Sep 26, 2012

ನೀನಾರಿಗಾದೆಯೋ.....????

ನೀನಾರಿಗಾದೆಯೋ.......??????


ನಾನೇ ,ನನ್ನಿಂದಲೇ ,
ನನಗಾಗಿಯೇ ...ಎಂದು
ಗೂಳಿಡುತಾ  ......
ನೀನಾರಿಗಾದೆಯೋ....?
ಬಾಂಧವ್ಯದಲಿ ಸಿಹಿ ಕಾಣದವ
ನೆತ್ತರಲೇ ಸಕ್ಕರೆ ತುಂಬಿಕೊಂಡು
ನಶ್ವರ ಬದುಕ ,ಅಶಾಂತಿಯಲಿ 
ಹೊಟ್ಟೆಯುರಿ ನೊರೆಯುಕ್ಕಿ ,
ಕೋಪೋದ್ರೇಕ ಕೆಂಪಾಗಿ
ನೆತ್ತರು ನುಗ್ಗಿ
ಎದೆಯೊಡೆಯುವ ಮುನ್ನ
ಯೋಚಿಸು ...!!!!!
ನೀನಾರಿಗಾದೆಯೋ ....?


ಓ..... ವಿಕೃತವೇ......!!!!!


ಪಾಪದ ಬಸುರಿಂದ
ಸಂಭ್ರಮಿಸದೇ....
ಪುಣ್ಯದ ಬಂಜೆತನ
ನೀಗಿಸುತಾ....
ಗರ್ಭಪಾತವಾಗಲೀ ...
ವಿಕೃತ ಭಾವ ...
ಹುಡುಕೀ  ತಡಕೀ ...
ಹುಳುಕು  ಅರಸಿ[ನೊಣವನರಸಿ] 
ಹಾಡಿನಗುವ ನಿನ್ನ ಪರೀ ..!!!!!
ನಿನ್ನೊಡಲ ತಂಪನ್ನೇ...
ತಾಪಗೊಳಿಪುದೆಂಬ
ನಗ್ನ ಸತ್ಯವನ್ನೇ...
ಮರೆಯುತಾ....
ನಿಂದಿಸಿ ಸಂತಸಪಡುವಾ  
ಓ .....  ವಿಕೃತವೇ ....
ಹಂದಿಯಿಂದಲೇ.... 
ಕೇರಿ ಶುದ್ಧವೆಂಬುದನೇ....
ಮರೆವೆಯೇಕೆ....?
ಮೆರೆವೇಯೇಕೆ.....?
ಮೊರೆವೆಯೇಕೆ ....?
ವಿಕೃತವನೇ..ತೊರೆದೊಡೆ
ಸುಕೃತವಾ....
ಪಡೆಯದಿಹೆಯಾ ....??
****************

23 comments:

  1. sunath sir nimma
    takshanada pratikriyegaagi
    dhanyavaadagalu.

    ReplyDelete
  2. girish sir nimma
    uttama pratikriyegaagi
    dhanyavaadagalu.

    ReplyDelete
  3. ಮೇಡಮ್,
    ನಿಮ್ಮ ಕವನಗಳ ಭಾವಾರ್ಥಗಳು ಇಷ್ಟವಾಯ್ತು..

    ReplyDelete
  4. "ನೆತ್ತರಲೇ ಸಕ್ಕರೆ ತುಂಬಿಕೊಂಡು" ಸಾಲಿನಲ್ಲಿ ಸಕ್ಕರೆಯನ್ನು ಬೇರೆಯ ಭಾವ ಬರುವಂತೆ ಬರೆದಿದ್ದು ಇಶ್ಟವಾಯ್ತು.....ಇಲ್ಲಿಯ ತನಕ ಸಕ್ಕರೆಯನ್ನು ಸುಖಕ್ಕಾಗಿ ಬಳಸುವುದನ್ನು ನೋಡಿದ್ದೆ..
    ಧನ್ಯವಾದ ಉತ್ತಮ ಬರಹಕ್ಕಾಗಿ..

    ನಮಸ್ತೆ..

    ReplyDelete
  5. shivu sir nimma uttama
    pratikriyegaagi aatmiya dhanyavaadagalu.

    ReplyDelete
  6. chinmay sir nimma
    vivaranaatmaka pratikriyegaagi
    aatmiya dhanyavaadagalu.

    ReplyDelete
  7. ಗಾಢಾರ್ಥದ ನಿಜವನ್ನು ಎಳೆದು ಹೊರಗಿಡುವ ನಿಮ್ಮ ಪದಬಂಧನ ಇಷ್ಟವಾಯಿತು ಕಲರವ ಮೇಡಂ..

