Jan 8, 2011

ನ್ಯೂಯಾರ್ಕ್ ನ  ನಯಾಗರ ಜಲಪಾತ







                                       
ನ್ಯೂಯಾರ್ಕ್ ನ  ನಯಾಗರೇ


ನ್ಯೂಯಾರ್ಕ್ನಿಂದ ನಯಾಗರ ಫಾಲ್ಸ್ ಗೆ ಹೋಗಲು  ಸುಮಾರು ೬ 
ಗಂಟೆಗಳು ಕ್ರಮಿಸಬೇಕಾಗುವುದು.ನಮ್ಮ ಮಗಳ ಮನೆ  ಕಾರ್ನಿಂಗ್ ನಲ್ಲಿ.
ಹಾಗಾಗಿ ನಾವು ಕಾರ್ನಿಂಗ್ನಿಂದ ೩ ಗಂಟೆ ಪ್ರಯಾಣ ಮಾಡಿ  
ಬಫೆಲೋ ತಲಪಿದೆವು.ಅಲ್ಲಿಂದ ಮುಂದೆ ಎಡಭಾಗಕ್ಕೆ ಅರ್ಧ ಗಂಟೆ ಕ್ರಮಿಸಿದಾಗ ಬಹಳ ದೊಡ್ಡದು ಹಾಗು ಸುಂದರವಾದ  ನಯಾಗರ ನದಿಗೆ 
ನಿರ್ಮಿಸಿರುವ ಸೇತುವೆ.ಕಾರಿನಲ್ಲೇ ಕುಳಿತು ಸೊಬಗಿನ ಸೇತುವೆಯ
ಛಾಯಾಚಿತ್ರವನ್ನು ಸೆರೆ ಹಿಡಿದೆವು.ಅಲ್ಲಿಂದ ಮುಂದೆ ಕಾರ್ ಪಾರ್ಕಿಂಗ್ 
ಸ್ಥಳವನ್ನುಸಮೀಪಿಸುತ್ತಿದ್ದಂತೆಬಿಳಿ ಎಳ್ಳು ಎರೆಚಿದಂತೆ ಬೆಳಗ್ಗೆ ಹತ್ತರ 
ಸಮಯದಲ್ಲಿ ಬೀಳುವ ಬಿಸಿಲಲ್ಲಿ ಮಳೆಹನಿ ಮುಖಕ್ಕೆಮಂತ್ರಾಕ್ಷತೆ 
ಪ್ರೋಕ್ಷಿಸುತ್ತ ಸ್ವಾಗತಿಸಿತು.ಆದರೆ ಅಲ್ಲಿ ಸಮಯ ಮಧ್ಯಹಾನ್ನ ೩ ಗಂಟೆ. ಅರೆ ಏನಿದು ಇದ್ದಕ್ಕಿದ್ದಂತೆ ಬಿಸಿಲಲ್ಲಿಮಳೆ ಹನಿಯಾಗುತ್ತಿದೆಯಲ್ಲ.
ಎಂದುಕೊಂಡೆಸಾಗಿ  ಕಾರ್ ರ್ಪಾರ್ಕ್ ಮಾಡಿಇಳಿದೆವು.ಆಹಾ ಶುರುವಾಯಿತು 
ನೋಡಿ ಕೈ ಬಿಡಲಾಗದಷ್ಟುಕುಳಿರ್ಗಾಳಿ, ಛಳಿ.ಮುಂದೆ ಹೋಗುತ್ತಾ ಇನ್ನು ಛಳಿ ಹೆಚ್ಚುತ್ತಲೇ ಹೋಯಿತು.ಜೊತೆಗೆ ಮುಖಕ್ಕೆ ರಾಚುವ ಮಳೆಹನಿ.ಮುಖಕ್ಕೆಕೈ  ಅಡ್ಡ ಗಟ್ಟ ಬೇಕು.ಕಟ್ಟಿದ ಕೈಬಿಟ್ಟರೆ ನಡುಗಿಸುವ  ಛಳಿ.ವಿಧಿ ಇಲ್ಲ.ಆದರೆ ಸ್ವಲ್ಪ ಹಿಂದೆಯೇ ಒಂದೆಡೆ ಮುಖ ಮುಚ್ಚು ವಂತೆ ಪಾರದರ್ಶಕವಾದ ಮುಸುಕಿರುವ
ಬೆಚ್ಚನೆಯ ಕೋಟ್ ಮಾರಾಟ ಮಾಡುತ್ತಿದ್ದರೂ ಅದರ ಅವಶ್ಯಕತೆ ಇರುವುದಿಲ್ಲ
ವೆಂದುಕೊಂಡು ಅಲಕ್ಷ್ಯ ಮಾಡಿ ಬಂದಿದ್ದೆವು.ಜೊತೆಗೆ ಸ್ವೆಟ್ಟರ್ ಗಳನ್ನೂತಂದಿರಲಿಲ್ಲ. ನನಗಂತೂ ಛಳಿ ತಡೆಯಲಾಗದೆ ನನ್ನ ಮಗಳ ಶಾರ್ಟ್ ಕೊಟನ್ನೇ  ಹಾಕಿಕೊಂಡೆ. ಆದರೆ ಅಷ್ಟೊಂದು ರಾಚಿ ಹೊಡೆಯುತ್ತಿರುವುದು ಮಳೆಹನಿಯಲ್ಲ....!
