!   

ಸೊಳ್ಳೆ
ಕಚ್ಚಲು ಕೂರುವ 
ಕೀಟಗಳ
ಕೊಲ್ಲುವ ಜಿದ್ದು
ಹೊಟ್ಟೆ ಹೇಗೆ
ಹೊರೆಯಬೇಕು
ಅದರದ್ದು ..?
 ಅದರ
 ಸಂತಾನದ್ದು...?
ಅದು ಹುಟ್ಟಿದ್ದೇ
ನೆತ್ತರ ಹೀರಲು..
ಹಿರಿದ್ದು ಹನಿ...!ನೀಡಿದ್ದು......!..?   

 ಬಯಕೆ

ಭವಿಷ್ಯ ...ಪಾಯದಲ್ಲಿ .
ಹುಡುಕುವುದು
ಹೆಸರಿಡಲು ಸೌಧಕ್ಕೆ.
ಉತ್ಸಾಹ ಹಂತಗಳಲ್ಲಿ,
ಸಾಧಿಸುವಲ್ಲಿ
ಪ್ರತ್ಯಕ್ಷವಾಗುವ ಆತಂಕ
ಹಂಗಿಲ್ಲ ಹರಸುವ
ಹಿರಿತನಕೆ,
ಬಂಧಗಳ ಬಾಧೆಗೆ
ಕರುಳಿಗೆ ಕಾಡುವ
ಅಪರಾಧಿ ಭಾವಕೆ
ನೈತಿಕ ನೆರವಿಗೆ  
ನಿಲ್ಲುವ ಬಯಕೆ...
ಧನ್ಯತೆಯೇ ಇರದ 
ಅಪವಾದದ  ಬುತ್ತಿ.... 
ಹೊರಲಾಗದ ಬುರುಡೆಗೆ
ಸುತ್ತಿಗೆ ಬಡಿತ...
ತಮಟೆಯ ಹೊಡೆತ...!