Nov 24, 2011

ಪೂರ್ವಿತನ ಪ್ರವರ

ಎರಡು ವರ್ಷದ ಮಗುವಿನ ಬುದ್ಧಿವಂತಿಕೆ ನಿಜವಾಗಿಯೂ ಅಚ್ಚರಿ ಹುಟ್ಟಿಸುವಂತಹದ್ದು..!
ಅತ್ತೆ ಮಾಮ ಮನೆಗೆ ಬಂದಿದ್ದಾರೆ.ಪಾಪುಆಜ್ಜಿಯ ಹತ್ತಿರ  ಸ್ನಾನಮಾಡಿಸಿಕೊಂಡು
ಅಮ್ಮನ ಹತ್ತಿರ ಬಂದು ,ಮೈ ಒರೆಸಿ ಕೊಂಡು,ಬಟ್ಟೆ ಹಾಕಿಸಿಕೊಂಡು ಮುದ್ದಾಗಿ
ದಿವಾನ್ ಮೇಲೆ ಕುಳಿತಿತು .ಪಕ್ಕದಲ್ಲೇ ಕುಳಿತ ಮಾಮ ಸುಮ್ಮನೆ ಕುಳಿತಿರಲು
ಬೇಸರವಾದ ಕಾರಣ ಹಿಂದಿನ ದಿನ ಭಾವ ಆಡಲು ತಂದಿದ್ದ ಕಾರ್ಡ್ಸ್ ಬಾಕ್ಸ್
ತೆಗೆದುಕೊಂಡು "ಪೂರ್ವಿ ನಾನು ನೀನು ಕಾರ್ಡ್ಸ್ಆಡೋಣಪ್ಪಎಂದಾಗ'ಮುದ್ದಾಗಿ ಆಯಿತು
ಎಂದು ತಲೆ ಆಡಿಸಿ ಮಾಮನಿಗೆ ಎದುರಾಗಿ ಕುಳಿತ."ನಾನು ನಿಂಗೆ ಹೇಳಿಕೊಡ್ತೀನಿ,
ಆಯ್ತಾ ನೋಡು,ಈಕಾರ್ಡ್ ಹೀಗೆ ಹಿಡಿದುಕೊ". ಎಂದು ಕಾರ್ಡ ಜೋಡಿಸಿಕೊಟ್ಟರು.
ನೀಟಾಗಿ ದೊಡ್ಡವರ ಹಾಗೆ ಜೋಡಿಸಿಕೊಟ್ಟ  ಕಾರ್ಡ್ಸ್ ಅನ್ನು ಹಿಡಿದು ಗಂಭೀರವಾಗಿ
ಮಾಮನ ಆದೇಶಕ್ಕಾಗಿ ನೋಡುತ್ತಿದ್ದಾನೆ.ಅಮ್ಮ ಮಾಮ  ಅತ್ತೆ ಅಜ್ಜಿಯರಿಗೆ ಅವನು ಕುಳಿತ
ವೈಖರಿಗೆ ನೋಡಿ ಅಚ್ಚರಿ,ಕುತೂಹಲ.ಸರಿ, ಮಾಮ, "ನೋಡ್ರಿ ನಿಮ್ಮ ಮಗ ಹೇಗೆ ಆಡ್ತಿದ್ದಾನೆ
ನನ್ನ ಜೊತೆ," ಎಂದು. ಇರು, "ನಿನ್ನ ಫೋಟೋ ತೆಗೆದು ನಿಮ್ಮ ಪಪ್ಪಾನಿಗೆ ತೋರಿಸುತ್ತೇನೆ ಆಯ್ತಾ"
ಎಂದು ಹೇಳಿ ಅವನ ಫೋಟೋ ಹಿಡಿದರು.ನಂತರ ಅವರ ಅಮ್ಮ ,ಪೂರ್ವಿ ಇರು
ಪಪ್ಪನಿಗೆ ಹೇಳ್ತೇನೆ ಎಂದದ್ದಕ್ಕೆ ಗಂಭೀರವಾಗಿ(ಕೋಪವಿಲ್ಲ, ಏನೋ ಯೋಚಿಸುವಂತೆ 
ಅವರ ಅಮ್ಮನನ್ನೇ ಎರಡು ನಿಮಿಷ ನೋಡುತ್ತಾ"ಆಯಿ "..ಎಂದ. (ಅವನ ಭಾಷೆಯಲ್ಲಿ ನಾಯಿ)
ಮತ್ತೆ,  ಪಪ್ಪನಿಗೆ ಹೇಳಲಾ ?ಎಂದದ್ದಕ್ಕೆ ,ಪೂರ್ವಿ, "ಬಾ.."(.ಬೇಡ)ಎಂದ .
ಫೋಟೋ ತೆಗೆದಿದ್ದಾಯಿತು ,ಅಚ್ಚರಿಪಟ್ಟಿದ್ದು, ನಕ್ಕಿದ್ದು ಎಲ್ಲ ಆಯಿತು.ಇಪ್ಪತ್ತು
ನಿಮಿಷ ಬಿಟ್ಟು ಅವನ ಪಪ್ಪಾ ಬಂದ.ಪ್ರಾಣ ಪ್ರಿಯನಾದ ಅಪ್ಪನ ಬಳಿ ಖುಷಿಯಿಂದ ಹೋದ
ಮಗುವಿಗೆ, ಅಮ್ಮ ಕಾಯುತ್ತಿದ್ದವಳಂತೆ," ನೋಡಿ ಇವನು
ಅವರ ಮಾಮನ ಜೊತೆ ಕಾರ್ಡ್ಸ್  ಆಡುತ್ತಿದ್ದ", ಎಂದಳು. ಅವನ ಅಪ್ಪ, "ಏನೋ.., ಎಂದು ಅವನೆಡೆ
ಅವನ ಪಪ್ಪಾಕೋಪದಿಂದ ನೋಡಿದಾಗ ತನ್ನ ನಗುವಿನಲ್ಲೇ ಮರೆಸಲು ಪ್ರಯತ್ನಿಸಿದ,
ನೋಡೋಣ ಎಂದು ಮತ್ತೆ ಗದರಿದಂತೆ, ಹೌದೇನೋ..,ಎಂದರೆ, ಸದ್ದಿಲ್ಲದಂತೆ ತಲೆ ತಗ್ಗಿಸಿ
ಕುಳಿತಿದ್ದಾನೆ.ಹಾಗೆ ಮತ್ತೆ ಗದರುವಾಗ ಕಣ್ಣಲ್ಲಿ ನೀರು ತುಂಬಿದೆ.ಅಪ್ಪನ ಮನಸು
ತಡೆಯುವುದೇ ?ಅವನ್ನನ್ನು ಎತ್ತಿಕೊಂಡು ಇನ್ನುಮೇಲೆ ಆಡಬಾರದು ಆಯ್ತಾ
ಜಾಣ ಎಂದು ರಮಿಸಿ ಮುದ್ದಿಸಿದ.ಮತ್ತದೇ ಎರಡು ನಿಮಿಷ ಬಿಟ್ಟು ಅವರ ಮಾಮ
"ಏನಪ್ಪಾ ಪೂರ್ವಿ ಕಾರ್ಡ್ಸ್ ಆಟ ಆಡೋಣವಾ ". ಎಂದರೆ...ಅಪ್ಪನ ಕಡೆ ಒಮ್ಮೆ ನೋಡಿ,
ಇವನಿದ್ದಾನಲ್ಲ..,ಬೈಯ್ತಾನಲ್ಲ..ಅನ್ನೋಹಾಗೆ ಅವನ ಕಡೆ ಕೈತೋರಿಸಿಕೊಂಡು ಮುಖ ಹುಳ್ಳಗೆ
ಮಾಡಿಕೊಂಡು "ಅಪ್ಪ ಆಯಿ..'ಎನ್ನುತ್ತಿದ್ದಾನೆ.ನಮಗಂತೂ ಅವನ ತಿಳುವಳಿಕೆಗೆ
ಅಚ್ಚರಿ,ನಗು ...!ಎರಡು ವರ್ಷದ ಮಗುವಿಗೆ ಅದನ್ನ ಆಡಬಾರದು ಎಂಬ ಅರಿವು,
ಆಸೆ, ಅದರೊಟ್ಟಿಗೆ ಭಯ. ,ಅದಕ್ಕೆ ಅವನ ಪ್ರತಿಕ್ರಿಯೆಗೆ ಇಂದಿನ ಪೀಳಿಗೆಯ ವೇಗದ
ಬಗ್ಗೆಯೇ ಹೆಮ್ಮೆಯೊಂದೆಡೆಯಾದರೆ,  ಅಚ್ಚರಿಯನ್ನು  ಹುಟ್ಟಿಸುತ್ತಿದೆ.ಇನ್ನು ಅಪ್ಪ ಅಮ್ಮ
ಏನಾದರು ರೇಗಿದರೆ ಇದ್ದಕ್ಕಿದ್ದಂತೆ ಶುರುಮಾಡ್ತಾನೆ ಹಾಡು ...ಅಪ್ಪ ಊಜಾ 
ಅಮ್ಮ ಊಜಾ (ಅಪ್ಪ ಲೂಜ ಅಮ್ಮ ಲೂಜ )ಅದಕ್ಕೆ ಹೇಳೋದು
" ಮಕ್ಕಳ ಆಟ ದೊಂಬರು ಆಡೋಲ್ಲ"ಅಂತ .

