Nov 14, 2010

  ಮಾಡಬೇಡಿ ನನ್ನ ದೇವರು 


 ದೇವನೆಂದು ಹೊಳೆವಂತೆ
 ತೊಳೆದು ಗುಡಿಯಲಿಟ್ಟರು
 ಎಣ್ಣೆ ನೀರು ಬಿಟ್ಟರು,  
 ಹೂಹಣ್ಣು ಇಟ್ಟರು ಗಂಧ ಹಚ್ಚಿ ,ಮಂದ, ಹಣತೆ  
 ಬೆಳಗಿಸಿಟ್ಟರು.ಕೈ ಮುಗಿದು
 ಕಣ್ಣ ಮುಚ್ಚಿ, ಬೇಡಿಕೆ ಮುಂದಿಟ್ಟರು
 ಇಚ್ಛೆ ಈಡೇರದಾಗ ,ಕಲ್ಲೆಂದು ಬಿಟ್ಟರು ಗರ್ಭ ಗುಡಿಯಲ್ಲಿ ಕೂಡಿ, 
 ಬೀಗ ಜಡಿದುಬಿಟ್ಟರು
 ಹೂಹಣ್ಣು ಎಣ್ಣೆ ಕಾಯಿಕದ್ದ,
 ಖೈದಿಯಾಗಿಟ್ಟರು


 ನಿಮ್ಮನೇ.......ನಾ ಬೇಡುವೆ
 ಮಾಡಬೇಡಿ ನನ್ನ ದೇವರು


ನಿಂತು ನಿಂತು ಕಾಲು ನೋವು
 ಕುಂತು ಕುಂತು ಕೀಲುನೋವು
 ತಾಳಲಾರೆ ಗುಡಿಯ ಕಾವು


 ಅರಿವರಾರು ನನ್ನ ನೋವು
 ಮಾಡ ಬೇಡಿ, ನನ್ನ ದೇವರು.
 ಹೊಡೆದಾಡಬೇಡಿ, ನನ್ನ
 ನೆಪವ ಹೂಡಿ ಎಲ್ಲರೂ.  

--