Sep 26, 2012

ನೀನಾರಿಗಾದೆಯೋ.....????

ನೀನಾರಿಗಾದೆಯೋ.......??????


ನಾನೇ ,ನನ್ನಿಂದಲೇ ,
ನನಗಾಗಿಯೇ ...ಎಂದು
ಗೂಳಿಡುತಾ  ......
ನೀನಾರಿಗಾದೆಯೋ....?
ಬಾಂಧವ್ಯದಲಿ ಸಿಹಿ ಕಾಣದವ
ನೆತ್ತರಲೇ ಸಕ್ಕರೆ ತುಂಬಿಕೊಂಡು
ನಶ್ವರ ಬದುಕ ,ಅಶಾಂತಿಯಲಿ 
ಹೊಟ್ಟೆಯುರಿ ನೊರೆಯುಕ್ಕಿ ,
ಕೋಪೋದ್ರೇಕ ಕೆಂಪಾಗಿ
ನೆತ್ತರು ನುಗ್ಗಿ
ಎದೆಯೊಡೆಯುವ ಮುನ್ನ
ಯೋಚಿಸು ...!!!!!
ನೀನಾರಿಗಾದೆಯೋ ....?


ಓ..... ವಿಕೃತವೇ......!!!!!


ಪಾಪದ ಬಸುರಿಂದ
ಸಂಭ್ರಮಿಸದೇ....
ಪುಣ್ಯದ ಬಂಜೆತನ
ನೀಗಿಸುತಾ....
ಗರ್ಭಪಾತವಾಗಲೀ ...
ವಿಕೃತ ಭಾವ ...
ಹುಡುಕೀ  ತಡಕೀ ...
ಹುಳುಕು  ಅರಸಿ[ನೊಣವನರಸಿ] 
ಹಾಡಿನಗುವ ನಿನ್ನ ಪರೀ ..!!!!!
ನಿನ್ನೊಡಲ ತಂಪನ್ನೇ...
ತಾಪಗೊಳಿಪುದೆಂಬ
ನಗ್ನ ಸತ್ಯವನ್ನೇ...
ಮರೆಯುತಾ....
ನಿಂದಿಸಿ ಸಂತಸಪಡುವಾ  
ಓ .....  ವಿಕೃತವೇ ....
ಹಂದಿಯಿಂದಲೇ.... 
ಕೇರಿ ಶುದ್ಧವೆಂಬುದನೇ....
ಮರೆವೆಯೇಕೆ....?
ಮೆರೆವೇಯೇಕೆ.....?
ಮೊರೆವೆಯೇಕೆ ....?
ವಿಕೃತವನೇ..ತೊರೆದೊಡೆ
ಸುಕೃತವಾ....
ಪಡೆಯದಿಹೆಯಾ ....??
****************

Feb 19, 2012



ಉಳಿಸಲಿಲ್ಲ ಹೆಸರು

ಅತ್ತ ಇತ್ತ ಹಾರಾಡಿ
ಇಕ್ಕಿದ ಪಿಕ್ಕೆ
ಅಲ್ಲಲ್ಲೇ ಇಕ್ಕಿತು  
ಬೀಜಗಳ  ಉಕ್ಕೆ 
ಪರಿಸರದ ಪಾಕಕ್ಕೆ
ಸಸಿಯಾಗಿ ,
ಗಿಡವಾಗಿ ,ಮರವಾಗಿ
ಏರಲು....
ಹಕ್ಕಿ.. ತಿಮ್ಮಕ್ಕರಾಗಿ
ಉಳಿಸಲಿಲ್ಲ
ತಮ್ಮ ಹೆಸರು..!
ಅನಾಮಧೇಯ  
ಅನಾಥವಾದರೂ
ತಾರತಮ್ಯವಿಲ್ಲದ
ನೆರಳು,
ನೇಗಿಲು ಮರಮುಟ್ಟಿನ 
ಬಲಿಗೆ  ಬೇಕಿಲ್ಲ
ಮರದ ಸಮ್ಮತಿ .... 
ಸ್ವೇಚ್ಛೆಯ ದಬ್ಬಾಳಿಕೆಗೆ
ಇಲ್ಲ ಮಿತಿ .....!   

ಸೊಳ್ಳೆ
ಕಚ್ಚಲು ಕೂರುವ 
ಕೀಟಗಳ
ಕೊಲ್ಲುವ ಜಿದ್ದು
ಹೊಟ್ಟೆ ಹೇಗೆ
ಹೊರೆಯಬೇಕು
ಅದರದ್ದು ..?
 ಅದರ
 ಸಂತಾನದ್ದು...?
ಅದು ಹುಟ್ಟಿದ್ದೇ
ನೆತ್ತರ ಹೀರಲು..
ಹಿರಿದ್ದು ಹನಿ...!ನೀಡಿದ್ದು......!..?   

 ಬಯಕೆ

ಭವಿಷ್ಯ ...ಪಾಯದಲ್ಲಿ .
ಹುಡುಕುವುದು
ಹೆಸರಿಡಲು ಸೌಧಕ್ಕೆ.
ಉತ್ಸಾಹ ಹಂತಗಳಲ್ಲಿ,
ಸಾಧಿಸುವಲ್ಲಿ
ಪ್ರತ್ಯಕ್ಷವಾಗುವ ಆತಂಕ
ಹಂಗಿಲ್ಲ ಹರಸುವ
ಹಿರಿತನಕೆ,
ಬಂಧಗಳ ಬಾಧೆಗೆ
ಕರುಳಿಗೆ ಕಾಡುವ
ಅಪರಾಧಿ ಭಾವಕೆ
ನೈತಿಕ ನೆರವಿಗೆ  
ನಿಲ್ಲುವ ಬಯಕೆ...
ಧನ್ಯತೆಯೇ ಇರದ 
ಅಪವಾದದ  ಬುತ್ತಿ.... 
ಹೊರಲಾಗದ ಬುರುಡೆಗೆ
ಸುತ್ತಿಗೆ ಬಡಿತ...
ತಮಟೆಯ ಹೊಡೆತ...!