Oct 10, 2015

ಇರು ನೀ ಗಂಗೆ ಹಾಂಗ 

ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ
ಹಾಂ ಎಂದೊಡೇ
ಹಾವಾಗಿ ಕಚ್ಚುವನು ಎಚ್ಚರ
ಹಮ್ಮಿನ ಅಹಂಮ್ಮಿನ 
ಶೃಂಖಲೆಯ ಶೃಂಗದೇ
ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,  
ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ
ಕೀವು ರಕ್ತ ಸೋರಿ
ರಣವಾಗಿ ನೊಂದು ಬೆಂದು
ಹಾರಾಡಿ ನೆಕ್ಕಲು ಕೂರುವ
ನೊಣಕೆ ನಿರ್ಲಿಪ್ತೆ,  
"ನಾ... ನಿರದ ನೀನು"
ಸೈರಣೆಯ  ವಿತರಣೆ 
ಸರ್ವದರ್ಪಕೂ
ನುಡಿಯ ಮಿಡಿಯೆ 
ಮರಣ ಮೃದಂಗ,
ಮೌನತರಂಗ  ಗಂಗಾ ತರಂಗ