    ReplyDelete
  8. jalanayana ravare nimma
    vchaarapoorna pratikriyegaagi
    dhanyavaadagalu.

    ReplyDelete
  9. jalanayana ravare nimma
    vchaarapoorna pratikriyegaagi
    dhanyavaadagalu.

    ReplyDelete
  10. ನೀನಾರಿಗಾದೆಯೋ ಕವನದಲ್ಲಿ ಮನುಜನ ಸ್ವಾರ್ಥ ಮನಸ್ಥಿತಿಯ ಅನಾವರಣವಾಗಿದೆ.

    ಓ..... ವಿಕೃತವೇ, ಕವನವಂತೂ ಅಸಹ್ಯ ಮನೋಧರ್ಮಗಳಿಗೆ ಛಡೀ ಏಟು..

    ಒಳ್ಳೆಯ ಬ್ಲಾಗ್ ನಿಮ್ಮದು.

    ReplyDelete
  11. badarinath sir nimage aathmiya svaagata,mattu nimma uttama pratikriyegaagi mattu nimma mecchugegaagi dhanyavaadagalu.nimma prothsaaha hige irali.

    ReplyDelete
  12. OO vikruthave post nanage thumba ista aithu halavu chinthanegalanna huttuhakuva shakthi aa kavanakkide

    ReplyDelete
  13. pruthviraj ravarige aatmiya svaagata.
    nimma mecchugegaagi dhanyavaadagalu.

    ReplyDelete
  14. ಇರುವ ನಾಲ್ಕು ದಿನ ಕೋಪ ತಾಪ, ಹಿಂಸೆ, ಹೊಟ್ಟೆಯುರಿಪಡುತ್ತಲೇ ವ್ಯರ್ಥ ಮಾಡುತ್ತೇವೆ. ಯಾರಿಗಾದೆವು ಎಂದು ಯೋಚಿಸಿದರೆ ಉತ್ತರವೇ ಇಲ್ಲ

    ReplyDelete
  15. deepasmitaravare nimage aatmiya svaagat.
    nimma uttama pratikriyegaagi dhanyavaadagalu.

    ReplyDelete
  16. Kavanagala blogannu bittu elli hodiri madam ? !! blogalli hosa postugale illa ? ..

    ReplyDelete
  17. prashastiyavare nammannu
    nenapisikondu pratikriyisiddaakkaagi
    dhanyavaadagalu.saagaradinda
    iijuttaa mele baralu prayatnisuttiddene,
    khandita sadhyadalle baruttene.namaskaara.

    ReplyDelete
    Replies
    1. ಭವಸಾಗರವೋ? ಭಾವಸಾಗರವೋ? ಅನುಭಾವ ಸಾಗರವೋ? ಈಜು ಎತ್ತ ಸಾಗಿದೆ? ನಿಮ್ಮ ನಂಬಿಕೆಯಂತೆ ದಡ ಹತ್ತಿರ ಬಂದಿದೆಯಾ? ಅಥವಾ ಮಧ್ಯದಲ್ಲಿದ್ದೀರೋ? ಅಂದಹಾಗೆ ಈಜುತ್ತಿದ್ದೀರಾ? ಅಥವಾ ಸಾಗಲು ದೋಣಿ ಸಿಕ್ಕಿದೆಯೇ? ಸಿಕ್ಕಿದ್ದರೆ ಆದೋಣಿಯೊಳಗೆ ನೀರು ಬರದಂತೆ ನೋಡಿಕೊಳ್ಲಬೇಕಲ್ಲಾ! ಬಲು ಕಷ್ಟ....ಆದರೂ ಮನಸ್ಸು ಮಾಡಿದರೆ ಎಂತಾ ಸಾಗರವನ್ನೂ ದಾಟಬಹುದು.ಎಲ್ಲೆಲ್ಲಿ ಎಚ್ಚರ ವಹಿಸಬೇಕೋ ಅಲ್ಲಲ್ಲಿ ಎಚ್ಚರ ಮಾತ್ರ ಬೇಕು.ಏನಂತೀರಾ?

      Delete
  18. sridhar sir nimma Athmiya abhiprayagalige dhanyavadagalu.badukina saagarakke antyavembudillavaddarinda Ejuttirabeku kadevaregu,mulugadante.EJODU.

    ReplyDelete
  19. prashastiyavare abhimanadinda
    kayuttiruvudakkaagi Athmiya dhanyavaadagalu.

    ReplyDelete