ನಯಾಗರೇ ಮೇಲಿನಿಂದ ಧುಮ್ಮಿಕ್ಕುವ ರಭಸಕ್ಕೆ ಮೇಲಕ್ಕೆ ಹೊಮ್ಮಿ 
ಚಿಮ್ಮುವ ಹನಿಗಳೆಂದು ತಿಳಿದು ಅಚ್ಚರಿಯಾಯಿತು.ಸುಮಾರು ಒಂದು 
ಕಿಲೋಮೀಟರ್ ದೂರದಿಂದಲೇ ಮಂತ್ರಾಕ್ಷತೆಯಂತೆ ತುಂತುರು 
ಹನಿಗಳನ್ನು ಪ್ರೋಕ್ಷಿಸುತ್ತ,ಗಡಗಡ  ನಡುಗಿಸುತ್ತಲೇ ತನ್ನೆಡೆಗೆ ಸ್ವಾಗತಿಸುವ   
ನಯಾಗರ  ಜಲಪಾತದ ವೈಖರಿ ವಿಸ್ಮಿತವೆನಿಸಿತು.ಹಸಿರು ವನರಾಶಿಯಿಂದ ತಬ್ಬಿದ ವಿಶಾಲವಾದ ಜಲರಾಶಿ ಶಾಂತವಾಗಿ ಹರಿಯುತ್ತಾ ಪಾತಾಳಕ್ಕೆ 
ಧುಮುಕಿ ಭೋರ್ಗರೆದು ಮೇಲೆಚಿಮ್ಮಿ ನೊರೆನೊರೆಯಾಗಿ ಹಾಲ ಹೊಳೆಯಂತೆ 
ಹರಿಯುವ ನಯಾಗರೆಯ ಸೊಬಗು ರಮ್ಯಮನೋಹರ.  ಆಚಿನ ದಡವನ್ನು ಹಸಿರಿನಿಂದ ತಬ್ಬಿದ ಕೆನಡ.ಕೆನಡಾದರೊಟೆಟ್ ರೆಷ್ಟೊರೆಂಟ್ ದೃಶ್ಯವನ್ನು 
ಇಚೆಯ ದಡದಲ್ಲೇ ನಿಂತು ಕಾಣಬಹುದು.ಸಂಜೆ ಮೂರರ ಸಮಯ ಮೋಡ  
ಕವಿದು ಕತ್ತಲಾದಂತೆ.ಕ್ಷಣದಲ್ಲೇ ಮುಂಜಾವಿನ ಅರುಣೋದಯದ ಬೆಚ್ಚನೆಯ ಹೊದಿಕೆ ಹೊದಿಸಿದಂತೆ ಎಳೆಬಿಸಿಲ ಕಿರಣಗಳು  ಹೊಮ್ಮಿ,ಚಿಮ್ಮುವ  ಹನಿಗಳ  
ತುಂತುರಿನೊಡನೆ ಮೋಹಕವಾದ ಕಾಮನಬಿಲ್ಲು ಕಣ್ಮನಸೆಳೆದು ಪರವಶಗೊಳಿಸುವುದು.  
  ದಡದ ಹಸಿರ ಹಾಸಿನಲ್ಲೇ ವಿರಮಿಸಬೇಕೆನಿಸುವುದು. ಕ್ಷಣದಲ್ಲೇ
ಮತ್ತೇ ಮಂಜು ಮುಸುಗಿದಂತೆ,  ಮೋಡ ಕವಿದು ಕತ್ತಲಾದಂತೆ ಭಾಸವಾಗುವುದು.ನಯಾಗರ ಜಲಪಾತಕ್ಕೆ  ಸೆನ್ಸ್ ಗಳನ್ನೂ ಎಸೆಯುತ್ತಾರೆ.
ಯಾರದ್ದು ಹೆಚ್ಚಿನ ದೂರಕ್ಕೆ ಹೋಗಿ ಬಿಳುವುದೋ ಅವರು ಅಷ್ಟು ಯಶಸ್ಸು ಸಾಧಿಸುತ್ತಾರೆ. ಎನ್ನುವುದು ಕೆಲವರ ನಂಬಿಕೆ.ಅದೆಷ್ಟು ನಿಜವೋ, ನಾವು ಹಾಗೆ
ಎಸೆದು ಸಂತಸಪಟ್ಟೆವು.ಅಲ್ಲಿನ  ಸುಂದರ ಮನಮೋಹಕ ದೃಶ್ಯವನ್ನು
ಕಣ್ ಮನತುಂಬಿಕೊಂಡು ಸಮಯವಾಗುತ್ತಿದ್ದುದ್ದರಿಂದ ಮನಸಿಲ್ಲದ 
ಮನಸ್ಸಿನಿಂದಲೇ  ದಡದಿಂದ ಮೆಟ್ಟಿಲೇರಿ  ಮೇಲೆಬರುವಾಗ ಅಲ್ಲೇ ಜನಗಳ ಗುಂಪೊಂದರ  ನಡುವೆ  ಸುಂದರ  ಎತ್ತರದ ನವಯುವತಿಯೊಬ್ಬಳು ತೆಳು
ಮಾಸಲು ಕಂದುಬಣ್ಣದ ಮ್ಯಾಕ್ಸಿ ಧರಿಸಿ ನಿಂತಿದ್ದಳು.
