Feb 27, 2011

     "ಮೂರ್ಖಳಾದಳೇಕೇ .......? "
 
 
ಕೆರಳಿ ಉರುಳಾಗದೇ
 
ಅರಳಿ  ನೆರಳಾಗಿ 
 
ಮರಳಿ ಮಾತೆಗೇ
 
ಮಾತೆಯಾಗುವ 
 
ಮಗಳನು, ಹಡೆವವಳೇ
 
ಹತ್ಯೆಗೈವ
 
        ಮೂರ್ಖಳಾಗುವಳೇಕೇ.....?...!
 
ಗಂಡೆಂಬ ಗುಂಡಿಗೆ
 
ಎದೆಯೊಡ್ಡುವ
 
         ಸಂಭ್ರಮಕೇ.......?...!

14 comments:

  1. ಕಲಾವತಿಯವರೆ...

    ಹೆಣ್ಣು ಬ್ರೂಣ ಹತ್ಯೆ ನಿಜಕ್ಕೂ ಅಕ್ಷಮ್ಯ ಅಪರಾಧ...

    ನಿಮ್ಮ ಕವನದ ಪ್ರತಿ ಸಾಲುಗಳು ಈ ನೋವನ್ನು ತುಂಬಾ ಚೆನ್ನಾಗಿ ಚಿತ್ರಿಸಿವೆ...

    ತಾನೊಂದು ಹೆಣ್ಣಾಗಿ..
    ಹತ್ಯೆಗೆ ಮುಂದಾಗುವಳೇಕೆ..?

    ReplyDelete
  2. ಪ್ರಕಾಶ್ ಸರ್ ರವರೆ ,ನಿಮ್ಮ ಶೀಘ್ರ,ಹಾಗು ಉತ್ತಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
    ಇಂದು ಎಪ್ಪತ್ತೈದು ಭಾಗದಷ್ಟು ತಂದೆ ತಾಯಿಯರಿಗೆ ಆಶ್ರಯ,
    ಆಧಾರ,ಅನುಕಂಪ, ಪ್ರೀತಿ ಮುಪ್ಪಿನಲ್ಲೂ ಸಿಗುತ್ತಿದೆ. ಎಂದರೆ, ಅದು ಹೆಣ್ಣುಮಕ್ಕಳಿಂದಲೇ.ಎಂದೂ ಸ್ಪಷ್ಟವಾಗಿದ್ದರು,ಏಕೆ ಮೂಢರಾಗುತ್ತಿರುವರೋ ಎಂಬುದೇ ವಿಶಾದನೀಯವಾಗಿದೆ.

    ReplyDelete
  3. ಸಮಾಜದಲ್ಲಿ ಹಲವಾರು ಜನರ ಇ೦ತಹ ಮೂರ್ಖತೆಗೆ, ಕ್ರೂರತೆಗೆ ಕೊನೆ ಎಲ್ಲಿ..?
    ಅನೇಕ ಸ೦ಪ್ರದಾಯಗಳು,ಹಣಕಾಸು ಸ೦ಧರ್ಭಗಳನ್ನು ಮು೦ದಿಟ್ಟುಕೊ೦ಡು ಜನರು ಇ೦ತಹ ಕುಕೃತ್ಯಗಳು ಸರಿ ಎ೦ಬುದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.ಇ೦ತಹ ಜನರು ಸ್ವತಃ ತಮ್ಮ ಮನೊಭಾವವನ್ನು ಆರೋಗ್ಯಕರ ರೀತಿಯಲ್ಲಿ ಬದಲಾಯಿಸಿಕೊಳ್ಳುವುದು ಅತ್ಯಗತ್ಯ.

    ಉತ್ತಮ ಸಾಲುಗಳು....

    ReplyDelete
  4. ಚೆನ್ನಾಗಿದೆ...ಎಲ್ಲಾ ವಿಭಾಗಗಳಲ್ಲೂ ಗಂಡಿಗೆ ಸರಿ ಸಮಳಾಗಿ ಮುಂದುವರಿಯುತ್ತಿರುವ ಈ ಕಾಲದಲ್ಲೂ ಹೆಣ್ಣು ಭ್ರೂಣ ಹತ್ಯೆ ಮುಂದುವರಿಯುತ್ತಿರುವುದು ವಿಷಾದದ ಸಂಗತಿ...

    ReplyDelete
  5. ಗಂಡೆಂಬ ಗುಂಡಿಗೆ ಎದೆಯೊಡ್ಡುವ ಸಂಭ್ರಮಕೇ.......?...!
    Hennu sigade... paradaaduva bhagyakke..! (vaasthavate) .. :(

    ReplyDelete
  6. ನಮ್ಮ ಸಮಾಜದ ಮೂಢತನ ಹಾಗು ಪುರುಷರ ದಬ್ಬಾಳಿಕೆ ಹೋಗುವವರೆಗೆ, ಇಂತಹದನ್ನು ತಡೆಯುವದು ಸಾಧ್ಯವಾದೀತೆ? ನಿಮ್ಮ ಕವನದಲ್ಲಿ ಈ ವ್ಯಥೆಯು ಸೊಗಸಾಗಿ ವ್ಯಕ್ತವಾಗಿದೆ.

    ReplyDelete
  7. ಮನಮುಕ್ತ ರವರೆ,ನಿಮ್ಮ ವಿಚಾರಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  8. ಅಶೋಕ್ ರವರೆ ನಿಮ್ಮ ವಿಚಾರಪರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  9. ಅನಂತರಾಜ್ ಸರ್ ರವರೆ ,ಈಗಾಗಲೇ ಹೆಣ್ಣಿಗಾಗಿ ಅಲೆದಾಟವಿದ್ದರು, ಹೆಣ್ಣಿನ ಶೋಷಣೆ ,ಹೆಣ್ಣು ಭ್ರೂಣಹತ್ಯೆ ನಿರಂತರವಾಗಿ ಸಾಗುತ್ತಲೇ ಇರುವುದು ವಿಶಾದ. ನಿಮ್ಮ .ವಿಚಾರಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  10. ಸುನಾಥ್ ಸರ್ ರವರೆ,ಈ ವಿಷಯದಲ್ಲಿ ಮುಖ್ಯವಾಗಿ ಹೆಣ್ಣೇ ಎಚ್ಚೆತ್ತುಕೊಳ್ಳಬೇಕಿದೆ.ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  11. amazing Chikkadaadru olle sandesha ide

    ReplyDelete
  12. doddamane manjuravare nimma uttama pratikriyege thanks.

    ReplyDelete
  13. howda...shivaprakaash ravare..!dhanyavaadagalu.

    ReplyDelete