Oct 24, 2011ನಮ್ಮ ತಪ್ಪಿಗೆ ಅನ್ಯರು  ಹೊಣೆಯೇ...??..!!!!!!!  
     
 "ಮಾತೂ ಆಡಿದರೆ ಹೋಯಿತು , ಮುತ್ತು  ಒಡೆದರೆ ಹೋಯಿತು" ಎಂಬ ಮಾತಿನಂತೆ
ನಾಲಿಗೆಯ ಪ್ರಾಮುಖ್ಯತೆ ವ್ಯಕ್ತಿತ್ವಕ್ಕೆ ಮೆರುಗು ಹಚ್ಚುವಂತಹದ್ದು.ಆದರೆ ಎಲ್ಲದಕ್ಕೂ 
ನಾಲಿಗೆಯೇ ಕಾರಣವಲ್ಲ ,ನಾಲಿಗೆ ಹೊರಳುವ ಮುನ್ನ ವಿವೇಚನೆಯದೇ  ಪ್ರಮುಖ ಪಾತ್ರ .  

      ದಾಸರ ವಾಣಿಯಲ್ಲೂ "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ "                                                ಎಂದುನುಡಿದಿದ್ದಾರೆ.ಇನ್ನು ದಿನನಿತ್ಯದ ಮಾತಿನಲ್ಲಿ ಹೇಳುವುದಾದರೆ, ಈಗೊಂದು ಮಾತನಾಡಿ,                           
ಮರುಕ್ಷಣ ಅದನ್ನೇ ತಿರುಚಿ ಹೇಳುವರು.ಅಂತಹವರಿಗೆ "ಎರಡು ನಾಲಿಗೆ, ಎನ್ನುವರು.ಇನ್ನು ಕೆಲವರು
ಹಿಂದೆ ಮುಂದೆ ಯೋಚಿಸದೆ ಕೆಟ್ಟದಾಗಿ, ಕುಹಕ ಅಪಹಾಸ್ಯ ವ್ಯಂಗ್ಯವಾಡಿ ನೋವುಂಟು ಮಾಡುವರು.
ಅಂತಹವರಿಗೆ"ಅವರನಾಲಿಗೆ ಸರಿ ಇಲ್ಲಪ್ಪ"ಎಂದುಕೊಂಡು ಅವರೊಂದಿಗೆ ಹೆಚ್ಚು ಮಾತನಾಡಲೇ
 ಹಿಂಜರಿಕೆಯಾಗುವುದು . 

       "ಎತ್ತಿಗೆ ಜ್ವರ ಬಂದರೆ ,ಎಮ್ಮೆಗೆ ಬಾರೆ", ಎಂಬಂತೆ , ಮನಸಿನ ಸೂಚನೆಯ ಮೇರೆಗೆ ತನ್ಮೂಲಕ
ಹೊರಹಾಕಲ್ಪಡುವ  ನಾಲಿಗೆಯನ್ನುಧೂಶಿಸುವುದು ಎಷ್ಟುಸರಿ...?     "ಅಲಬಲ  ಪಾಪಿಯ    ತಲೆಯಮೇಲೆ ,"                                      
ಅನ್ನೋ ಹಾಗೆ. ಮನಸ್ಸಿನಲ್ಲಿ ನಡೆಯುವ ಮಂಥನವನ್ನು ಪ್ರಾಮಾಣಿಕವಾಗಿ ಚಾಚು ತಪ್ಪದೆ
ಆಡುವುದರ ಮೂಲಕ, ಮನಸಿನೊಂದಿಗೆ  ಸಹಕರಿಸುವುದು ತಪ್ಪು. ಎನ್ನುವುದಾದರೆ,
 "ಬಾಯೇ ಬಿಚ್ಚೋಲ್ಲ,
"ಮಾತನಾಡೋಲ್ಲ -ಮನೆ ವುಳಿಯೋಲ್ಲ" 
ಮಳ್ಳಿ ಹಾಗೆ ಮಾಡಿದ್ದೆ ಗೊತ್ತಾಗೊಲ್ಲ.
ಅವರೇನು ಮೂಕರೆ,..?
ನಾಲಿಗೆ ಬಿದ್ದು ಹೋಗಿದೆಯೇ,ಇರೋದನ್ನ ಹೇಳೋಕೇನು ಧಾಡಿ.ಹೀಗೆ.ಏನೆಲ್ಲಾ ವೃಥಾ ಅಪವಾದಗಳನ್ನು ,
ನಿಂಧನೆಯನ್ನು ಕೇಳಬೇಕಾಗುವುದು.ಇನ್ನು ಹೇಗಪ್ಪ ಇವರ ನಡುವೆ ಏಗೋದು.
ಎಂದು ತೊಳಲಾಡುವ  ಪರಿಸ್ಥಿತಿ ನಾಲಿಗೆಯದು.
ಅದೂ ಸರಿಯಲ್ಲವೇ..?ಮನಸ್ಸಿನಂತೆ ಮಾತು ಸಹ . .ಮನಸಿನ ಮಾತನ್ನು ಶಿರಸಾವಹಿಸಿ
ಪಾಲಿಸುವುದಷ್ಟೇ ನಾಲಿಗೆಯ ಕಾಯಕ.  ಇದರಲ್ಲಿ ನಾಲಿಗೆಯದೇನು ತಪ್ಪಿದೆ ..?
               
