Jul 2, 2011

ಅನುಭವದ ಕಾಂತಿ  

ಹಸಿ ಕಟ್ಟಿಗೆ ಹೊಗೆಯಟ್ಟಲು 
ಉಸಿರು  ಕಟ್ಟಿ ಶ್ವಾಸ ಚೆಲ್ಲಿ
ದಗದಗಿಸುವ  ಒಲೆಯುರಿಯಲಿ
ಹಸಿವು ಕುದಿದು ಹದವಾಗಿ
ಕಾದಿಹ ಹಲವು ಹಸಿವುಗಳ  ತಣಿಸಿ

ಭವಿತವ್ಯದ ನಿರೀಕ್ಷೆಯಲಿ
ನಿಟ್ಟುಸಿರು,  ಬಿಕ್ಕಳಿಕೆಯಲಿ,

ಹೊಗೆಯಲ್ಲಿ ಕಂದಿದ
ನಿಸ್ತೇಜ ನೇತ್ರದಲಿ
ಹನಿಗೂಡಿ ಹಳ್ಳ ಹರಿದು
ದಡ ದಾಟಿ ತುಳುಕಿ ಕೆನ್ನೆ ಮೇಲೆ
ಹರಿದ ಕಂಬನಿಗಳೇ ಹಲವು
ಸುಕ್ಕುಗಳಾಗಿ ಕವಲೊಡೆದು
ನಿಸ್ತೇಜ ನರವಾದಾಗ ,
ಅವ್ವನೆನಲು ಅಂಜಿಕೆಯೇ ...????!!!!! .

ಬಳಲಿದ ಜೀವದ  ಬಯಕೆಗಳೆಲ್ಲಾ...
ಅಲಕ್ಷದ ಕಸಬರಿಕೆ ,

ಅಂಗಳದಲ್ಲಿ  ರಂಗೋಲಿ ಇಡಲು  
ಗೋಮೆಯ ಹಳೆ ಹೆಕ್ಕಳಿಕೆಯ  ಹೆಕ್ಕಿ
ಮತ್ತೆ ಮತ್ತೆ ಓರಣಗೊಳಿಸಿ
ಸೋತ ಕೈ ನರಗಳು
ನೂರಾರು ನೆರಿಗೆಯ ಕವಲುಗಳು.

ನಿತ್ಯ  ಗುಡಿಸಿ ಸಾರಿಸಿ
ಕಲ್ಲುಗಳು  ಹಲ್ಲು ಬಿಟ್ಟಂತೆ
ಅಸ್ತಿ ಪಂಜರ... ಬಸಿದ  ಬದುಕು.

ಬರವಿಲ್ಲದ ಕನಸುಗಳಲ್ಲೇ
ಮಾನವತೆಯ  ಧ್ಯಾನಿಸಿ
ಸಹನಾಮುರ್ತಿಯಾಗಿ
ಬದುಕು ಸಹಿಸಿದ
ಸಾವಿರ ಸುಕ್ಕಿಗೂ ... ಸಾಸಿರ ಕಥೆಗಳು .

ಬಯಕೆ ಬತ್ತಿದ  ನಿಸ್ತೇಜ ಕಂಗಳ  
ಅಸಹಾಯಕ  ನೋಟದಲ್ಲೂ
ಮಿಂಚುವ........  
ಸಾಧನೆಯ ಶಾಂತಿ,
ಅನುಭವದ ಕಾಂತಿ.
ಅವಳ ಶ್ರಮಕ್ಕೆ ದಕ್ಕಿದ್ದು
ಆಶ್ರಮದಲ್ಲಿ ವಿಶ್ರಾಂತಿ...........!!!!!!!
*********************

22 comments:

  1. ಕಾಂತಿಯುಕ್ತ ಕವನ...
    ಚೆನ್ನಾಗಿದೆ

    ReplyDelete
  2. ‘ಸಾವಿರ ಸುಕ್ಕಿಗೂ....ಸಾಸಿರ ಕತೆಗಳು’...ಇದು ಮನ ಮಿಡಿಯುವ ಸಾಲು.
    ತಾಳ್ಮೆಯೇ ತಪಸ್ಸು ಎನ್ನುವ ಬದುಕು ಸಾಧನೆಯ ಬದುಕಾಗಬಲ್ಲದು. ಮನದ ಭಾವ ಕವನದಲ್ಲಿ ಕಳೆಗಟ್ಟಿದೆ.