ಜೊತೆಯಲ್ಲಿ ಎದುರಿಗೆ ಒಬ್ಬ ತುಸು ಕುಳ್ಳೆನಿಸುವ ಗುಲಾಬಿ ಬಣ್ಣದ ನವಯುವಕ ಕಪ್ಪು ಸೂಟುಧರಿಸಿನಿಂತಿದ್ದನು.ನಡುವೆ  ಒಬ್ಬರು ಸ್ವಲ್ಪಹಿರಿಯರಂತಿದ್ದ 
ಕಪ್ಪುಕೋಟುಧಾರಿ ಒಂದುಪುಸ್ತಕ ಕೈಲಿ ಹಿಡಿದು ಏನನ್ನೋ ಹೇಳುತ್ತಿದ್ದರು.
ಸುತ್ತಲು ಹತ್ತು ಹನ್ನೆರಡು ಮಂದಿ ಯುವಕರು ಯುವತಿಯರು
ಕುತೂಹಲದಿಂದ ನಡುವೆ ಇದ್ದ ಮೂವರನ್ನು ಸುತ್ತುವರೆದಿದ್ದರು.ನಡುವೆ  ನಿಂತಿದ್ದ ಹಿರಿಯರು ಏನೋ ಹೇಳಿದರು ಆಯುವಕ ಯುವತಿ ಒಬ್ಬರನ್ನು ಒಬ್ಬರು ಅಪ್ಪಿಕೊಂಡರು.ಸುತ್ತಲು ಸುತ್ತು ಗಟ್ಟಿದ್ದವರು ಹೋ ಎಂದೂ ಹರ್ಷೋದ್ಗಾರ ದಿಂದ ಕೂಗುತ್ತ ಅವರಿಗೆ ಕೈ ಕುಲುಕಿ  ಶುಭಾಷಯ ಹೇಳುತ್ತಿದ್ದರು.ನಂತರ 
ನಮಗೆ ತಿಳಿಯಿತು ಇಲ್ಲಿ ನಡೆಯುತ್ತಿರುವುದು ವಿವಾಹವೆಂದು.೫ ನಿಮಿಷಗಳಲ್ಲಿ ಅಲ್ಲೊಂದು ಸರಳ ವಿವಾಹ ನಡೆದಿತ್ತು.ಅಭ್ಯಾಗತರಾಗಿ  ನಾವೂ  ಅವರ ಸಂತಸದಲ್ಲಿ ಪಾಲ್ಗೊಂಡೆವು. ವಿವಾಹವನ್ನು ವೀಕ್ಷಿಸಿ ಸಂತಸವಾಯಿತು.
ಮೇಲೇರಿ ಬರುತ್ತಿದ್ದಂತೆ  ವಿಶಾಲವಾದ  ಹಸಿರ ಹಾಸಿನಲ್ಲಿ  ಸ್ವಚ್ಚಂದವಾಗಿ ಯಾರ ಅಡ್ಡಿ ಆತಂಕವು ಇಲ್ಲದೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಸುಂದರ ಬೆಳ್ಳಕ್ಕಿಗಳು.ದೊಡ್ಡ ದೊಡ್ಡ ಮರದ ನೆರಳು. ನಾವು ಕ್ಯಾಮೆರ ದಲ್ಲಿ ಸೆರೆ ಹಿಡಿಯಲು 
ಹೋದರು  ಹಾರಿ ಹೋಗದೆ ತಮ್ಮಷ್ಟಕ್ಕೆ ತಾವು ವಿಹರಿಸುತ್ತಿದ್ದದ್ದನ್ನು ಕಂಡು ಅಚ್ಚರಿಯೂ ಆನಂದವು ಆಯಿತು. ಅವುಗಳ ವಿಹಾರ  ಪ್ರಕೃತಿ ಸೌಂದರ್ಯದ 
ಸೊಬಗನ್ನು ನೂರ್ಮಡಿಗೊಳಿಸಿತ್ತು  ಹೆಚ್ಚಿಸಲು ವಹಿಸಿರುವ ಶ್ರದ್ದೆ  ಮತ್ತು 
ಅಲ್ಲಿನಪರಿಸರ ಎಂಥಹಾ ಅರಸಿಕರನ್ನು  ಮಂತ್ರಮುಗ್ಧರನ್ನಾಗಿಸುವುದು. ಅಲ್ಲಿ ಸೆರೆಹಿಡಿದಿರುವ ಕೆಲವು ಛಾಯಾಚಿತ್ರಗಳು  ಇಲ್ಲಿವೆ.ಆ ಸೌಂದರ್ಯವನ್ನು ಕವನಿಸಲು ನನಗೆತಿಳಿದಂತೆನಿರೂಪಿಸಲುಪ್ರಯತ್ನಿಸಿದ್ದೇನೆ.ನಿಮ್ಮ ಸಲಹೆ 
ಸೂಚನೆಗಳೆನಾದರು  ಇದ್ದಲ್ಲಿ ಸದಾ ಸ್ವಾಗತ ಸ್ನೇಹಿತರೆ.                   
   


