********************

*ಹೂಬತ್ತಿ*
ಬೆಂಕಿಯ ಕಿಡಿಗಳಾಗಿ
ಹೊಮ್ಮದೇ
ಬೆಳಕಿನ ಕಿರಣಗಳಾಗಿ
ಹೊಮ್ಮಲಿ ಹೂ ಬತ್ತಿ
ಅವರಿಲ್ಲದೂಟ
ಬಂದು ಹೋಗುವ
ನಡುವೆ
ನಗೆ ಧಗೆಗಳಲೆಗಳು
ನಗೆ ಧಗೆಗಳಲೆಗಳು
ದೊಡ್ದಲೆಗೆ ಬಿದ್ದು
ಹೋದವರ ನೆನಪು
ಮತ್ತೆ ಮಹಾಲಯದಿ
ಅವರಿಲ್ಲದೂಟ
ಕೂಟ ಸೇರಲೇ ಕಾಟ
ಸೇರಿದರು ಆಟ
ದೀವಳಿಗೆ ಜಗಮಗಿಸಿ
ದಿವಾಳಿಯಾದಾಗ
ನೆನಪೊಂದು ನಗೆ
***********************
ಕ್ಷಮಿಸಿ ಸ್ನೇಹಿತರೆ,ಹಬ್ಬದ ದಿನಗಳಲ್ಲಿ ವಿದೇಶದಿಂದ ಸ್ವದೇಶಕ್ಕೆ
ಪಯಣಿಸುತ್ತಿದ್ದ ಕಾರಣ,ತಡವಾಗಿ ಶುಭಾಷಯ ಕೋರುತ್ತಿದ್ದೇನೆ