ಮ-ಮನಸಿನ,
ನೆ-ನೆಮ್ಮದಿ
*******
ಭಾವವೆಂಬ ಗೋಡೆಗಳಿಗೆ
ಜ್ಞಾನವೆಂಬ ಕಿಟಕಿಯಿಂದ
ಸ್ವಚ್ಛಗಾಳಿ, ಶುದ್ಧಕಿರಣ
ಒಳಗೆ ಸುಳಿಯೇ,
ದೇಹವೆಂಬ 'ಮನೆಗೆ'
ಸ್ವಾನಂದಾನುಭವವು
ಕರ್ತವ್ಯ
*****
ಬಂದದ್ದನ್ನು ಸ್ವೀಕರಿಸುವುದು
ಕರ್ತವ್ಯ
ಅದಕೆ ಆಶಿರ್ವಾದಿಸುವುದು
ಆದ್ಯ ಕರ್ತವ್ಯ
ವ್ಯಕ್ತಿತ್ವ-ಭಾವ
*********
ವ್ಯಕ್ತಿಯ ಹುಟ್ಟು
ಕಾಮದಿಂದಲಾದರು ,
ವ್ಯಕ್ತಿತ್ವದ ಹುಟ್ಟು
ಪ್ರೇಮದಿಂದಲೇ,
ಸಂಗೀತದ ಹುಟ್ಟು
ಭಾವದಿಂದಲಾದರು
ಭಾವದ ಹುಟ್ಟು
ಸಂಸ್ಕಾರದಿಂದಲೇ
************