Nov 14, 2010

  ಮಾಡಬೇಡಿ ನನ್ನ ದೇವರು 


 ದೇವನೆಂದು ಹೊಳೆವಂತೆ
 ತೊಳೆದು ಗುಡಿಯಲಿಟ್ಟರು
 ಎಣ್ಣೆ ನೀರು ಬಿಟ್ಟರು,  
 ಹೂಹಣ್ಣು ಇಟ್ಟರು



 ಗಂಧ ಹಚ್ಚಿ ,ಮಂದ, ಹಣತೆ  
 ಬೆಳಗಿಸಿಟ್ಟರು.ಕೈ ಮುಗಿದು
 ಕಣ್ಣ ಮುಚ್ಚಿ, ಬೇಡಿಕೆ ಮುಂದಿಟ್ಟರು
 ಇಚ್ಛೆ ಈಡೇರದಾಗ ,ಕಲ್ಲೆಂದು ಬಿಟ್ಟರು



 ಗರ್ಭ ಗುಡಿಯಲ್ಲಿ ಕೂಡಿ, 
 ಬೀಗ ಜಡಿದುಬಿಟ್ಟರು
 ಹೂಹಣ್ಣು ಎಣ್ಣೆ ಕಾಯಿಕದ್ದ,
 ಖೈದಿಯಾಗಿಟ್ಟರು


 ನಿಮ್ಮನೇ.......ನಾ ಬೇಡುವೆ
 ಮಾಡಬೇಡಿ ನನ್ನ ದೇವರು


ನಿಂತು ನಿಂತು ಕಾಲು ನೋವು
 ಕುಂತು ಕುಂತು ಕೀಲುನೋವು
 ತಾಳಲಾರೆ ಗುಡಿಯ ಕಾವು


 ಅರಿವರಾರು ನನ್ನ ನೋವು
 ಮಾಡ ಬೇಡಿ, ನನ್ನ ದೇವರು.
 ಹೊಡೆದಾಡಬೇಡಿ, ನನ್ನ
 ನೆಪವ ಹೂಡಿ ಎಲ್ಲರೂ.  

--

12 comments:

  1. ಪ್ರಾಸ ಲಾಲಿತ್ಯ ಸೊಗಸಾಗಿದೆ. ದೇವರ ಅಳಲು ಚೆನ್ನಾಗಿದೆ.

    ReplyDelete
  2. ಸೀತಾರಾಂ ಸರ್ ರವರೆ,ನಮಸ್ಕಾರ ,ನಾನಿನ್ನು ಎಡಿಟಿಂಗ್ ಕೂಡ ಮುಗಿಸಿಲ್ಲ,ಅಷ್ಟರಲ್ಲೇ ನಿಮ್ಮ ಉತ್ತಮ ಪ್ರತಿಕ್ರಿಯೆ ರವಾನಿಸಿದ್ದೀರಿ.ನಿಮ್ಮ ಶ್ರೀಘ್ರ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  3. ಕಲಾವತಿಯವರೆ,
    ತು೦ಬಾ ಚೆನ್ನಾಗಿ ಬರೆದಿದ್ದೀರಿ.

    ReplyDelete
  4. ಕಲಾವತಿಯವರೆ, ಎಡಿಟಿ೦ಗ್ ಆಗಿದೆ ಅನ್ಕೋತೀನಿ..! ಮಕ್ಕಳು ಪದ್ಯ ಹೇಳುವ೦ತೆ ಪ್ರಾಸಬದ್ದವಾಗಿ ಕವನವನ್ನು ರಚಿಸಿ ಉತ್ತಮ ವಿಚಾರವನ್ನು ಕೊಟ್ಟಿದ್ದೀರಿ.

    ಶುಭಾಶಯಗಳು
    ಅನ೦ತ್

    ReplyDelete
  5. ದೇವರಲಿ ನಾವು ಬೇಡ್ಕೊಬೇಕು ಇಲ್ಲಿ ದೇವರೇ ನಮ್ಮ ಹತ್ರ ಬೇಡಿಕೊಳ್ತಾ ಇದೇ ಹ್ಹ ಹ್ಹ ಹ್ಹ ನಿಜ ಅನಿಸುತ್ತೆ ನಿಮ್ಮ ಕವನದ ಅರ್ಥ

    ReplyDelete
  6. ಮನಮುಕ್ತ ರವರೆ,ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

    ReplyDelete
  7. ಅನಂತರಾಜ್ ಸರ್ ರವರೆ, ಈಗ ಎಡಿಟಿಂಗ್ ಮುಗಿದಿದೆ. ತಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  8. ಚುಕ್ಕಿ ಚಿತ್ತಾರದವರೆ,ಪ್ರಸ್ತುತ ಪರಿಸ್ಥಿತಿ ಹಾಗೆಯೇ allave.

    ತಮ್ಮ ಉತ್ತಮ ಅಭಿಪ್ರಾಯಕ್ಕೆ ಧನ್ಯವಾದಗಳು

    ReplyDelete
  9. ಮಂಜು ರವರೆ,ದೇವರಂತಿರುವ ಕೆಲವು ಮನುಜನ ಸ್ಥಿತಿಯು ಹೀಗೆ ಅಲ್ಲವೇ?ನಿಮ್ಮ ಉತ್ತಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ReplyDelete
  10. @ಕಲಾವತಿ ಯವರೇ,
    ವಿಡ೦ಬನಾತ್ಮಕ ಕವನ! ದೇವರ ಅಳಲು ಚೆನ್ನಾಗಿದೆ!

    ReplyDelete
  11. ಪ್ರಭಾಮಣಿಯವರೇ,ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.ಹೀಗೆ ಬರುತ್ತಿರಿ.....

    ReplyDelete