ನಯನಮನೋಹರೆ   ನಯಾಗರೇ
*************************************** 


ನಯನ ಮನೋಹರೆ ನಲಿಯುತ ಸಾಗಿರೆ     
ನಾರುಮಡಿಯ ಜಲಧಾರೆ
ಸಾವಿರ ನಿರಿಗೆಯ ಚಿಮ್ಮುತ ಕುಲುಕುತ
ನವಪಲ್ಲವಿಸಿಹಳು ನಯಾಗರೇ


ಶಾಂತ ಸಂಭ್ರಮೆ  ಭೋರ್ಗರೆಯುತ
ಧುಮ್ಮಿಕ್ಕುವ ರಭಸಕೆ ಹೊಮ್ಮುತ ಚಿಮ್ಮುವ
ಪನ್ನೀರು,ಮಂತ್ರಾಕ್ಷತೆ ತಣ್ಣನೆ ತುಂತುರು.
ನಡುಗಿಸುತಲೇ ಭರಸೆಳೆಯುವಳು


ಮೋಡ ಕವಿದಂತೆ,ಮಂಜು ಸುರಿದಂತೆ
ಕ್ಷಣದಲೇ ಇರುಳು ಸರಿದಂತೆ
ಅರುಣೋದಯ ತಾ ಹೊಳೆದಂತೆ


ಮುಸ್ಸಂಜೆಯಲಿ, ಮುಂಜಾನೆಯ                     
ಮೈಬೆಚ್ಚನೆಯ  ಹೊಂಗಿರಣದ  
ಹೊಂಬಿಸಿಲ ಹೊದಿಕೆಯ  ಪುಳಕ   