 ಹೀಗೆ ನನಗೂ ಅವನ ಜೊತೆ ಹೊರಗೆ ಹೋಗೋ ಆಸೆ.ಯಾಕೆಂದ್ರೆ ಅವನು
ಅಪ್ಪ ಅಮ್ಮನ್ನ ಬಿಟ್ಟು ಎಲ್ಲೂ ಬರೋಲ್ಲ ,ಮಾಮಿ ಎಂದರೆ ಖುಷಿಯಿಂದ ಬರ್ತಾನೆ.
ಹಾಗಂತ ಬಾಪ್ಪಾ ಮಾಮಿಗೆ ಹೋಗೋಣ ಅಂತ ಕರೆದರೆ,
" ಅಯ್ಯಿ.. ಮಾಮಿ.. ಚಯ್ಯಿ,ಎಂದು  ದೇವರ ಫೋಟೋ ತೋರಿಸಿ ಕೈ ಮುಗಿತಾ ಇದ್ದಾನೆ.
ದೇವರು ಇಲ್ಲೇ ಫೋಟೋದಲ್ಲೇ  ಇದ್ದಾನೆ,ಇಲ್ಲೇ ಕೈ ಮುಗಿಯೋಣ.ಎನ್ನುತ್ತಿದ್ದಾನೆ ಪೋರ.