    ಅದರದೇ ಆದಂತಹ ಜವಾಬ್ಧಾರಿಯುತವಾದ ಕಾಯಕವೆಂದರೆ ಮೂಗಿನಿಂದ
ಆಘ್ರಾಣಿಸಿದ್ದನ್ನು ,ಕಣ್ಣಿನಿಂದ ಆಕರ್ಷಿಸಿದ್ದನ್ನು ಆಸ್ವಾದಿಸಿ ರುಚಿಯ ಅನುಭವವನ್ನು
ಅರುಹುವುದು.ಅದನ್ನು ನಿರ್ವಂಚನೆಯಿಂದ ನಿರ್ವಹಿಸುತ್ತಿದೆಯಲ್ಲ.
    ಪಾಪ, ದೇಹವೇನಾದರು ಸಕ್ಕರೆ ಕಾರ್ಖಾನೆಯಾಗಿದ್ದಾರೆ ಸಿಹಿಯನ್ನು ಸವಿಯುವ ಆಸೆಯನ್ನು
ಸಹಿಸಿಕೊಂಡು,  ಸುಮ್ಮನಿರುವುದು ಅದೆಷ್ಟು ಕಷ್ಟ ಎಂಬುದು ಅದಕ್ಕೆ ಗೊತ್ತು.ಹಾಗೆಯೇ ರಕ್ತ 
ಪಿಪಾಸಿಯಾಗಿದ್ದರೆ ಉಪ್ಪಿಲ್ಲದ ಊಟವನ್ನು ಸಹಿಸುವ ಗ್ರಹಚಾರ.ಹಾಗೊಂದು ಪಕ್ಷ  ದೇಹದ
ಪರಿಸ್ಥಿತಿಯನ್ನು ,ಮನಸಿನ ಸಂದೇಶವನ್ನು ಕಡೆಗಣಿಸಿ ರುಚಿಯಾಗಿದೆಯೆಂದು ಕಣ್ಣಿಗೆ ಕಂಡಿದ್ದನ್ನು
ತಿಂದಿದ್ದೆಯಾದರೆ , ಖಾಯಿಲೆ ಉಲ್ಬಣಿಸಿದಾಗ" ಹಯ್ಯೋ ಈ ಹಾಳೂನಾಲಿಗೆ ಚಪಲ ನೋಡಿ,
ಹೀಗಾಯಿತು. ಅಂತ ಆಗಲೂ ನಾಲಿಗೆಗೆ ಬೈಗುಳ ತಪ್ಪಿದ್ದಲ್ಲ.ಅಂತಹಾ ಸಂಧರ್ಭದಲ್ಲಿ ಕಹಿಯನ್ನು
ಪ್ರೀತಿಯಿಂದಲೇ ಆಸ್ವಾದಿಸಿ ಆರೋಗ್ಯವನ್ನು ಕಾಪಾಡುವುದು.

         ಇನ್ನು ಭಾಷೆಯ ವಿಷಯ ಬಂದಾಗ  ನಾಲಿಗೆಯ ಪಾತ್ರ ಬಹಳ   ಮುಖ್ಯವಾದದ್ದು.
"ನಾಲಿಗೆ ಕುಲ ಹೇಳುತ್ತೆ" "ಎನ್ನುತ್ತಾರೆ .  ಆದರೆ ಪರಿಸರಕ್ಕೆ ತಕ್ಕಂತೆ ಭಾಷೆಯೂ ಸಹ.
ಪರಿಸರ, ಪರಿಸ್ಥಿತಿ, ಪ್ರತಿಕೂಲವಾಗಿದ್ದಲ್ಲಿ  ಜಾತಿ ಕುಲ ಧರ್ಮ ವಿಧ್ಯೆ  ಎಲ್ಲವನ್ನು ಮರೆಸಿ ,
ಮೀರಿಸುವಂತಹ ಭಾಷೆಯನ್ನೂ ಹೊರಹೊಮ್ಮಿಸುವುದೇ ಈ ನಾಲಿಗೆಯ ವೈಶಿಷ್ಟ್ಯತೆ.
ಆದರೆ ಕೆಲವು ಉತ್ತಮ ಕುಲಜರೆ ಅವಾಚ್ಯ ಶಬ್ದ ಗಳನ್ನೂ ಸುಲಲಿತವಾಗಿ ಬಳಸಿ ಕೀಳಾಗಿ
ಮಾತನಾಡುವುದರ ಮೂಲಕ ಅವರ ಜನ್ಮಜಾತಿಯ ಬಗ್ಗೆಯೇ ಅನುಮಾನಿಸುವಂತೆ
ಮಾತನಾಡುತ್ತಾ ನಾಲಿಗೆಗೆ ಕಳಂಕ ಹಚ್ಚುತ್ತಾರೆ.ಇನ್ನು ಕೆಲವರು  ವ್ವಕ್ಚಾತುರ್ಯದಿಂದಲೇ  
ತಮ್ಮಉತ್ತಮ  ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ  
  