ನಡುವೆ ನಭದಿ ಬಾಗಿ  ನಗುವ  
ಮೋಹಕ  ಕಾಮನ ಬಿಲ್ಲಿನ ಮೋಡಿ 
ಹಚ್ಚನೆ ಹಸುರಲಿ ಬೆಳ್ಳಕ್ಕಿಯ ಆಟ
ರಮ್ಯಮನೋಹರ ಸುಂದರ ನೋಟ  

ವರುಣ ಇಳಿದಂತೆ,ಅರುಣ ಹೊಳೆದಂತೆ
ನೊರೆಹಾಲ ಜಲರಾಶಿಗೆ ವನರಾಶಿಯ ನಮನ
ಕಣ್ಮನ ತಣಿಸುವ ನಭೋವನ
ಕಡಲಾಚೆಯೇ ಕೈ ಬೀಸುವ ಕೆನಡ


ತನ್ಮಯಗೊಳಿಸುವ ನಿರ್ಮಲ ತಾಣ
ವಿಸ್ಮಯ ವೀಕ್ಷಿತ ನಿಸರ್ಗಧಾಮ

6 comments:

  1. ಕಲಾವತಿಯವರೇ,

    ನಯಾಗರದ ಪ್ರವಾಸ ಕತೆ ಚೆನ್ನಾಗಿತ್ತು.
    ಮತ್ತೆ ಅಲ್ಲಿ ಹೋಗಿ ಬಂದಾಗೆ ಆಯ್ತು.

    ReplyDelete
  2. ಕಲಾವತಿಯವರೆ,

    ನಯಾಗರ ಜಲಪಾತದ ಸು೦ದರ ವರ್ಣನೆ ನಯಾಗರ ನೋಡಿದ ಸ೦ತಸವನ್ನು ನೀಡಿತು.

    ಅನೇಕ ದಿನಗಳಿ೦ದ ಬ್ಲಾಗ್ ನಿ೦ದ ದೂರವಿದ್ದೆ.ನಿಮ್ಮ ಕಳಕಳಿಯ ಪ್ರಶ್ನೆಗೆ ಉತ್ತರಿಸುತ್ತಾ ಕಾರಣವನ್ನು ನನ್ನ ಬ್ಲಾಗ್ ನಲ್ಲಿ ಬರೆದಿದ್ದೇನೆ. ನಿಮ್ಮೆಲ್ಲರ ಎಲ್ಲಾ ಬರಹಗಳನ್ನೂ ನಿಧಾನವಾಗಿ ಓದುತ್ತೇನೆ.ನಿಮ್ಮ ಆತ್ಮೀಯ ಅನಿಸಿಕೆಗಳಿಗೆ ನಾನು ಆಭಾರಿ.

    ReplyDelete
  3. ಅಪ್ಪ ಅಮ್ಮ ಮನೆಯವರೇ ನಿಮ್ಮ ಮೆಚ್ಚುಗೆಯ ಹಾಗು ಶೀಘ್ರ ಪ್ರತಿಕ್ರಿಯೆಗೆ ಧನ್ಯವಾದಗಳು.ಆಗಾಗ ಬರುತ್ತಿರಿ.

    ReplyDelete
  4. ಮನಮುಕ್ತ ರವರೆ ನಿಮ್ಮ ಮೆಚ್ಚುಗೆಯ ಹಾಗು ಭಾವನಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬಹಳ ದಿನಗಳ ನಂತರ ಭೇಟಿ ನೀಡಿದ್ದೀರಿ ನಮಗೆ ಸಂತಸವಾಯಿತು. ಹೀಗೆ ಬರುತ್ತಿರಿ

    ReplyDelete
  5. ನಯಾಗರ ವರ್ಣನೆಯ ಕವನ ಸೊಗಸಾಗಿದೆ ಕಲಾವತಿಯವರೇ, ನೀವು ಹಾಸನಕ್ಕೆ ಬ೦ದಿದ್ದೀರಾ? ನನಗೆ ನಿಮ್ಮ ಮೊಬೈಲ್ ನ೦. ಇ-ಮೇಲ್ ಮಾಡಿ

    ReplyDelete
  6. ಪ್ರಭಾಮಣಿ ಯವರೇ ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ಹೌದು ನಾನು ಹಾಸನಕ್ಕೆ ಬಂದಿದ್ದೇನೆ.ಖಂಡಿತ ನನ್ನ ನಂಬರ್ ಇಮೇಲ್ ಮಾಡುತ್ತೇನೆ.

    ReplyDelete