Oct 10, 2015

ಇರು ನೀ ಗಂಗೆ ಹಾಂಗ 

ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ
ಹಾಂ ಎಂದೊಡೇ
ಹಾವಾಗಿ ಕಚ್ಚುವನು ಎಚ್ಚರ
ಹಮ್ಮಿನ ಅಹಂಮ್ಮಿನ 
ಶೃಂಖಲೆಯ ಶೃಂಗದೇ
ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,  
ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ
ಕೀವು ರಕ್ತ ಸೋರಿ
ರಣವಾಗಿ ನೊಂದು ಬೆಂದು
ಹಾರಾಡಿ ನೆಕ್ಕಲು ಕೂರುವ
ನೊಣಕೆ ನಿರ್ಲಿಪ್ತೆ,  
"ನಾ... ನಿರದ ನೀನು"
ಸೈರಣೆಯ  ವಿತರಣೆ 
ಸರ್ವದರ್ಪಕೂ
ನುಡಿಯ ಮಿಡಿಯೆ 
ಮರಣ ಮೃದಂಗ,
ಮೌನತರಂಗ  ಗಂಗಾ ತರಂಗ  




 
 
 

5 comments:

  1. ಬದುಕಿನ ವಾಸ್ತವವೇ ಇಲ್ಲಿ ಕವನತರಂಗವಾಗಿದೆ!

    ReplyDelete
  2. ಅರ್ಥಮಾಡಿಕೊಳ್ಳಲು ತಿಣುಕಾಡಬೇಕಲ್ಲ! [ಶೃಂಖಲೆಯ ಶೃಂಗದೇ
    ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ] ಇದಕ್ಕೆ ಸ್ವಲ್ಪ ವಿವರಣೆ ಕೊಡುವಿರಾ?

    ReplyDelete
  3. ಸುನಾಥ್ ಸರ್ ತಮ್ಮ ಉತ್ತಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  4. ಹುಟ್ಟಿದ ಮನೆಯಿಂದ ಮೆಟ್ಟಿದ ಮನೆಯಲ್ಲೇ ಅಲ್ಲದೇ ಎಲ್ಲೂ ಯಾವುದನ್ನೂ,ಅನ್ಯಾಯಗಳನ್ನೂ ಸಹ ಪ್ರತಿಭಟಿಸುವಂತಿಲ್ಲ. ಪ್ರತಿಭಟಿಸಿದ್ದೆ ಆದರೆ ಉಳಿಗಾಲವಿಲ್ಲ. ಒಟ್ಟಾರೆ ಕಟ್ಟು ಕಟ್ಟಳೆಗಳ ಬೆಟ್ಟದಡಿ ಗಂಗೆ ಹಾಗಿದ್ದರೆ ಹೇಗೋ ಬದುಕಬಹುದು.
    ಸರ್ ,ನಿಮ್ಮ ಉತ್ತಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ReplyDelete
  5. ಸುಂದರ ಕಲ್ಪನೆ..
    ..
    ಕನ್ನಡ ಕಂದನ ಕನ್ನಡದ ತಾಣ ಅದುವೇ https://t.me/spn3187 www.spn3187.blogspot.in ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ

    ReplyDelete