    ReplyDelete
  3. ಸಾಧನೆಯ ಶಾ೦ತಿಗಾಗಿ ಇಡೀ ಬದುಕಿನ ಹೋರಾಟ. ಉತ್ತಮ ಚಿತ್ರಣ ಮೇಡ೦. ಅಭಿನ೦ದನೆಗಳು.

    ಅನ೦ತ್

    ReplyDelete
  4. ಮನ ಮುಟ್ಟಿದ ಕವನ..ಚೆನ್ನಾಗಿದೆ ಮೇಡಂ !!!

    ReplyDelete
  5. ಅವಳ ಶ್ರಮಕ್ಕೆ ಸಿಕ್ಕಿದ್ದು ಆಶ್ರಮದಲ್ಲಿ ವಿಶ್ರಾ೦ತಿ..
    ಮನ ಮಿಡಿಯುತ್ತದೆ...

    ಭಾವ ತು೦ಬಿದ ಕವನ..

    ReplyDelete
  6. saviganasu maneyavare, nimma shriighra haagu uttama pratikriyege aatmiya dhanyavaadagalu.

    ReplyDelete
  7. sunaath sir,nimma arthapoorna pratikriyegaagi aatmiya dhanyavaadagalu.

    ReplyDelete
  8. ananthraaj sir,nimma vichaaraatmaka pratikriyegaagi aatmiya dhanyavaadagalu.

    ReplyDelete
  9. girishsir,namma bhaava nimma manamuttiddakke nanna prayatna ssarthakavenisitu.nimage aatmiya dhanyavaadagalu.

    ReplyDelete
  10. manamuktaravare,nimma
    bhaavanaatmaka pratikriyegaagi
    bhaavapoorna dhanyavaadagalu.

    ReplyDelete
  11. sitaaraam sir nimma
    mecchugege dhanyavaadagalu.

    ReplyDelete
  12. ಒಲೆಯ ಹೊಗೆ, ಮನೆ ಒಪ್ಪ ಓರಣದ ಇಚ್ಛೆ, ಮನಸು, ಮತ್ತು ಕಾಳಜಿ ಹೆಣ್ಣಾಗಿ, ಸೊಸೆಯಾಗಿ, ತಾಯಾಗಿ ಅಜ್ಜಿಯಾಗಿ...ಬಹಳ ಸುಂದರ ಮತ್ತು ಅರ್ಥತುಂಬಿದ ಪದ ಬಳಕೆ.. ತುಂಬಾ ಇಷ್ಟ ಆಯ್ತು ಕವನ..ಮೇಡಂ...

    ReplyDelete
  13. ಎ೦ಥಾ ವಿಪರ್ಯಾಸ! ಮನಸ್ಸನ್ನು ಬಹಳ ಭಾವಪೂರ್ಣಗೊಳಿಸುವ ಸು೦ದರ ಕವನ. ಧನ್ಯವಾದಗಳು ಕಲಾವತಿಯವರೇ.

    ReplyDelete
  14. jalanayana ravare,
    nimma bhaavapoorna
    pratikriyegaagi
    aatmiya dhanyavaadagalu.

    ReplyDelete
  15. prabhaamaniyavare,
    elubilugalemba hekkalikeya hekki
    oranagolisi rangoliyante belagisidavalige siguva baluvali...viparyaasave..sari.nimma bhaavapoorna pratikriyegaagi aatmiya dhanyavaadagalu.

    ReplyDelete
  16. thank u shivaprakaash sir nimma mecchugege.

    ReplyDelete