Jan 4, 2015

ಹೊಂಬಾಳೆ 


ನಗೆಹೊಗೆಯಾಗಿ ದಗೆಯಾಡುವಾಗ
ಒಳಗೆ ಸೆಳೆದಾವೋ ಸುಳಿಗಾಳಿ
ಹೊರಗೆ ಜಡಿಮಳೆ ಒಳಗೆ ದಗೆ ,
ಮೋಡ ಬಿಸಿಯಾಗಿ ಮಳೆ ಸುರಿಯೆ  ,
ಜಗತೊಯ್ದು  ಕೊಚ್ಚಿ ಹೋದಿಯೇ  ,

ತಾಳಲಾರದ ಬೇಗೆ
ಬೇಗೆ ತಾಗೆ ಸೋನೆ ಕೂಗೆ  
ಗುಡುಗು ಸಿಡಿಲ ಆರ್ಭಟಕ್ಕೆ
ಬೆದರಿ ಬೇಗೆಗಡಗುವೆ.

ಸಕಲವಲ್ಲವನ್ಎಂದು ಮೆರೆದು 
ಸಸಿಯಲೂ  ಕಲಿವುದಿದೆ 
ಎಂದರಿಯದೇ   
ಕುಬ್ಜವಾಗದಿರು ಮನವೇ

ಭಂದಗಳಲಿ ಸೌಗಂಧವಿರಲಿ  
ದುರ್ಗಂಧಗಳ ಸಹಿಸದೆ
ಕ್ಷಣದಲೇ ಕಾರುವ ಅಸಹನೆ ,
ಹೊತ್ತು ನಿಷ್ಟುರಗಳ ಹೊರೆ ,
ಹುಡಿಕಿ ಹೊರಟಿದೆ ವಿವೇಚನೆಯ ಸಿರಿ ,

ಹೊಣೆಗಾರಿಕೆಯ ಹೊಂಬಾಳೆ
ಮದುವೆಯ ಮುಂಬಾಳೆ,

ಭಾವ ಕೋಶವಿರದವಗೆ 
ಬಂಧಕೋಶವೇ...?

ಮಾಗಿದ ಮನಗಳ ಹೆಣಗಾಟ 
ಬಂಧಗಳ   ಬೆಸೆತಕೆ  ,
ಮಾಗದ ಮನಗಳ ಸೆಣೆಸಾಟ 
ಬಂಧಗಳ   ಕಸಿತಕೆ  

ಸಂಬಂಧಗಳ   ನೆನಪು  ಸಂಕಟಕೆ  ,
ಮರೆತು ಮೆರೆವುದು ಸಂತಸಕೆ.

2 comments:

  1. ‘ಭಾವ ಕೋಶವಿರದವಗೆ
    ಬಂಧಕೋಶವೇ...?’
    -ಇದು ತುಂಬ ಸುಂದರವಾದ, ಸಾರ್ಥಕ ಸಾಲು! ಕವನ ಮುದ್ದಾಗುವುದೇ ಇಂಥ ಸಾಲುಗಳಿಂದ!

    ReplyDelete
  2. sir nimma protsaahakara pratikriyegaagi tumbaa dhanyavaadagalu.

    ReplyDelete