        ಕೆಲವರ  ಭಾಷೆಯಿಂದಲೇ ಇವರು  ಸಾಹಿತಿಗಳೋ ಸಂಗೀತಗಾರರೋ,ವಿಜ್ಞಾನಿಗಳೋ  ,                                     ಸಾಧು ಸಂತರೋ,ಗ್ರಾಮೀಣ ಪರಿಸರದಿಂದ ಬಂದವರೋ,ನಗರದ ಪರಿಸರದಿಂದ ಬಂದವರೋ,
ವಿಧ್ಯಾವಂತರೋ,ಅವಿಧ್ಯಾವಂತರೋ ,ಎಂಬುದು ವ್ಯಕ್ತವಾಗುತ್ತದೆ.ಇನ್ನು ಕೆಲವರದು ,ಇಬ್ಬಗೆಯ
ಮನಸ್ಥಿತಿ. ಮನಸ್ಸಿನಲ್ಲಿದ್ದಂತೆ ಮಾತೂ ಹೊರಹೊಮ್ಮಿದರೆ ಅವರ ವ್ಯಕ್ತಿತ್ವಕ್ಕೆ
ಕುಂದಾದಿತು. ಎಂಬುದನ್ನು ಅರಿತು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಮಾತನಾಡಲು
ಈ ನಾಲಿಗೆಯನ್ನು ಉಪಯೋಗಿಸಿಕೊಳ್ಳುತ್ತಾರೆ.ಇದರಲ್ಲಿ ನಾಲಿಗೆಯ ತಪ್ಪೇನಿದೆ. 
ಕೆಲವರಿಗೆ ತಮ್ಮ ತಪ್ಪನ್ನುಇನ್ನೊಬ್ಬರ ಮೇಲೆ ಹೊರಿಸಿ ತಾವು ಶಿಷ್ಟ ಸಭ್ಯರೆನ್ನಿಸಿ
ಕೊಳ್ಳುವುದು ಹುಟ್ಟುಗುಣ.ಅಂತೆಯೇ ಮನಸ್ಸಿನ ತಪ್ಪನ್ನು ನಾಲಿಗೆಯ ಮೇಲೆ
ಹೊರಿಸುವುದು  ಬಿಟ್ಟು, ವಿವೇಚನೆಯನ್ನು ಮನಸಿಗೆ ತಿಳಿಹೇಳುವುದು ಯೋಗ್ಯವಲ್ಲವೆ.

ಮಾತಿನಿಂ ನಗೆ ನುಡಿಯು
ಮಾತಿನಿಂ ಹಗೆ ಹೊಲೇಯು
ಮಾತಿನಿಂ ಸರ್ವಸಂಪದವು ಲೋಕಕ್ಕೆ
ಮಾತೆ ಮಾಣಿಕವು  ಸರ್ವಜ್ಞ,
ಸರ್ವಜ್ಞನ ವಚನದಂತೆ ವಿವೇಚನೆಯ ನುಡಿ ಆರೋಗ್ಯಕರ

ಆರಯ್ದು ನಡೆವನು
ಆರಯ್ದು ನುಡಿವವನು
ಆರಯ್ದು ಅಡಿಯನಿಡುವವನು
ಲೋಕಕ್ಕೆ ಆರಾಧ್ಯನಕ್ಕು ಸರ್ವಜ್ಞ  

ಅರಿತು ಆಡುವವರು ಆರಾಧಕರಾಗುವರು.ಅದು ಬಿಟ್ಟು ಅನಿಸಿದ್ದೇ ಆಡುವುದು ,
ಅನಿಸಿಕೆ ವ್ಯಕ್ತ ಪಡಿಸಲು ಸಹಕರಿಸಿದ ನಾಲಿಗೆಯನ್ನು ಧೂಶಿಸುವುದು ಸಮಂಜಸವೇ ...?

ಲೋಕದಾ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ಮಾನವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವಾ ಸಂತೈಸಿಕೊಳ್ಳಿ ,

ಎನುವ ಬಸವಣ್ಣನವರ  ವಚನದಂತೆ ಎಲುಬಿಲ್ಲದ ನಾಲಿಗೆ ನಾವು
ಹೊರಳಿಸಿದಂತೆ ಹೊರಳುವುದು.ಅಂತಹ ನಿಯತ್ತಿನ ನಾಲಿಗೆಯನ್ನು
ಅಪವಾದಕ್ಕೆ ಗುರಿಮಾಡುವುದು ತರವೇ  ....???????? ನೀವೇ ಹೇಳಿ..?
ವಿವೇಚನೆಗೆ ಬೆಳಕನ್ನು ನೀಡುವ ಮೂಲಕ ನಾಲಿಗೆಯನ್ನು ಅಪವಾದದಿಂದ
ಪಾರು ಮಾಡೋಣವೆ..???  
ಕತ್ತಲಿಂದ ಬೆಳಕಿನೆಡೆ ನಡೆಸುವ ಬೆಳಕಿನ ಹಬ್ಬ ,
ಹಬ್ಬಗಳ ರಾಜ
*** ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು****