Jul 6, 2014

ಸುಲೋಚನೇ...  ನಿನ್ನದೇ  ಯೋಚನೆ ..... ????


ಜನ್ಮಜಾತ ಜ್ಯೋತಿಯ
ಬಾಲನೇತ್ರ ನ್ಯೂನತೆ
ಅಂತೆ ಬೆಳೆದು ಮುನ್ನಡೆಯೇ
ಉದರಪೋಶ ಅಕ್ರಮ
ಪೌಷ್ಠಿ ಕಾಂಶ ಸೋನ್ನೆಯಾಗೆ
ಅಕ್ರಮವೇ ಸಕ್ರಮ
ಅರ್ಧ ಶತಕ ಸವೆದ ಬಳಿಕ
ಅಭಾಗ್ಯತನ ಅಳತೆ
ಅಂತು ಇಂತು ಕುಂದು ಬಂತು
ನಿಮೀಲ ನೇತ್ರ ಜ್ಯೋತಿಗೆ
ಮಬ್ಬು ಮುಸುಗಿ  ಕತ್ತಲಡರಿ
ತಡಕಾಡಿ ಹುಡುಕುವವು
ಸ್ಪಷ್ಟ ಜಗವ ಕಾಣಲು
ದೃಷ್ಠಿ ಬಾಧೆ  ಕಳೆಯಲು
ನೇತ್ರ ತಜ್ಞ ರೊಡೆಯನಾ
ಮುಖಾರವಿಂದ ದೊಡವೆಯ
ಧರಿಸಲೇಕೋ ಕಸಿವಿಸಿ  
ಕಸಿಯಲೆಲ್ಲ ಮಂಜು ಕವಿತೆ
ಧರಿಸಲು ಹಿಂಜರಿಯಲು
ವಿಶ್ವವೆಲ್ಲ ಮಸಿಮಸಿ
ಸುಲೋಚನೆಯ  ಮರೆತರೆ
ಆತಂಕವೇ ಜೀವನ
ಮರೆತಂತೆಯೇ ಚೇತನಾ 

2 comments:

  1. ಕಲಾವತಿಯವರೆ,
    ಒಗಟಿನಂತೆ ಕಾಣುವ ಈ ಕವನಕ್ಕೆ ಹರಿಯುವ ತೊರೆಯಂತಹ ಗತಿಯಿದೆ. ಶೀರ್ಷಿಕೆಯಲ್ಲಿಯೇ ನೀವು ಕವನದ ಅರ್ಥವನ್ನು ಸೂಚಿಸಿದ್ದರೂ ಸಹ ಎರಡನೆಯ ಸಲ ಓದಿದಾಗಲೇ ನನಗೆ ಸ್ಪಷ್ಟವಾಗಿ ‘ಕಾಣಿಸಿತು’. ಚತುರವಾದ ರಚನೆಯಿಂದ ಕೂಡಿದ ಕವನ. ಅಭಿನಂದನೆಗಳು.

    ReplyDelete
  2. sunath sir nimma vcharapoorna pratikriyegagi
    aathmiya dhanyavaadagalu.

    ReplyDelete